ದಾವಣಗೆರೆ: ಕ್ವಿಂಟಾಲ್‌ ಅಡಿಕೆ ಧಾರಣೆ ಎಷ್ಟಿದೆ?- ತಾಲ್ಲೂಕುವಾರು ಆಗಸ್ಟ್‌ 07ರ ಅಂಕಿಅಂಶಗಳ ವಿವರ ಇಲ್ಲಿದೆ

Arecanut Price: ಚಿನ್ನ, ಬೆಳ್ಳಿಂತೆ ಅಡಿಕೆ ದರದಲ್ಲೂ ಕೂಡ ಹಾವು ಏಣಿಯಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ದರ ತುಸು ಚೇತರಿಕೆ ಕಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ತಾಲ್ಲೂಕುವಾರು ಕ್ವಿಂಟಾಲ್‌ ಅಡಿಕೆ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ ತುಸು ಚೇತರಿಕೆ ಕಂಡಿದೆ. ಇಂದು (ಆಗಸ್ಟ್‌ 7) ರಾಶಿ ಅಡಿಕೆ ಧಾರಣೆಯಲ್ಲಿ ಗರಿಷ್ಠ‌ ಬೆಲೆ ಕ್ವಿಂಟಲ್‌ಗೆ 51,300 ರೂಪಾಯಿ ಇದ್ದು, ಕನಿಷ್ಠ ಬೆಲೆ 43,099 ರೂಪಾಯಿ ಆಗಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ, ದರದಲ್ಲಿ 100 ರೂಪಾಯಿ ಏರಿಕೆ ಆಗಿದೆ. ಜೂನ್ ಮೊದಲ ವಾರ 54,000 ರೂಪಾಯಿ ಗಡಿ ದಾಟಿದ್ದ ದರ, ಜೂನ್‌ 20ರಿಂದ ದಿನದಿಂದ ದಿನಕ್ಕೆ ಕುಸಿತ ಆಗುತ್ತಲೇ ಬಂದಿತ್ತು.

Arecanut price details of Davanagere market on August 07th know Statistics details

ಇನ್ನು ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆ ಭದ್ರಾ ಜಲಾಶಯ ತುಂಬಿದೆ. ಈ ಹಿನ್ನೆಲೆ ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ನೀರು ಸಿಗುವ ಭರವಸೆ ಬೆಳೆಗಾರರದ್ದಾಗಿದೆ. 2023ರ ಜುಲೈನಲ್ಲಿ ಗರಿಷ್ಠ ಬೆಲೆ 57,000 ರೂಪಾಯಿ ತಲುಪಿತ್ತು. ಈ ವರ್ಷ ಅಂದರೆ 2024ರ ಮೇ ತಿಂಗಳಲ್ಲಿ ಗರಿಷ್ಠ ಈಗ 55,000 ರೂಪಾಯಿ ಮುಟ್ಟಿತ್ತು.

2023ರಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆ ಬರದ ಛಾಯೆ ಆವರಿಸಿದ್ದು, ಬೋರ್ ವೆಲ್‌ಗಳಲ್ಲಿ ನೀರು ಬತ್ತಿಹೋಗಿದ್ದವು. ಇದೀಗ ಭಾರೀ ಮಳೆಯಿಂದ ಬೋರ್ ವೆಲ್‌ಗಳು ಚೇತರಿಕೆ ಕಾಣುತ್ತಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಜಿಲ್ಲೆ ಜನರು ಧೈರ್ಯದಿಂದ ಇದ್ದಾರೆ ಎಂದರೆ ತಪ್ಪಾಗಲಾರದು.

2024ರ ಜನವರಿ 15ರಂದು ಕ್ವಿಂಟಾಲ್‌ ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ಮುಟ್ಟಿತ್ತು. ಫೆಬ್ರವರಿ ತಿಂಗಳಲ್ಲಿ‌ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಮೇ ತಿಂಗಳಿನಲ್ಲಿ ಗರಿಷ್ಠ 55,000 ತಲುಪಿ, ಮತ್ತೆ ಕುಸಿತ ಕಂಡಿತ್ತು. ಜೂನ್ ಎರಡನೇ ವಾರದಿಂದ ಮತ್ತೆ ಕುಸಿತ ಕಂಡು, ಜುಲೈನಲ್ಲಿ 51,000 ರೂಪಾಯಿ .

ಇನ್ನು ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಆಗಸ್ಟ್‌ 7ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 43,099 ರೂಪಾಯಿ, ಗರಿಷ್ಠ ದರ 51,300 ರೂಪಾಯಿ ಹಾಗೂ ಸರಾಸರಿ ದರ 49,400 ರೂಪಾಯಿಗೆ ಮಾರಾಟ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+