• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಮನೂರು ಶಿವಶಂಕರಪ್ಪ ಟ್ರಸ್ಟಿನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ

|

ದಾವಣಗೆರೆ, ಜುಲೈ 25: ಕರ್ನಾಟಕದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುವ ಆಶಯದಿಂದ 'ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್', ವಿದ್ಯಾರ್ಥಿ ವೇತನ ಬಯಸುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ದಾವಣಗೆರೆಯ ಹಿರಿಯ ಉದ್ಯಮಿ, ಉದಾರ ದಾನಿ, ಮಾಜಿ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ
ಸಚಿವ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ನಾಲ್ಕು ದಶಕಗಳ ಕಾಲದ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶ0ಕರಪ್ಪ ಅವರ ಹೆಸರಿನಲ್ಲಿ 'ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್' ರೂಪಗೊಂಡಿದೆ.

ದೆಹಲಿ ಅಕಾಡೆಮಿಯಿಂದ ಪ್ರತಿಭಾವಂತ ವೈದ್ಯವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ದೆಹಲಿ ಅಕಾಡೆಮಿಯಿಂದ ಪ್ರತಿಭಾವಂತ ವೈದ್ಯವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್

ಕರ್ನಾಟಕದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುವ ಆಶಯ ಹೊಂದಿದೆ. ಕಳೆದ ಏಳು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಹಿಂದಿನ ವರ್ಷ ಸುಮಾರು 900 ವಿದ್ಯಾರ್ಥಿ ವೇತನಗಳನ್ನು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ.

ಜನಕಲ್ಯಾಣ ಟ್ರಸ್ಟ್ ನಿಂದ, ಪಿಯುಸಿ ಐ.ಟಿ.ಐ, ಡಿಪ್ಲೋಮಾ/ಪದವಿ ಕಾಲೇಜು/ವೃತ್ತಿ ಶಿಕ್ಷಣ ಕಾಲೇಜು/ಕಾನೂನು ಕಾಲೇಜು/ಮ್ಯಾನೇಜ್‍ಮೆಂಟ್ ಮತ್ತು ಇತರೆ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ 2019-20 ರ ಶೈಕ್ಷಣಿಕ ಅವಧಿಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಆಯಾ ಕಾಲೇಜುಗಳ ವಾರ್ಷಿಕ ಶುಲ್ಕಕ್ಕೆ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ನೀಡಲಿದೆ.

ಯಾರು ಅರ್ಜಿ ಸಲ್ಲಿಸಬಹುದು?: ವಿದ್ಯಾರ್ಥಿ ವೇತನವನ್ನು ನಿರೀಕ್ಷಿಸುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಆಯಾ ಶಾಲಾ/ಕಾಲೇಜುಗಳ ಮುಖ್ಯಸ್ಥರ ಮೂಲಕ ಕ್ರಮಬದ್ಧವಾದ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದಲ್ಲದೆ ವಿದ್ಯಾರ್ಥಿ ವೇತನವನ್ನು ನಿರೀಕ್ಷಿಸುವ ದಾವಣಗೆರೆ ಜಿಲ್ಲೆಯ ಪತ್ರಕರ್ತರ/ಮಾಧ್ಯಮದವರ/ಪತ್ರಕರ್ತರ ಮತ್ತು ಮಾಧ್ಯಮ ಛಾಯಾಗ್ರಾಹಕರ ಮಕ್ಕಳ ಆಯಾ ಶಾಲಾ/ಕಾಲೇಜುಗಳ ಮುಖ್ಯಸ್ಥರ ಮೂಲಕ ಕ್ರಮಬದ್ಧವಾದ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿತ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಟ್ರಸ್ಟಿನ ವೆಬ್ ತಾಣ ಎಸ್ಎಸ್ ಜನ ಕಲ್ಯಾಣ್ ಟ್ರಸ್ಟ್ .ಆರ್ಗ್ ಸಂಪರ್ಕಿಸಬಹುದು.

ಅರ್ಜಿಗಳನ್ನು ದಿನಾಂಕ 01.07.2019 ರಿಂದ 31.08.2019ರೊಳಗೆ ಮಾತ್ರ ಸಲ್ಲಿಸಬಹುದು ಎಂದು ಡಾ. ಶಾಮನೂರು ಶಿವಶಂಕರಪ್ಪ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಜಸ್ಟೀಸ್ ಶಿವರಾಜ ಪಾಟೀಲರ ಹೆಸರಿನಲ್ಲಿ ಹೊರಡಿಸಲಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Davanagere businessman, former minister Dr. Shamanur Shvivashankarappa's JanaKalyana Trust has invited application from economically backward student across Karnataka for scholarship based on annual institution fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X