ನಾನು ಅಮಿತ್ ಶಾ ಅಲ್ಲ, ರಾಜ್ಯದ ಜನರಿಗೆ ಲೆಕ್ಕ ಕೊಡಬೇಕು : ಸಿದ್ದರಾಮಯ್ಯ
ದಾವಣಗೆರೆ, ಮಾರ್ಚ್ 13 : 'ನಾನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಲ್ಲ, ಕರ್ನಾಟಕದ ಜನರಿಗೆ ಲೆಕ್ಕ ಕೊಡಬೇಕು. ನಾನು ನಮ್ಮ ರಾಜ್ಯದ ಜನರಿಗೆ ಮಾತ್ರ ಉತ್ತರ ಕೊಡಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಸಿದ್ದರಾಮಯ್ಯ ಅವರು ದಾವಣಗೆರೆಗೆ ಭೇಟಿ ನೀಡಿದ್ದರು. ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದರು. ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು. ನಂತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು
ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರ ಉದ್ಯಾನ ಎಂದು. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಖುಷಿಗಾಗಿ ನಾಡಗೀತೆ ಹಾಡುವುದಲ್ಲ, ಎಲ್ಲರೂ ಅದನ್ನು ಅರ್ಥ ಮಾಡಿಕೊಳ್ಳಬೇಕು
ನಾವು ರಾಜ್ಯದಲ್ಲಿ ನಾಡಗೀತೆ ಹಾಡುತ್ತೇವೆ. ಅದರಲ್ಲಿ ಎರಡು ಸಾಲುಗಳಿವೆ ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂದು
ನಮ್ಮ ಸರ್ಕಾರ ಬಸವಣ್ಣ, ಅಂಬೇಡ್ಕರ್ ಹೇಳಿದಂತಹ ಸಮಾಜ ನಿರ್ಮಾಣದಲ್ಲಿ ನಂಬಿಕೆ ಹೊಂದಿದೆ. ಅದರಂತೆ ನಡೆಯುತ್ತಿದೆ.
ನಮ್ಮ ದೇಶದಲ್ಲಿ ಎಲ್ಲ ಜಾತಿ, ಧರ್ಮದವರನ್ನು ಗೌರವಿಸಬೇಕು. ಎಲ್ಲಾ ಧರ್ಮದ ಬಗ್ಗೆ ಸಹಿಷ್ಠುತೆ ಇರಬೇಕು. ಬೇರೆ ಧರ್ಮದ ಬಗ್ಗೆ ಅಸಹಿಷ್ಣುತೆ ಇರಬಾರದು
ಜಾತಿ, ಧರ್ಮ ಇದನ್ನೇ ಮಾತನಾಡುತ್ತಾರೆ. ಏನು ಹಿಂದುತ್ವವನ್ನು ಗುತ್ತಿಗೆ ಪಡೆದಿದ್ದಾರೆಯೇ?
ಇಷ್ಟು ವರ್ಷದಿಂದ ನಾನು ರಾಜಕೀಯದಲ್ಲಿದ್ದೇನೆ. ಹಲವಾರು ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ. ಆದರೆ, ನರೇಂದ್ರ ಮೋದಿಯಂತೆ ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಲ್ಲ.
ರಾಜ್ಯಕ್ಕೆ ಬಂದು ಸುಳ್ಳು ಹೇಳುತ್ತಾರೆ. ಬರೀ ಸುಳ್ಳು ಹೇಳುವುದು ಮಾತ್ರ ಅವರ ಕೆಲಸ. ಕರ್ನಾಟಕದ ಬಿಜೆಪಿ ನಾಯಕರು ಇದನ್ನೇ ಮಾಡುತ್ತಿದ್ದಾರೆ.












Click it and Unblock the Notifications