B-khata: ಬಿ ಖಾತಾ ಪಡೆಯಲು ಹೆಚ್ಚುವರಿ ಶುಲ್ಕ ಪಾವತಿಸಿದವರಿಗೆ ಮಹತ್ವದ ಮಾಹಿತಿ
B-khata: ಬಿ ಖಾತಾ ನೀಡಲು ಅರ್ಜಿದಾರರಿಂದ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತದೆ ಎನ್ನುವ ಆರೋಪ ಕೇಳಿಬಂದಿತ್ತು. ದಾವಣಗೆರೆ ಪಾಲಿಕೆಯಲ್ಲಿ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತು ಸರ್ಕಾರ ಸಮರ ಸಾರಲು ಮುಂದಾಗಿದೆ. ಹಾಗಾದ್ರೆ ಅರ್ಜಿದಾರರು ಈ ಹಣವನ್ನು ಪಾಪಾಸ್ ಪಡೆಯಲು ಯಾವೆಲ್ಲಾ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅನಧಿಕೃತ ಬಡಾವಣೆಯ ಸೈಟ್, ಮನೆ, ಕಟ್ಟಡಗಳಿಗೆ ಡೋರ್ ನಂಬರ್ ನೀಡಿ, ಇ-ಆಸ್ತಿ ಸೃಷ್ಟಿಸಿ ಬಿ ಖಾತೆ ನೀಡಲು ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಅರ್ಜಿದಾರರಿಂದ ಹೆಚ್ಚು ಶುಲ್ಕ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಸರ್ಕಾರವು ಪಾಲಿಕೆಯಲ್ಲಿ ಪಡೆಯುತ್ತಿದ್ದ 10,000 ರೂಪಾಯಿ ಶುಲ್ಕವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಆರೋಪಗಳು ಹಾಗೂ ಅರ್ಜಿದಾರರು ಗಮನಿಸಬೇಕಾದ ಅಂಶಗಳು
* ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಿನಲ್ಲಿ ಪಡೆಯುತ್ತಿದ್ದ 10,000 ರೂಪಾಯಿ ಹೆಚ್ಚುವರಿ ಶುಲ್ಕ ರದ್ದುಪಡಿಸಲಾಗುತ್ತದೆ.
* ಸರ್ಕಾರ ಬಿ ಖಾತೆಗೆ ನಿಗದಿಪಡಿಸಿದ್ದ ದರದ ಜೊತೆಗೆ ದಾವಣಗೆರೆ ಮಹಾನಗರ ಪಾಲಿಕೆ ಹೆಚ್ಚುವರಿ ಶುಲ್ಕ ಪಡೆಯತ್ತಿತ್ತು.
* ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿ ಮಾಡಿದವರು ರಶೀದಿಯೊಂದಿಗೆ ಪಾಲಿಕೆ ವಲಯ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ರೆ ಶುಲ್ಕ ಹಿಂದಿರುಗಿಸಲಾಗುತ್ತದೆ ಎನ್ನವ ಮಾಹಿತಿ ಲಭ್ಯವಾಗಿದೆ.
ಭೂಪರಿವರ್ತನೆ ಆಗದೇ ಅನಧಿಕೃತ ಬಡಾವಣೆಯ ನಿವೇಶನ, ಮನೆ, ಕಟ್ಟಡಗಳಿಗೆ ಬಿ ಖಾತಾ ನೀಡುವ ಅಭಿಯಾನ ನಡೆಯುತ್ತಿದ್ದು, ಈ ವೇಳೆ ದಾವಣಗೆರೆ ಮಹಾನಗರ ಪಾಲಿಕೆಯು ಅರ್ಜಿದಾರರಿಂದ ಬಿ ಖಾತಾ ನೀಡಲು ಹೆಚ್ಚುವರಿ 10,000 ರೂಪಾಯಿ ಶುಲ್ಕ ಪಡೆಯುತ್ತಿರುವ ಆರೋಪ ಕೇಳಿಬಂದಿತ್ತು.
ರಾಜ್ಯದ ಯಾವುದೇ ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಮತ್ತು ಸುಧಾರಣೆ ಶುಲ್ಕ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರಲಿಲ್ಲ. ಆದರೆ, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಾತ್ರ ಹೊಸದಾಗಿ ಡೋರ್ ನಂಬರ್ ನೀಡಲು ಶುಲ್ಕ ಪಡೆಯಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿತ್ತು.
ನಿಯಮದ ಪ್ರಕಾರ ಖಿ ಖಾತಾ ಮಾಡಿಸಲು ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಬೇಕು. ಬೇರೆ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯ ಇಲ್ಲ. ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿ ಮಾಡಿರುವವರು ರಶೀದಿ ಜೊತೆಗೆ ಮನವಿ ಸಲ್ಲಿಸಿದರೆ, ಕಟ್ಟಿರುವ ಶುಲ್ಕವ್ನು ಹಿಂದಿರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದ್ದಾರೆ.












Click it and Unblock the Notifications