ದಾವಣಗೆರೆ: ಇಂದಿನಿಂದ ಗ್ಲಾಸ್‌ಹೌಸ್‌ನಲ್ಲಿ ಫಲಪುಷ್ಪ ಪ್ರದರ್ಶನ ಈ ಬಾರಿಯ ವಿಶೇಷತೆ ಏನು..?
ದಾವಣಗೆರೆ, ನವೆಂಬರ್ 13: ದಾವಣಗೆರೆ ನಗರದ ಕುಂದುವಾಡ ಕೆರೆ ಬಳಿಯಿರುವ ಗಾಜಿನ ಮನೆಯಲ್ಲಿ ಇಂದಿನಿಂದ ನ.16 ರವರೆಗೆ ಫಲ ಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿ ಚಂದ್ರಯನ-3 ವಿಶೇಷತೆ ಇದೆ.
ಫಲಪುಷ್ಪ ಪ್ರದರ್ಶನ -2023ವನ್ನು ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಾವಣಗೆರೆ, ಜಿಲ್ಲಾ, ತೋಟಗಾರಿಕೆ ಸಂಘ ಮತ್ತು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಫಲಪುಪ್ಪ ಪ್ರದರ್ಶನದಲ್ಲಿ 10 ಸಾವಿರ ನಾನಾ ಪ್ಲಾಂಟ್‍ಗಳ ಮತ್ತು ಲಕ್ಷಾಂತರ ಹೂವುಗಳಲ್ಲಿ ಅನೇಕ ಕಲಾಕೃತಿಗಳು ಅರಳಿವೆ. ಮತ್ತು ರೈತರು ಬೆಳೆದ ವಿವಿಧ ಹಣ್ಣುಗಳು, ತರಕಾರಿ ಪ್ರದರ್ಶನ ಇರಲಿವೆ.

ಈ ಬಾರಿಯ ಫಲಪುಪ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ದಿಪಡಿಸಿ 14 ಜುಲೈ 2023 ರಂದು ಉಡಾವಣೆ ಮಾಡಿದ ಚಂದ್ರಯಾನ-3 ಕಲಾಕೃತಿ. ಇದರಲ್ಲಿ ಒಟ್ಟು 3 ಲಕ್ಷ ಹೂವುಗಳನ್ನು ಬಳಕೆ ಮಾಡಲಾದೆ.
3 ಲಕ್ಷ ಹೂವುಗಳಲ್ಲಿ ಚಂದ್ರಯಾನ
ಚಂದ್ರಯಾನ-3 ರ 25 ಅಡಿ ಎತ್ತರದ ಹಾಗೂ 11 ಅಡಿ ಅಗಲದ ಪಿಎಸ್‍ಎಲ್‍ವಿ ಪಾಪುಲೇಷನ್ ಮಾಡಲ್, 9 ಅಡಿ ಎತ್ತರದ ವಿಕ್ರಂ ಲ್ಯಾಂಡರ್ , ಪ್ರಗ್ನ್ಯಾನ್ ರೋವರ್‍ಗಳು ಹೂವಿನಿಂದ ಅಲಂಕರಿಸಲಾಗಿದೆ. ಇದಕ್ಕಾಗಿ 2 ಲಕ್ಷ ಸೇವಂತಿಗೆ, 50 ಸಾವಿರ ಕೆಂಪು ಗುಲಾಬಿ ಮತ್ತು 20 ಸಾವಿರ ಆರ್ಕಿಡ್ಸ್, ಕಾರ್ನೇಷನ್, ಅಂತೋರಿಯಮ್ಸ್, ಲಿಲ್ಲೀಸ್ ಮತ್ತು ಜಿಪ್ಸೋಪಿಲಾ ಸೇರಿ ಒಟ್ಟು 3 ಲಕ್ಷ ಹೂವುಗಳ ಬಳಕೆಯಾಗಲಿದೆ.
ಇದಲ್ಲದೆ 46 ಬಗೆಯ 15 ಸಾವಿರಕ್ಕೂ ಹೆಚ್ಚು ವಿವಿಧ ಅಲಂಕಾರಿಕ ಮತ್ತು ಹೂವಿನ ಗಿಡಗಳ ವಿವಿಧ ಕಲಾತ್ಮಕ ವಿನ್ಯಾಸದ ಜೋಡಣೆಯನ್ನು ಮಾಡಲಾಗಿದೆ.

ಸಾಲ್ವಿಯಾ, ಪೆಟುನಿಯಾ, ಬೆಗೋನಿಯಾ, ಟೋರೆನಿಯಾ, ಜಿನಿಯಾ, ಸೇವಂತಿಗೆ, ಚೆಂಡು ಹೂವು, ಪೆಂಟಾಸ್, ಸೆಲೋಸಿಯಾ, ಡೇರೆ ಹೂವು, ಡಯಾಂಥಸ್, ಬಾಲ್ಸಮ್, ಸ್ಟ್ರೋ ಬಿಲಾಂಥಸ್, ಗೆಜೆನಿಯಾ, ಟೆಕೋಮಾ, ಅಡೇನಿಯಮ್, ಸೇಡಮ್, ಕೋಲಿಯಸ್, ವರ್ಬೆನಾ, ಕೆಂಪು ಕೋಲಿಯಸ್, ಪೆಡಿಲಾಂತಸ್, ಅಕಲಿಫಾ, ಕ್ರೋ ಟನ್, ಡ್ರೆಸಿನಾ ವೇರಿಗೆಟ, ಫೈಕಸ್ ಸ್ನೇಕ್‍ಪ್ಲಾಂಟ್, ಅಗ್ಲೋನೆಮಾ, ನೆಫೋರೀಲೆಪಿಸ್ ಫರ್ನ್, ಸ್ಕಫ್ಲೇರಿಯಾ, ಡ್ರೆಸಿನಾ ರಿಫ್ಲೇಕ್ಸ್, ಕೆಂಪು ಡ್ರೆಸಿನಾ, ಕ್ಯಾಕ್ಟಸ್, ಅಗ್ಲೊನಿಮಾ, ರಿಬ್ಬನ್ ಗ್ರಾಸ್, ಅರೆಕಾ ಪಾಮ್, ಬೌಗೆನ್ವಿಲ್ಲೆ ಕಾಗದ ಹೂವು, ಟೇಬಲ್ ಪಾಮ್ ಮತ್ತು ಸಾಗೊ ಪಾಮ್‌ಗಳನ್ನು ಬಳಸಲಾಗಿದೆ.
ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ'ನಮ್ಮ ಕರ್ನಾಟಕ' ರಾಜ್ಯದ ಭೂಪಟವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದವರಿಂದ ರಾಜ್ಯೋತ್ಸವದ ವಿಷಯ ಕೇಂದ್ರಿಕರಿಸಿ ನಾನಾ ಚಿತ್ರಕಲೆ, ಶಿಲ್ಪಕಲಾಕೃತಿಗಳು ಮತ್ತು ಕೆತ್ತನೆಗಳು ಪ್ರದರ್ಶನದಲ್ಲಿ ಇರಲಿವೆ. 16 ಅಡಿ ಎತ್ತರದ ಹಾಗೂ 10 ಅಡಿ ಅಗಲದ ಶಿವನಂದಿಯ ಕಲಾಕೃತಿಯ ರಚನೆ ಮಾಡಲಾಗಿದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಪ್ರತಿಭಾನ್ವಿತ ಕಲಾವಿದರಿಂದ ಡೊಳ್ಳು ಕುಣಿತ, ನಾದಸ್ವರ ಮತ್ತು ಸುಗಮ ಸಂಗೀತ, ಅನುಶ್ರೀ ಸಂಗೀತ ಶಾಲೆಯ ಮಕ್ಕಳ ನಾಡುನುಡಿ ಗಾಯನಕ್ಕೆ ಕಲಾವಿದರು ಸ್ಥಳದಲ್ಲಿಯೇ ವರ್ಣರಂಜಿತ ಚಿತ್ರ ರಚನೆ ಮತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.

ಗಾಜಿನ ಮನೆಗೆ ವಿದ್ಯುತ್ ದೀಪಾಲಂಕಾರ
ಗಾಜಿನ ಮನೆಯ ಉದ್ಯಾನವನದ ಆವರಣದಲ್ಲಿ ಅಪರೂಪದ ಅಲಂಕಾರಿಕ ಮರಗಳನ್ನು ನಾಟಿ ಮಾಡಿರುವುದು ತಿಳಿದ ವಿಷಯವಾಗಿರುತ್ತದೆ. ಈ ಎಲ್ಲಾ ಮರಗಳಿಗೆ ಮತ್ತು ಗಾಜಿನ ಮನೆಯ ಒಳಗಿನ ಭಾಗಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರ ಮಾಡಿ ಕಾರ್ಯಕ್ರಮ ಸೊಬಗನ್ನು ಇಮ್ಮಡಿಗೊಳಿಸಲಾಗಿದೆ. ಇದಲ್ಲದೇ ಮಕ್ಕಳಿಗೆ ವಿವಿಧ ಆಟಗಳ ಜೊತೆಗೆ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳನ್ನೂ ಸಹ ನಿರ್ಮಿಸಲಾಗಿದೆ.
7 ಅಡಿ ಎತ್ತರದ ಭಾರತ ಭೂಪಟದ ವಿನ್ಯಾಸ, 8 ಅಡಿ ಎತ್ತರದ ಹೂವಿನ ಕಲಾಕೃತಿಯನ್ನು ಮತ್ತು 10 ಅಡಿ ಎತ್ತರದ 5 ಸಾವಿರಕ್ಕೂ ಹೆಚ್ಚು ವಿವಿಧ ಬಣ್ಣದ ಸೇವಂತಿಗೆ ಹೂವುಗಳು ಮತ್ತು 2 ಸಾವಿರ ಗುಲಾಬಿ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳ ತೋಟಗಾರಿಕೆ ಬೆಳೆಗಾರರು ಬೆಳೆದ ವಿವಿಧ ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಸಾಂಬಾರು ಮತ್ತು ತೋಟದ ಬೆಳೆಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ. ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಬರುವ ಸಾರ್ವಜನಿಕರಿಗೆ ಇಂದಿನಿಂದ 16 ರವರೆಗೆ ಪ್ರತಿ ದಿನ ಸಂಜೆ ಸಂಗೀತ ಕಾರಂಜಿಯ ಪ್ರದರ್ಶನ ಇರುತ್ತದೆ.
ಸಾರ್ವಜನಿಕ ಪ್ರವೇಶ ಶುಲ್ಕವು ಪ್ರತಿ ದಿನದ ಸಂಗೀತ ಕಾರಂಜಿಯ ಪ್ರದರ್ಶನವಿರುವುದರಿಂದ ವಯಸ್ಕರಿಗೆ ರೂ. 30 ಮತ್ತು ಮಕ್ಕಳಿಗೆ ರೂ. 10 ನಿಗದಿಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ವರೆಗೆ ವೀಕ್ಷಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಜಿ.ಸಿ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications