5 ವರ್ಷ ಪ್ರೀತಿ ಮಾಡಿ ಕೈ ಕೊಟ್ಟ ಪ್ರಿಯಕರ: ಯುವತಿಯ ಪ್ರತಿಭಟನೆ

ದಾವಣಗೆರೆ, ಜುಲೈ 13: ಮದುವೆ ಆಗುವುದಾಗಿ ನಂಬಿಸಿ ಐದು ವರ್ಷಗಳ ಕಾಲ ಪ್ರೀತಿಸಿ ಕೈ ಕೊಟ್ಟ ಪ್ರಿಯಕರನ ಮನೆ ಮುಂದೆ ಯುವತಿ ಮತ್ತು ಆಕೆಯ ಅಣ್ಣ ಪ್ರತಿಭಟನೆ ನಡೆಸಿದ ಘಟನೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಸಂಬಂಧ ಪ್ರಿಯಕರನ ಮನೆ ಮುಂದೆ ಹೈಡ್ರಾಮಾ ನಡೆದಿದೆ. ಸೋಮ್ಲಾಪುರ ತಾಂಡಾದ ಯುವತಿ ಕಾವೇರಿ ಹಾಗೂ ಕೆರೆಬಿಳಚಿ ಗ್ರಾಮದ ಅನಿಲ್ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದರು.

ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದು, ಈಗ ಮದುವೆಯಾಗುವುದಿಲ್ಲ ಎಂದು ತಲೆ ಮರೆಸಿಕೊಂಡಿದ್ದಾನೆ ಎಂದು ನೊಂದ ಯುವತಿ ಆರೋಪಿಸಿದ್ದಾಳೆ.

Cheated By Lover, Woman Stage Protest In Front Of His House In Channagiri

ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದಿರುವ ಯುವತಿ, ಯುವಕನ ಮನೆ ಮುಂದೆ ಬಂದು ಧರಣಿ ಕೂಡ ನಡೆಸಿದ್ದಾಳೆ. ಈ ವೇಳೆ ಪ್ರಿಯಕರನ ಮನೆಯವರ ಜೊತೆ ಕಾವೇರಿ ವಾಗ್ವಾದ ನಡೆಸಿದ್ದು, ಈ ಗಲಾಟೆಯಲ್ಲಿ ಯುವತಿ ತಲೆಗೆ ಪೆಟ್ಟು ಬಿದ್ದಿದೆ. ಈ ಪ್ರಕರಣ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+