Heart attack: ದಾವಣಗೆರೆಯಲ್ಲಿ ವಾಕಿಂಗ್ ವೇಳೆಯೇ ಉದ್ಯಮಿ ಹೃದಯಾಘಾತದಿಂದ ಸಾವು
Heart attack: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಹಾಗೆಯೇ ಇದೀಗ ವಾಕಿಂಗ್‌ಗೆ ಹೋಗುತ್ತಿರುವಾಗಲೇ ಕುಸಿದು ಬಿದ್ದು ಉದ್ಯಮಿಯೊಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಅನಿಲ್ ಕುಮಾರ್ (40) ಹೃದಯಾಘತಕ್ಕೆ ಒಳಗಾಗಿ ಮೃತಪಟ್ಟ ಉದ್ಯಮಿಯಾಗಿದ್ದಾರೆ. ದಾವಣಗೆರೆ ನಗರದ ಶಕ್ತಿ ನಗರದ ನಿವಾಸಿ ಆಗಿರುವ ಅನಿಲ್ ಕುಮಾರ್ ಎಸ್‌ಎಸ್‌ರಸ್ತೆ ಪಕ್ಕದ ಡಿಆರ್ ಸರ್ಕಲ್ ದಾರಿಯಲ್ಲಿ ವಾಕಿಂಗ್ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ದೃಶ್ಯ ಶಾಪ್‌ವೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಹೃದಯ ಸಂಬಂಧಿ ಕಾಯಿಲೆಗಳ ಪ್ರಕರಣಗಳು ಪ್ರಪಂಚದಾದ್ಯಂತ ಹೆಚ್ಚುತ್ತಗುತ್ತಲಿವೆ. ಅದರಲ್ಲೂ ಚಿಕ್ಕವಯಸಿನವರೇ ಹೆಚ್ಚಾಗಿ ಬಲಿಯಾಗಿರುವ ಘಟನೆಗಳು ನಡೆದಿವೆ. ಕೆಲವು ದಶಕಗಳ ಹಿಂದಿನವರೆಗೂ ಇದನ್ನು ವೃದ್ಧಾಪ್ಯದ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಕಿರಿಯ ವಯಸ್ಸಿನವರು 20 ವರ್ಷದೊಳಗಿನವರು ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕ್ಕೆ ಒಳಗಾಗುವಂತೆ ಮಾಡಿದೆ.
ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ ಹೆಚ್ಚುತ್ತಿರುವ ರೀತಿಯಿಂದಾಗಿ ಹೃದಯ ಕಾಯಿಲೆಗಳ ಅಪಾಯವೂ ಹೆಚ್ಚಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಹಾರದ ಅಕ್ರಮಗಳು ಮತ್ತು ಹೃದಯ ಕಾಯಿಲೆಗಳ ನಡುವಿನ ಸಂಬಂಧದ ಬಗ್ಗೆ ಅನೇಕ ಅಧ್ಯಯನಗಳು ನಿರಂತರವಾಗಿ ಎಚ್ಚರಿಸುತ್ತಿವೆ.
ಸೋಡಿಯಂ ಅತಿಯಾದ ಸೇವನೆಯಿಂದ ಇದಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಆತಂಕಕಾರಿ ವಿಷಯ ಅಂದ್ರೆ, ಭಾರತೀಯ ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುತ್ತಿದೆ. ಈ ಬಗ್ಗೆ ಆರೋಗ್ಯ ತಜ್ಞರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಎಲ್ಲಾ ಜನರು ಜಾಗರೂಕರಾಗಿರುವಂತೆ ಸಲಹೆ ನೀಡಿದೆ. ಭಾರತದಲ್ಲಿ ಜನರು ಹೆಚ್ಚು ಉಪ್ಪು ತಿನ್ನುತ್ತಿದ್ದಾರೆ ಎಂದು ಈ ವರದಿ ಹೇಳುತ್ತಿದೆ.
ಅತಿಯಾದ ಉಪ್ಪು ಸೇವನೆಯು ಭಾರತದಲ್ಲಿ ಮೌನ ಸಾಂಕ್ರಾಮಿಕ ರೋಗಕ್ಕೆ ಕಾರಣ ಆಗುತ್ತಿದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವುದಲ್ಲದೆ, ಈ ಅಭ್ಯಾಸವು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನ ಹೆಚ್ಚಿಸುತ್ತದೆ.
ಈ ಸಮಸ್ಯೆ ಪರಿಹರಿಸಲು, ವಿಜ್ಞಾನಿಗಳು ಸಮುದಾಯ ಆಧಾರಿತ ಉಪ್ಪು ಕಡಿತ ಅಧ್ಯಯನವನ್ನು ಪ್ರಾರಂಭ ಮಾಡಿದ್ದಾರೆ. ಕಡಿಮೆ ಸೋಡಿಯಂ ಉಪ್ಪಿನ ಪರ್ಯಾಯಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳ ಪ್ರಕಾರ, ಒಬ್ಬ ವ್ಯಕ್ತಿಯು ಉಪ್ಪು ಸೇವನೆಯು ದಿನಕ್ಕೆ 5 ಗ್ರಾಂಗಿಂತ ಕಡಿಮೆ ಇರಬೇಕು. ಇನ್ನು ನಗರ ಪ್ರದೇಶಗಳಲ್ಲಿನ ಭಾರತೀಯರು ಪ್ರತಿದಿನ ಸುಮಾರು 9.2 ಗ್ರಾಂ ಉಪ್ಪನ್ನು ಸೇವಿಸುತ್ತಿದ್ದಾರೆ ಎಂದು ಅಧ್ಯಯನಗಳು ತೋರಿಸುತ್ತವೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಇದು ದಿನಕ್ಕೆ ಸುಮಾರು 5.6 ಗ್ರಾಂ. ಇವೆರಡೂ ಶಿಫಾರಸು ಮಾಡಲಾದ ಪ್ರಮಾಣಕ್ಕಿಂತ ಹೆಚ್ಚು.
ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ಹಿರಿಯ ವಿಜ್ಞಾನಿ ಮತ್ತು ಅಧ್ಯಯನದ ಪ್ರಧಾನ ತನಿಖಾಧಿಕಾರಿ ಡಾ.ಶರಣ್ ಮುರಳಿ, ಸೋಡಿಯಂ ಕ್ಲೋರೈಡ್‌ನ ಒಂದು ಭಾಗವನ್ನು ಪೊಟ್ಯಾಸಿಯಮ್ ಅಥವಾ ಮೆಗ್ನೀಸಿಯಮ್ ಲವಣಗಳೊಂದಿಗೆ ಬದಲಾಯಿಸುವ ವಿಧಾನವನ್ನು ನಾವು ಪರಿಗಣಿಸುತ್ತಿದ್ದೇವೆ ಎಂದು ಹೇಳಿದರು.
ಅಧ್ಯಯನದ ಪ್ರಮುಖ ಲೇಖಕ ಡಾ.ಶರಣ್ ಮುರಳಿ, ಕಡಿಮೆ ಸೋಡಿಯಂ ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಕಡಿಮೆ ಸೋಡಿಯಂ ಉಪ್ಪಿಗೆ ಬದಲಾಯಿಸುವುದರಿಂದ ರಕ್ತದೊತ್ತಡವನ್ನು ಸರಾಸರಿ 7/4 mmHgರಷ್ಟು ಕಡಿಮೆ ಮಾಡಬಹುದು. ಇದು ದೊಡ್ಡ ಪರಿಣಾಮ ಬೀರುವ ಒಂದು ಸಣ್ಣ ಬದಲಾವಣೆಯಾಗಿದೆ ಎಂದು ತಿಳಿಸಿದ್ದಾರೆ ಅಂತಾ ವರದಿಯಾಗಿದೆ.












Click it and Unblock the Notifications