ದಾವಣಗೆರೆಯಲ್ಲಿ ಕಾಲುವೆಗೆ ಬಿದ್ದು ನರಳಾಡಿದ ಕಾಡೆಮ್ಮೆ

ದಾವಣಗೆರೆ, ಜುಲೈ 20: ಕಾಡಿನಿಂದ ಆಹಾರ ಅರಸಿಕೊಂಡು ನಾಡಿಗೆ ಬಂದಿದ್ದ ಕಾಡೆಮ್ಮೆಯೊಂದು ಕಾಲುವೆಗೆ ಬಿದ್ದು ನರಳಾಡಿದ ಘಟನೆ ಇಂದು ದಾವಣಗೆರೆಯಲ್ಲಿ ನಡೆದಿದೆ.

ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಕನಹಳ್ಳಿ ಹಾಗೂ ಬಸವನಹಳ್ಳಿ ಗ್ರಾಮಗಳ ಮಧ್ಯದಲ್ಲಿರುವ ತುಂಗಭದ್ರಾ ಕಾಲುವೆಯಲ್ಲಿ ಕಾಡೆಮ್ಮೆ ಬಿದ್ದಿದ್ದು, ಗಾಯಗೊಂಡಿದೆ. ಕಾಲುವೆಯಿಂದ ಮೇಲೆ ಬರಲಾರದೇ ಬಹು ಸಮಯದವರೆಗೆ ನರಳಾಡಿದೆ.

Bison Came In Search Of Food Fell Into Canal In Davanagere

ಕಾಡೆಮ್ಮೆ ಹೀಗೆ ಕಾಲುವೆಗೆ ಬಿದ್ದಿರುವುದನ್ನು ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಕಾಡೆಮ್ಮೆ ಸೆರೆ ಹಿಡಿಯಲು ಹರಸಾಹಸ ಪಟ್ಟರು. ಬಹು ಸಮಯದ ನಂತರ ಸೆರೆ ಹಿಡಿದ ಕಾಡೆಮ್ಮೆಗೆ ಪಶುವೈದ್ಯರು ಚಿಕಿತ್ಸೆಯನ್ನು ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+