ದಾವಣಗೆರೆ: ತನ್ನ ಕರುವಿಗಾಗಿ ಬೈಕ್ ಹಿಂದೆಯೇ ಓಡಿದ ಎಮ್ಮೆ, ವಿಡಿಯೋ ವೈರಲ್
ದಾವಣಗೆರೆ, ಸೆಪ್ಟೆಂಬರ್ 23: ತನ್ನ ಕರುವಿಗಾಗಿ ಎಮ್ಮೆಯೊಂದು ಬೈಕ್ ಹಿಂದೆ ಕಿಲೋಮೀಟರ್ ದೂರ ಓಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಎಮ್ಮೆಯೊಂದು ಹೊಲದಲ್ಲಿಯೇ ಕರುವಿಗೆ ಜನ್ಮ ನೀಡಿದೆ. ಹೀಗಾಗಿ ಎಮ್ಮೆ ಮಾಲೀಕರು ಹೊಲದಿಂದ ಮನೆಗೆ ಕರುವನ್ನು ಬೈಕ್ ನಲ್ಲಿ ಹಾಕಿಕೊಂಡು ಕರೆದುಕೊಂಡು ಹೋಗುತ್ತಿದ್ದರು.
ಆದರೆ ಬೈಕಿನಲ್ಲಿ ಕರುವನ್ನು ಕರೆದುಕೊಂಡು ಹೋಗುವುದನ್ನು ನೋಡಿದ ಎಮ್ಮೆ ತನ್ನ ಕರುವಿಗಾಗಿ ಬೈಕ್ ಹಿಂದೆಯೇ ಓಡಿದೆ. ಎಮ್ಮೆ ತನ್ನ ಕರುವನ್ನು ನೋಡಲು ಪರಿತಪಿಸಿ ಬೈಕ್ ಹಿಂದೆಯೇ ಕಿಲೋಮೀಟರ್ ದೂರ ಓಡಿದ್ದನ್ನು ನೋಡಿ ಎಮ್ಮೆ ಮಾಲೀಕರು ಆಶ್ಚರ್ಯ ಚಕಿತರಾಗಿದ್ದಾರೆ.

Recommended Video
ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada
ಬೈಕ್ ಹಿಂದೆ ಓಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಎಮ್ಮೆ ಹಿಂದೆ ಬೈಕಿನಲ್ಲಿ ಹೋಗುತ್ತಿದ್ದವರು ಇದನ್ನು ನೋಡಿ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಬೈಕ್ ಹಿಂದೆಯೇ ಕರುವಿಗಾಗಿ ಎಮ್ಮೆಯೂ ಕೂಡ ತುಂಬ ವೇಗವಾಗಿ ಓಡುತ್ತಿರುವುದನ್ನು ಕಾಣಬಹುದಾಗಿದೆ.












Click it and Unblock the Notifications