ಮರುಳಸಿದ್ದೇಶ್ವರ ರಥೋತ್ಸವ ಹಾಗೂ ಸರ್ವ ಶರಣ ಸಮ್ಮೇಳನಕ್ಕೆ ಚಾಲನೆ

Posted By:
Subscribe to Oneindia Kannada

ದಾವಣಗೆರೆ, ಏಪ್ರಿಲ್ 11: ದಾವಣಗೆರೆ ತಾಲ್ಲೂಕು ಆನಗೋಡು ಶ್ರೀ ಮರುಳಸಿದ್ದೇಶ್ವರ ರಥೋತ್ಸವ ಹಾಗೂ ಸರ್ವ ಶರಣ ಸಮ್ಮೇಳನಕ್ಕೆ ಮಂಗಳವಾರ ಸಂಜೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಚಾಲನೆ ಸಿಕ್ಕಿದೆ. ಬುಧವಾರ ರಾತ್ರಿ 8 ಗಂಟೆಗೆ ಓಕಳಿ ಏರ್ಪಡಿಸಲಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿ ಜಿ. ನಿಜಲಿಂಗಪ್ಪ ತಿಳಿಸಿದ್ದಾರೆ.

ಹೆಮ್ಮನಬೇತೂರಿನಲ್ಲಿ ರಥೋತ್ಸವ : ದಾವಣಗೆರೆ ತಾಲ್ಲೂಕು ಹೆಮ್ಮನಬೇತೂರು ಗ್ರಾಮದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ ಮಂಗಳವಾರ ಸಂಜೆ 6 ಗಂಟೆಗೆ ವಿಜೃಂಭಣೆಯಿಂದ ಜರುಗಿದೆ.

ಮುಚ್ಚನೂರಿನಲ್ಲಿ ಮರುಳಸಿದ್ದೇಶ್ವರ ತೇರು: ಜಗಳೂರು ತಾಲ್ಲೂಕು ಬಿಳಿಚೋಡು ಹೋಬಳಿಯ ಮುಚ್ಚನೂರು ಗ್ರಾಮದಲ್ಲಿ ರಥೋತ್ಸವದ ಅಂಗವಾಗಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಸ್ವಾಮಿಗೆ ಕಂಕಣಧಾರಣೆ, ಅರಿಶಿಣ ಎಣ್ಣೆ ಹಾಕುವುದು. ಮದುಮಗನ ಮಾಡುವುದು, ಗ್ರಾಮಸ್ಥರು ಮತ್ತು ಭಕ್ತರು ಸೇರಿಕೊಂಡು ಸ್ವಾಮಿ ಬಾವುಟ, ಹೂವಿನ ಹಾರ, ಅಂತರಕಾಯಿ ಹರಾಜು ನಂತರ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವ ಜರುಗಿದೆ.

Davanagere Anagod Marulasiddeshwara Rathotsava Jathre

ಪಾನಕ ಸೇವಾ ಕೇಂದ್ರ ಉದ್ಘಾಟನೆ: ಶ್ರೀಮರುಳಸಿದ್ದೇಶ್ವರ ರಥೋತ್ಸವದ ಅಂಗವಾಗಿ ಭಕ್ತರಿಗಾಗಿ ಹೆಚ್.ಕೆ. ಬಸವರಾಜ್ ಮತ್ತು ಸ್ನೇಹ ಬಳಗದವರ ವತಿಯಿಂದ ಪಾನಕ ಸೇವಾ ಕೇಂದ್ರದ ಉದ್ಘಾಟನೆಯಾಗಲಿದೆ. ಮಾಜಿ ರಾಜ್ಯಸಭಾ ಸದಸ್ಯ ಕೆ.ಆರ್. ಜಯದೇವಪ್ಪ ಕೇಂದ್ರ ಉದ್ಘಾಟಿಸುವರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಕೆ. ಬಸವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.

ದೇವಸ್ಥಾನದ ನೂತನ ಕಲ್ಲಿನ ಕಟ್ಟಡದ ಗರ್ಭಗುಡಿ ಮುಕ್ತಾಯ ಹಂತದಲ್ಲಿದೆ. ಪ್ರಾಂಗಣದ ಕೆಲಸದ ಬುನಾದಿ ಮುಗಿದಿದ್ದು, ಮೇಲ್ಬಾಗ ನಿರ್ಮಾಣ ಆಗಬೇಕಿರುತ್ತದೆ. ಇದೇ ರೀತಿ ಶ್ರೀ ಮರುಳಸಿದ್ದೇಶ್ವರ ಸಮುದಾಯ ಭವನ ಕಟ್ಟಡ ಪೂರ್ಣಗೊಂಡಿರುತ್ತದೆ. ಭಕ್ತಾದಿಗಳ ಸಹಕಾರವಿಲ್ಲದೆ ಯಾವ ಕೆಲಸವೂ ಪರಿಪೂರ್ಣವಾಗಿ ಆಗುವುದಿಲ್ಲ ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿ ಜಿ. ನಿಜಲಿಂಗಪ್ಪ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Davanagere district Anagod Marulasiddeshwara Rathotsava Jathre and Sarva Sharana Sammelana inaugurated by Dr. Shivamurthy Shivacharya Seer on April 11 evening.
Please Wait while comments are loading...