ದಾವಣಗೆರೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಬೆದರಿಕೆ ಹಾಕಿದ್ದವರ ಬಂಧನ

ದಾವಣಗೆರೆ, ಮೇ 18: ಕೋಮು ದ್ವೇಷ ಹರಡುವ ವಿಡಿಯೋ ಒಂದು ದಾವಣಗೆರೆ ನಗರದಲ್ಲಿ ಶನಿವಾರ ವೈರಲ್ ಆಗಿತ್ತು. ಈ ಸಂಬಂಧ ಅಶಾಂತಿ ವಾತಾವರಣ ಸೃಷ್ಠಿಯ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

Recommended Video

      ಕಬ್ಬನ್ ಪಾರ್ಕ್ ಅಂದ್ರೆ ದೇವೇಗೌಡ್ರಿಗೆ ಬಹಳ ಇಷ್ಟ..! | YSV Datta about Deve Gowda

      ಈ‌ ಘಟನೆಗೆ ಸಂಬಂಧಿಸಿದಂತೆ ಸಯ್ಯದ್ ಮೊಹಮ್ಮದ್ (24), ಫಯಾಜ್ ಅಹ್ಮದ್ (32) ಎಂಬ ಇಬ್ಬರು ಯುವಕರನ್ನು ಕೆಟಿಜೆ ನಗರ ಪಿಎಸ್ಐ ವೀರೇಶ್ ನೇತೃತ್ವದ ತಂಡ ಬಂಧಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

      ಕೆಲವು ಮುಸ್ಲಿಂ ಯುವಕರು ದಾವಣಗೆರೆ ನಗರದ ಎವಿಕೆ ರಸ್ತೆಯಲ್ಲಿರುವ ಬಿ.ಎಸ್ ಚನ್ನಬಸಪ್ಪ ಬಟ್ಟೆ ಅಂಗಡಿಯಲ್ಲಿ ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ಖರೀದಿಸಿ ಹೊರ ಬರುವಾಗ ಅದೇ ಕೋಮಿನ ಮಹಿಳೆಯರನ್ನು ನಡು ರಸ್ತೆಯಲ್ಲೇ ತಡೆದು ಹೊಸ ಬಟ್ಟೆಯ ಕೇಸರಿ ಬ್ಯಾಗ್ ಕಸಿದುಕೊಂಡು ಆ ಬ್ಯಾಗ್ ನಿಂದ ಹೊಸ ಬಟ್ಟೆ ಬೇರ್ಪಡಿಸಿದ್ದಾರೆ.

      Arrest Of Those Who Threatened To Muslim Women In Davanagere

      ಅಂಗಡಿಯಿಂದ ಹೊಸ ಬಟ್ಟೆಗಳನ್ನು ಖರೀದಿಸಬಾರದೆಂದು ಸಮಾಜದ ಮುಖಂಡರು ಹೇಳಿಲ್ವಾ? ಏತಕ್ಕಾಗಿ ಬಟ್ಟೆ ಖರೀದಿಗೆ ಬಂದಿದ್ದೀರಿ ಎಂದು ಯುವಕರ ಗುಂಪು ಗದರಿಸಿದ್ದು, ಮತ್ತು ಆ ವಸ್ತುಗಳನ್ನು ಹಿಂದಿರುಗಿಸುವಂತೆ ಖರೀದಿಸಿದವರಿಗೆ ಒತ್ತಾಯಿಸಿದ ಘಟನೆಯ ವಿಡಿಯೋ ಶನಿವಾರ ವೈರಲ್ ಆಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+