ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಶಾಲೆಯಲ್ಲಿ ನೂತನ ತಂತ್ರಜ್ಞಾನ; ಖಾಸಗಿ ಶಾಲೆಗೆ ಸೆಡ್ಡು!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್ 28; ಸರ್ಕಾರಿ ಶಾಲೆಗಳು ಎಂದರೆ ಸಾಕು ಮುಗು ಮುರಿಯುವವರ ಸಂಖ್ಯೆಯೇ ಹೆಚ್ಚು. ಅಲ್ಲಿ ತರಗತಿಗಳು ಸರಿಯಾಗಿ ನಡೆಯೋದಿಲ್ಲ, ತರಗತಿಗಳು ಪಾಳು ಬಿದ್ದಿರುತ್ತವೆ, ನೂತನ ತಂತ್ರಜ್ಞಾನ ಇರುವುದಿಲ್ಲ ಎಂದು ದೂರುವವರೇ ಹೆಚ್ಚು.

ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಿದ್ದ ಪೋಷಕರು ಸಾಲ ಸೋಲ ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಆದರೆ, ಇಲ್ಲೊಂದು ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಇದೆ. ಶಾಲೆಯನ್ನು ನೋಡಿದರೆ ನೀವು ಇದು ಸರ್ಕಾರಿ ಶಾಲೆಯೇ ಎಂದು ಆಶ್ಚರ್ಯ ಪಡುತ್ತೀರಿ.

ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಕೋವಿಡ್ ಸಲಹಾ ಸಮಿತಿ ಮಹತ್ವದ ಸೂಚನೆ! ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಕೋವಿಡ್ ಸಲಹಾ ಸಮಿತಿ ಮಹತ್ವದ ಸೂಚನೆ!

ಉತ್ತಮವಾಗಿರುವ ಶಾಲೆಯ ವಾತವರಣ, ನೂತನ ತಂತ್ರಜ್ಞಾನಗಳನ್ನು ಹೊಂದಿರುವ ತರಗತಿಗಳು, ವಿಧ್ಯಾರ್ಥಿಗಳ ಚಲನ ವಲನಗಳ ಬಗ್ಗೆ ಸಿಸಿಟಿವಿ ಕಣ್ಣು ಇಂತಹ ವ್ಯವಸ್ಥೆಗಳು ಸರ್ಕಾರಿ ಶಾಲೆಯಲ್ಲಿವೆ. ಹಾಜರಾತಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿದೆ.

ಶಾಲೆ ಆರಂಭಿಸುವ ಕುರಿತು ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!ಶಾಲೆ ಆರಂಭಿಸುವ ಕುರಿತು ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೀರೆಕೋಗಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಎಲ್ಲಾ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ. ಸಂಕಲ್ಪವನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಏನಾದರೂ ಮಾಡಬಹುದು ಎನ್ನುವುದಕ್ಕೆ ಈ ಶಾಲೆಯೇ ಉದಾಹರಣೆ.

ರಾಜ್ಯದಲ್ಲಿ ಶಾಲೆ ಆಂಭಿಸುವ ಬಗ್ಗೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ!ರಾಜ್ಯದಲ್ಲಿ ಶಾಲೆ ಆಂಭಿಸುವ ಬಗ್ಗೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ!

1951ರಲ್ಲಿ ಆರಂಭವಾದ ಶಾಲೆ

1951ರಲ್ಲಿ ಆರಂಭವಾದ ಶಾಲೆ

ಹೀರೇಕೋಗಲೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆರಂಭವಾಗಿದ್ದು 1951ರಲ್ಲಿ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಓದಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅಲ್ಲದೆ ರಾಜಕೀಯ ರಂಗದಲ್ಲಿ ಕೂಡ ಇದ್ದಾರೆ. ಓದಿರುವ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂದು ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಶಾಲೆಗೆ ಹೈಟೆಕ್ ಟಚ್ ನೀಡಿದ್ದಾರೆ.

ಮುಖ್ಯ ಶಿಕ್ಷಕರ ಪರಿಶ್ರಮ

ಮುಖ್ಯ ಶಿಕ್ಷಕರ ಪರಿಶ್ರಮ

1.50 ಲಕ್ಷ ವೆಚ್ಚದಲ್ಲಿ ದೀರ್ಘ ಬಾಳಿಕೆಯ ಬಣ್ಣವನ್ನು ಶಾಲೆಗೆ ಮಾಡಿಸಲಾಗಿದೆ. ಶಾಲೆಯ ಗೋಡೆಗಳಿಗೆ ಹರಪ್ಪ ಮೆಹೆಂಜೋದಾರ್ ಸಂಸ್ಕೃತಿ ಮಾದರಿಯ ವರ್ಲಿ ಕಲೆಯಿಂದ ಜಾನಪದ ಲೋಕ ಗೋಡೆಗಳಲ್ಲಿ ರಾರಾಜಿಸಿವೆ. ಪ್ರವೇಶ ದ್ವಾರದಿಂದ ಹಿಡಿದು ರಂಗಮಂದಿರದ ಸ್ವರೂಪವೇ ಬದಲಾಗಿದೆ. ಇದಕ್ಕೆಲ್ಲ ಮುಖ್ಯ ಶಿಕ್ಷಕರ ಪರಿಶ್ರಮ ಸಾಕಷ್ಟು ಇದೆ.

ಆಧುನಿಕ ತಂತ್ರಜ್ಞಾನ ಬಳಕೆ

ಆಧುನಿಕ ತಂತ್ರಜ್ಞಾನ ಬಳಕೆ

ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ್ ಮಾತನಾಡಿ, "ಎರಡು ವರ್ಷಗಳ ಹಿಂದೆಯೇ ಮಕ್ಕಳಿಗೆ ಬಯೋಮೆಟ್ರಿಕ್ ಹಾಜರಾತಿಗೆ ಚಾಲನೆ ನೀಡಲಾಗಿದೆ. ಈ ಬಾರಿ ಇಡೀ ಶಾಲೆಗೆ 16 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಮಕ್ಕಳು ತರಗತಿಯಲ್ಲಿ ಏನೇನು ಮಾಡುತ್ತಿದ್ದಾರೆ? ಎನ್ನುವುದನ್ನು ಮುಖ್ಯ ಶಿಕ್ಷಕರ ಕಚೇರಿಯಿಂದಲೇ ನೋಡಬಹುದಾಗಿದೆ" ಎಂದು ಹೇಳಿದರು.

Recommended Video

ಇಟಲಿಗೆ ಹೋಗ್ತಿರೋದಾದ್ರು ಯಾಕೆ ?? | Rahul Gandhi | Oneindia Kannada
ಎಲ್ಲರ ಸಹಕಾರ ಮುಖ್ಯ

ಎಲ್ಲರ ಸಹಕಾರ ಮುಖ್ಯ

ಸರ್ಕಾರಿ ಶಾಲೆಯನ್ನು ಇಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡುವಲ್ಲಿ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಾಯ ಹೆಚ್ಚಾಗಿದೆ. ಶಾಲೆಯ ಹಳೆ ವಿದ್ಯಾರ್ಥಿ ಶರಣಪ್ಪ ಮಾತನಾಡಿ, "ಸರ್ಕಾರಿ ಶಾಲೆಗಳು ಎಂದರೆ ಸಾಕು ಮೂಗು ಮುರಿಯುವ ಈ ಕಾಲದಲ್ಲಿ, ಪ್ರತಿಯೊಬ್ಬರು ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಲಾಗಿದೆ" ಎಂದರು.

English summary
Davanagere district Channagiri taluk Hirekogaluru government school model for all school. With new technology school will compete with private school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X