ದಾವಣಗೆರೆ: ಪ್ರಸ್ತುತ ಕ್ವಿಂಟಾಲ್‌ ಅಡಿಕೆ ದರ ಎಷ್ಟಿದೆ ಗೊತ್ತಾ?-ತಾಲೂಕುವಾರು ದರಗಳ ಅಂಕಿಅಂಶಗಳ ವಿವರ ತಿಳಿಯಿರಿ

Arecanut Price: ಬಂಗಾರ, ಬೆಳ್ಳಿ ದರದಂತೆ ಅಡಿಕೆ ದರದಲ್ಲೂ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ಕಳೆದ ಒಂದು ವಾರದಿಂದಲೂ ಏರಿಕೆಯಾಗುತ್ತಿದ್ದು, ಇದೀಗ ಇಂದು (ಜೂನ್‌ 17) ದಾವಣಗೆರೆ ಜಿಲ್ಲೆಯಲ್ಲಿ ದಿಢೀರ್‌ ದರ ಇಳಿಕೆಯಾಗಿದೆ. ಹಾಗಾದರೆ ತಾಲೂಕುವಾರು ಕ್ವಿಂಟಾಲ್‌ ಅಡಿಕೆ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ ಇದೀಗ ಇಂದು (ಜೂನ್‌ 17) ದಿಢೀರ್ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದರಿಂದ ಬೆಳೆಗಾರರಿಗೆ ತುಸು ನಿರಾಸೆ ಆದಂತಾಗಿದೆ. ಇನ್ನು ಜೂನ್ ಮೊದಲ ವಾರ 55,000 ರೂಪಾಯಿಯತ್ತ ಮುಟ್ಟಿದ್ದ ದರ, ಎರಡನೇ ವಾರ 54,000 ಕೆಳಗೆ ಇಳಿಕೆಯಾಗಿದೆ.

Arecanut Price details in davanagere district on june 17th 2024 know details

ಇನ್ನು ಇಂದು (ಜೂನ್‌ 17) ಗರಿಷ್ಠ‌ ಬೆಲೆ ಕ್ವಿಂಟಲ್‌ಗೆ 53,770 ರೂಪಾಯಿ ಆಗಿದ್ದರೆ, ಕನಿಷ್ಠ ಬೆಲೆ 46,000 ರೂಪಾಯಿ ಆಗಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ 330 ರೂಪಾಯಿ ಇಳಿಕೆಯಾಗಿದೆ.2023ರ ಜುಲೈನಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು.

ಇನ್ನು ಕಳೆದ ವಾರದಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಿಸಿಲಿನ ತಾಪಮಾನದ ಪ್ರಮಾಣ ಕಡಿಮೆಯಾಗಿದೆ. ಕಳೆದ ಬಾರಿಯ ಬರದಿಂದ ಬೋರ್‌ ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಆಗಿತ್ತು. ಆದರೆ ಇದೀಗ ಸ್ವಲ್ಪ ಚೇತರಿಕೆ ಆಗುತ್ತಿದೆ. ಜಿಲ್ಲೆಯಲ್ಲಿ ಇದೀಗ ಉತ್ತಮ ಮುಂಗಾರು ಮಳೆ ಆಗುತ್ತಿದ್ದು, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿದೆ. ಆದರೆ ಮತ್ತೊಂದೆಡೆ ಇದೀಗ ದರ ಇಳಿಕೆಯಾಗಿರುವುದರಿಂದ ತುಸು ಮಂದಹಾಸ ಮಾಯವಾಗಿದೆ.

2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ಮುಟ್ಟಿದ್ದು, ಫೆಬ್ರವರಿಯಲ್ಲಿ‌ ದಿಢೀರ್‌ 48,000 ರೂಪಾಯಿಗೆ ಇಳಿಕೆಯಾಗಿತ್ತು. ಮಾರ್ಚ್‌ನಲ್ಲಿ ತುಸು ಚೇತರಿಕೆ ಕಂಡು 50,000 ತಲುಪಿತ್ತು. ಏಪ್ರಿಲ್‌ನಲ್ಲಿ ಗರಿಷ್ಠ 54,000 ರೂಪಾಯಿ ಮುಟ್ಟಿತ್ತು. ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿ ತಲುಪಿ, ಮತ್ತೇ ಇಳಿಕೆ ಆಗಿತ್ತು. ಅಷ್ಟೇ ಅಲ್ಲದೆ ಜೂನ್ ತಿಂಗಳ ಎರಡನೇ ವಾರ ಮತ್ತೆ ಇಳಿಕೆಯಾಗಿದ್ದು, ಇದರಿಂದ ರೈತರಲ್ಲಿ ತುಸು ಆತಂಕ ಉಂಟಾದಂತಾಗಿದೆ.

ಅದರಲ್ಲೂ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಇಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ದರ 46,000 ರೂಪಾಯಿ, ಗರಿಷ್ಠ ದರ 53,770 ರೂಪಾಯಿ ಹಾಗೂ ಸರಾಸರಿ ದರ 52,622 ರೂಪಾಯಿಗೆ ಮಾರಾಟ ಆಗಿದೆ. ಇನ್ನಯ ಬೆಟ್ಟೆ ಅಡಿಕೆ ಗರಿಷ್ಠ ದರ 38,170 ರೂಪಾಯಿ ಆಗಿದೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಜೂನ್‌ ತಿಂಗಳ ಆರಂಭದಿಂದಲೂ ಜಿಲ್ಲೆಯಲ್ಲಿ ಮುಂಗಾರು ಚುರುಕು ಪಡೆದಿತ್ತು. ಆದರೆ ಇದೀಗ ದಿಢೀರ್‌ ಮಳೆರಾಯನ ಆರ್ಭಟ ಕಡಿಮೆಯಾಗಿ ತಾಪಾಮಾನದ ಪ್ರಮಾಣ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಹವಾಮಾನ ಇಲಾಖೆ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿರುವುದರಿಂದ ಅಡಿಕೆ ಬೆಳೆಗಾರರು ದರ ಮತ್ತೆ ಏರಿಕೆಯಾಗುವ ಭರವಸೆಯನ್ನು ಮಾತ್ರ ಕಳೆದುಕೊಂಡಿಲ್ಲ. ಅದೇನೇ ಇರಲಿ ಉತ್ತ ಮಳೆಯಾಗಿ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾಗಲಿ ಎನ್ನುವುದೇ ನಮ್ಮ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+