ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಇಟಿಯಲ್ಲಿ ಅಕ್ರಮದ ವಾಸನೆ: ದಾವಣಗೆರೆಯ ಮನೆಯಲ್ಲಿ ಸಿಕ್ಕಿದ್ದೇನು?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 28: ದಾವಣಗೆರೆಯ ಮನೆಯೊಂದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ರಾಶಿಗಟ್ಟಲೆ ಪ್ರಶ್ನೆ ಪತ್ರಿಕೆಗಳು ದೊರೆತಿವೆ. ಇದು ಪರೀಕ್ಷೆ ಸುತ್ತ ನಡೆದಿರಬಹುದಾದ ಅಕ್ರಮದ ಸುತ್ತ ಅನುಮಾನಗಳಿಗೆ ಕಾರಣವಾಗಿದೆ.

ದಾವಣಗೆರೆಯ ಕೆಟಿಜೆ ನಗರದ ಮನೆಯೊಂದರಲ್ಲಿ ರಾಶಿ ರಾಶಿ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳು ಶುಕ್ರವಾರ ರಾತ್ರಿ ಪತ್ತೆಯಾಗಿವೆ. ಇವು ಮೇ 26ರಂದು ನಡೆದಿದ್ದ ಟಿಇಟಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳಾಗಿವೆ. ಪರೀಕ್ಷೆ ನಡೆದು ಸುಮಾರು ಮೂರು ತಿಂಗಳ ನಂತರ ಯಾಕೆ ಬಂಡಲ್‌ಗಟ್ಟಲೆ ಪ್ರಶ್ನೆ ಪತ್ರಿಕೆಗಳು ಖಾಸಗಿ ಮನೆಯೊಂದರಲ್ಲಿ ಲಭ್ಯವಾಗಿವೆ? ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಾಟ್ಸಪ್ ನಲ್ಲಿ ಪಿಯು ನಕಲಿ ಪ್ರಶ್ನೆ ಪತ್ರಿಕೆ ಹರಿಬಿಟ್ಟವರ ಬಂಧನವಾಟ್ಸಪ್ ನಲ್ಲಿ ಪಿಯು ನಕಲಿ ಪ್ರಶ್ನೆ ಪತ್ರಿಕೆ ಹರಿಬಿಟ್ಟವರ ಬಂಧನ

ಬಂಡಲ್‌ಗಳು ಹೊರಗೆ ಬಂದಿದ್ದೇಗೆ?: ಟಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತಯಾರು ಮಾಡುತ್ತದೆ. ಪರೀಕ್ಷೆಯ ನಂತರ ಒಂದು ವೇಳೆ ಪ್ರಶ್ನೆ ಪತ್ರಿಕೆಗಳು ಉಳಿದರೆ ಇಲಾಖೆಯಲ್ಲಿಯೇ ಸುಟ್ಟು ಹಾಕಬೇಕು. ಅದನ್ನು ಹೊರಗಡೆ ನೀಡುವಂತಿಲ್ಲ. ಆದರೆ ಪೆಂಡಲ್ ಗಟ್ಟಲೇ ಸಿಕ್ಕ ಪ್ರಶ್ನೆ ಪತ್ರಿಕೆಯಿಂದ ಅಕ್ರಮದ ವಾಸನೆ ಸುಳಿದಿದೆ.

Bundels Of TET Question Papers Found In Davanagere Home

ಟಿಇಟಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಲು ಎರಡು ಸೆಟ್ ಪ್ರಶ್ನೆಪತ್ರಿಕೆಗಳನ್ನು ಇಲಾಖೆ ನೀಡಿರುತ್ತದೆ. ಮೊದಲನೇ ಸೆಟ್ ಪ್ರಶ್ನೆ ಪತ್ರಿಕೆ ವಿತರಣೆ ಮಾಡುತ್ತಾರೆ. ವಿತರಣೆ ಮಾಡಿದ ಪ್ರಶ್ನೆ ಪತ್ರಿಕೆಯಲ್ಲಿ ಲೋಪವಿದ್ದರೆ ಇಲ್ಲವೇ ಪ್ರಶ್ನೆ ಪತ್ರಿಕೆ ನಕಲು ಅಥವಾ ಲೀಕ್ ಆಗಿದೆ ಎಂದು ತಿಳಿದುಬಂದರೆ ಎರಡನೇ ಸೆಟ್ ನೀಡುವುದು ವಾಡಿಕೆ. ನಿನ್ನೆ ಸಿಕ್ಕ ಈ ಪ್ರಶ್ನೆ ಪತ್ರಿಕೆ ಎರಡನೇ ಸೆಟ್ ಆಗಿದ್ದು, ಅವುಗಳನ್ನು ಯಾವುದೋ ಗೋದಾಮ್ ನಲ್ಲಿ ಸಂಗ್ರಹಿಸಿಟ್ಟು, ನಂತರ ಅವುಗಳನ್ನು ಕಳ್ಳತನ ಮಾಡಿಕೊಂಡು ಮನೆಯಲ್ಲಿ ಇಟ್ಟಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಹೆಚ್ಚಿನ ತನಿಖೆ ಈ ಕುರಿತು ಬೆಳಕು ಚೆಲ್ಲಬೇಕಿದೆ.

English summary
Bundles of question papers found in the home in Davanagere. There are piles of question papers for competitive exams. This has led to suspicions around the illegality of the exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X