ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್‌ ಸಂಖ್ಯೆ 45ಕ್ಕೆ ಏರಿಕೆ

|
Google Oneindia Kannada News

ದಾವಣಗೆರೆ, ಅಕ್ಟೋಬರ್ 27 : ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್‌ಗಳ ಸಂಖ್ಯೆ 41 ರಿಂದ 45ಕ್ಕೆ ಏರಿಕೆಯಾಗಿದೆ. 2011ರ ಜನಗಣತಿ ವರದಿ ಆಧಾರದ ಮೇಲೆ ವಾರ್ಡ್‌ಗಳನ್ನು ಮರುವಿಂಗಡನೆ ಮಾಡಲಾಗಿದೆ.

ವಾರ್ಡ್‌ಗಳನ್ನು ಮರು ವಿಂಗಡನೆ ಮಾಡಿ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಯಾವುದೇ ಆಕ್ಷೇಪಣೆ ಬಾರದ ಹಿನ್ನಲೆಯಲ್ಲಿ ನೂತನ ವಾರ್ಡ್‌ಗಳು ರಚನೆಯಾಗುವುದು ಖಚಿತವಾಗಿದೆ.

ದಾವಣಗೆರೆಯ ಸೂಳೆಕೆರೆ ಭರ್ತಿ, ಬಾಗಿನ ಅರ್ಪಣೆದಾವಣಗೆರೆಯ ಸೂಳೆಕೆರೆ ಭರ್ತಿ, ಬಾಗಿನ ಅರ್ಪಣೆ

Davanagere mahanagara palike to have 45 wards soon

ವಾರ್ಡ್‌ಗಳ ಮರು ವಿಂಗಡನೆ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಗೆ ಯಾವುದೇ ಹೊಸ ಸ್ಥಳಗಳನ್ನು ಸೇರಿಸಿಲ್ಲ. ಹೆಚ್ಚು ಜನಸಂಖ್ಯೆ ಹೊಂದಿರುವ ವಾರ್ಡ್‌ಗಳನ್ನು ವಿಭಜನೆ ಮಾಡಲಾಗಿದೆ. ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳನ್ನು ಈಗಾಗಲೇ ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ದಾವಣಗೆರೆ: ಐತಿಹಾಸಿಕ ಪುಷ್ಕರಣಿ ಸ್ವಚ್ಛಗೊಳಿಸಿದ ಜಿಪಂ ಸಿಇಒ ಅಶ್ವತಿದಾವಣಗೆರೆ: ಐತಿಹಾಸಿಕ ಪುಷ್ಕರಣಿ ಸ್ವಚ್ಛಗೊಳಿಸಿದ ಜಿಪಂ ಸಿಇಒ ಅಶ್ವತಿ

ವಾರ್ಡ್‌ ವಿಭಜನೆ : 4 ಮತ್ತು 8ನೇ ವಾರ್ಡ್‌ಗಳನ್ನು ಎರಡು ವಾರ್ಡ್‌ಗಳಾಗಿ ವಿಭಜನೆ ಮಾಡಲಾಗಿದೆ. 36 ಮತ್ತು 37ನೇ ವಾರ್ಡ್‌ಗಳನ್ನು ಒಗ್ಗೂಡಿಸಿ ಮೂರು ವಾರ್ಡ್‌ಗಳಾಗಿ ವಿಭಜನೆ ಮಾಡಲಾಗಿದೆ. 40 ಮತ್ತು 41 ನೇ ವಾರ್ಡ್‌ಗಳನ್ನು ಮೂರು ವಾರ್ಡ್‌ಗಳಾಗಿ ಮಾರ್ಪಾಡು ಮಾಡಲಾಗಿದೆ.

ಅಭಿವೃದ್ಧಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಾರ್ಡ್‌ಗಳನ್ನು ಮರು ವಿಂಗಡನೆ ಮಾಡಲಾಗಿದೆ. ಜನಸಂಖ್ಯೆ ಇರುವ ವಾರ್ಡ್‌ಗಳನ್ನು ವಿಭಜನೆ ಮಾಡಿರುವುದರಿಂದ ಮೂಲ ಸೌಲಭ್ಯಗಳನ್ನು ಒದಗಿಸಲು ಸಹಾಯಕವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

English summary
Davanagere mahanagara palike will have 45 wards. According to 2011 census report wards re-categorized from 41 to 45.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X