ದಾವಣಗೆರೆ: ಸೆಪ್ಟೆಂಬರ್ 6ರಂದು ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ.?- ಇಲ್ಲಿದೆ ತಾಲ್ಲೂಕುವಾರು ಅಂಕಿಅಂಶಗಳ ವಿವರ
Arecanut Price: ಬಂಗಾರ, ಬೆಳ್ಳಿಯಂತೆ ಅಡಿಕೆ ದರದಲ್ಲೂ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನೂ ಇದೀಗ ದರದಲ್ಲಿ ತುಸು ಏರಿಕೆ ಕಂಡಿದೆ. ಹಾಗಾದರೆ ಇಂದು (ಸೆಪ್ಟೆಂಬರ್ 06) ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ದರ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ ಇದೀಗ ತುಸು ಚೇತರಿಕೆ ಕಂಡಿದೆ. ಇಂದು (ಸೆಪ್ಟೆಂಬರ್ 06) ಹಳೇ ಅಡಿಕೆಯ ಗರಿಷ್ಠ ದರ ಕ್ವಿಂಟಾಲ್‌ಗೆ 48,429 ರೂಪಾಯಿ, ಕನಿಷ್ಠ ದರ 41,069 ರೂಪಾಯಿ ಆಗಿದೆ. ಇನ್ನೂ ಹೊಸ ಅಡಿಕೆಯ ಗರಿಷ್ಠ ದರ 43,578 ರೂಪಾಯಿ, ಕನಿಷ್ಠ 38,069 ರೂಪಾಯಿ ಇದೆ.

ಹೊಸ ಅಡಿಕೆ ದರ ಕಳೆದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ 700 ರೂಪಾಯಿ ಏರಿಕೆ ಆಗಿದೆ. ಜೂನ್ ಮೊದಲ ವಾರ 54,000 ರೂಪಾಯಿ ಗಡಿ ದಾಟಿದ್ದ ದರ, ಜೂನ್ 20ರಿಂದ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಲೇ ಬಂದಿದೆ. ಇನ್ನೂ ಈ ಬಾರಿ ಮುಂಗಾರು ಮಳೆ ಕೃಪೆ ತೋರಿದ ಹಿನ್ನೆಲೆ ಜಲಾಶಯಗಳಿಗೂ ಜೀವಕಳೆ ಬಂದಿದ್ದಿ, ಹಲವು ತುಂಬಿದ್ದು, ಇನ್ನೂ ಕೆಲವು ಡ್ಯಾಂಗಳು ಭರ್ತಿಯಾಗುವ ಹಂತವನ್ನು ತಲುಪಿವೆ.
ಇನ್ನು ಈ ಬಾರಿ ಉತ್ತಮ ಮಳೆಯಿಂದ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯ ತುಂಬಿದ್ದು, ಇದರಿಂದ ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ನೀರು ಸಿಗುವ ಭರವಸೆಯಿದೆ. ಕಳೆದ ವರ್ಷ ಅಂದರೆ 2023ರ ಜುಲೈನಲ್ಲಿ ಗರಿಷ್ಠ ಬೆಲೆ 57,000 ರೂಪಾಯಿ ಇದ್ದು, ಈ ವರ್ಷ ಅಂದರೆ ಮೇನಲ್ಲಿ ಗರಿಷ್ಠ 55,000 ರೂಪಾಯಿ ಮುಟ್ಟಿತ್ತು.
ಇನ್ನು 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಜಲಮೂಲಗಳೆಲ್ಲ ಬತ್ತಿಹೋಗಿದ್ದವು. ಪರಿಣಾಮ ಬೋರ್ ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಆಗಿತ್ತು. ಇನ್ನು ಇದೀಗ 2024ರ ಜೂನ್ ಆರಂಭವಾಗುತ್ತಿದ್ದಂತೆ ಮುಂಗಾರು ಮಳೆ ಚುರುಕು ಪಡೆದು ಜಲಮೂಲಗಳು ಉಕ್ಕಿ ಹರಿದ ಪರಿಣಾಮ ಬೋರ್ ವೆಲ್‌ಗಳು ಚೇತರಿಕೆ ಕಂಡಿವೆ.
2024ರ ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿಯಲ್ಲಿ ದಿಢೀರ್ 48,000 ರೂಪಾಯಿಗೆ ಕುಸಿತ ಕಂಡಿತ್ತು. ಮಾರ್ಚ್‌ನಲ್ಲಿ ತುಸು ಚೇತರಿಕೆ ಕಂಡು 50,000 ರೂಪಾಯಿಗೆ ತಲುಪಿತ್ತು. ಏಪ್ರಿಲ್‌ನಲ್ಲಿ ಗರಿಷ್ಠ 54,000 ರೂಪಾಯಿ ಮುಟ್ಟಿತ್ತು. ಮೇನಲ್ಲಿ ಗರಿಷ್ಠ ದರ 55,000 ರೂಪಾಯಿ ತಲುಪಿ, ಮತ್ತೆ ಕುಸಿತ ಕಂಡಿತ್ತು. ಜೂನ್‌ನ ಎರಡನೇ ವಾರದಿಂದ ಮತ್ತೆ ಕುಸಿತವಾಗಿದ್ದು, ಜುಲೈನಲ್ಲಿ 51,000 ರೂಪಾಯಿ ಆಗಿತ್ತು. ಆಗಸ್ಟ್‌ನಲ್ಲಿ ಹೊಸ ಅಡಿಕೆ 42,000 ರೂಪಾಯಿಗೆ ಇಳಿಕೆಯಾಗಿದೆ.
ಇನ್ನು ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮತ್ತೆ ಮುಂದುವರೆದರೆ, ಅಡಿಕೆ ಬೆಳಗಾರರ ಮುಖದಲ್ಲಿ ಮತ್ತಷ್ಟು ಮಂದಹಾಸ ಹೆಚ್ಚಿದಂತಾಗಲಿದೆ.












Click it and Unblock the Notifications