ಕುತಂತ್ರದಿಂದ ಗೆಲ್ಲುತ್ತೇವೆ; ರವೀಂದ್ರನಾಥ್ ವಿವಾದಾತ್ಮಕ ಹೇಳಿಕೆ
ದಾವಣಗೆರೆ, ಸೆಪ್ಟೆಂಬರ್ 23: ಕುತಂತ್ರದಿಂದ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್ ಪ್ರತಿಕ್ರಿಯೆ ನೀಡಿದ್ದು, "ಬಿಜೆಪಿ ಈಗಲೂ ಅಧಿಕಾರದಲ್ಲಿ ಇದೆ. ಅದು ಹೀಗೆ ಮುಂದುವರೆಯಬೇಕು ಎಂದರೆ ಕುತಂತ್ರ, ತಂತ್ರ ಮಾಡಿ ಗೆಲ್ಲುತ್ತೇವೆ" ಎಂದಿದ್ದಾರೆ.

ಅನರ್ಹ ಶಾಸಕರ ಅರ್ಜಿ ವಿಚಾರಣೆ ಕೆಲಕಾಲ ಮುಂದೂಡಿದ ಸುಪ್ರೀಂ
ದಾವಣಗೆರೆಯಲ್ಲಿ ಗುಂಡಿ ಸರ್ಕಲ್ ನಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, "ಈಗಾಗಲೇ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಚುನಾವಣೆಯನ್ನು ಪಕ್ಷ ಎದುರಿಸುತ್ತದೆ. ನಮಗೆ ಪಕ್ಷದಿಂದ ಎಲ್ಲಿಗೆ ಚುನಾವಣೆ ಪ್ರಚಾರಕ್ಕೆ ಹೋಗಬೇಕು ಅನ್ನುತ್ತಾರೋ ಅಲ್ಲಿಗೆ ಹೋಗುತ್ತೇವೆ" ಎಂದರು.












Click it and Unblock the Notifications