ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಮಂದಿಗೆ ಡೇಂಜರ್ ಆಗುತ್ತಾರಾ ಪೇಶೆಂಟ್ ನಂಬರ್-556?

|
Google Oneindia Kannada News

ದಾವಣಗೆರೆ, ಏಪ್ರಿಲ್.30: ಕೊರೊನಾ ವೈರಸ್ ಸೋಂಕಿತರೆಲ್ಲ ಗುಣಮುಖರಾಗಿ ಹಸಿರು ವಲಯಕ್ಕೆ ಸೇರ್ಪಡೆಯಾಗಿದ್ದ ದಾವಣಗೆರೆಯಲ್ಲಿ ಸಾಲು ಸಾಲಾಗಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗುತ್ತಿರುವುದು ಆಂತಕವನ್ನು ಹೆಚ್ಚಿದೆ.

Recommended Video

ಗೋವಿನ ಸೇವೆಯನ್ನು ಹೀಗೂ ಮಾಡಬಹುದಾ ? | Oneindia Kannada

ಬುಧವಾರ ನರ್ಸ್ ಒಬ್ಬರಲ್ಲಿ ಕೊವಿಡ್-19 ಸೋಂಕು ಪತ್ತೆಯಾಗಿರುವ ಬೆನ್ನಲ್ಲೇ ಗುರುವಾರ ಮತ್ತೊಬ್ಬ ವೃದ್ಧನಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಇರುವುದು ಪತ್ತೆಯಾಗಿದೆ. ನರ್ಸ್ ಹಾಗೂ ವೃದ್ಧನಿಗೆ ಸೋಂಕು ತಗಲಿರುವು ಮೂಲ ಬೇರೆ ಬೇರೆ ಆಗಿರುವುದು ಮತ್ತಷ್ಟು ತಲೆನೋವು ತಂದಿದೆ.

 ಗ್ರೀನ್ ಝೋನ್‌ಗೆ ಸೇರಿದ ಬೆನ್ನಲ್ಲೇ ದಾವಣಗೆರೆ ಬೆನ್ಹತ್ತಿದ ಕೊರೊನಾ ಗ್ರೀನ್ ಝೋನ್‌ಗೆ ಸೇರಿದ ಬೆನ್ನಲ್ಲೇ ದಾವಣಗೆರೆ ಬೆನ್ಹತ್ತಿದ ಕೊರೊನಾ

ಕಳೆದ ಏಪ್ರಿಲ್.27ರಂದು ಉಸಿರಾಟ ತೊಂದರೆ ನಗರದ ಚಿಗಟೇರಿ ಆಸ್ಪತ್ರೆಗೆ ದಾಖಲಾದ ವೃದ್ಧನ ರಕ್ತ ಮತ್ತು ಗಂಟಲು ಮಾದರಿಯನ್ನು ಶಿವಮೊಗ್ಗದ ಕೊರೊನಾ ವೈರಸ್ ಸೋಂಕು ಪತ್ತೆ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಗುರುವಾರ ಅದರ ವರದಿ ಬಂದಿದ್ದು ವೃದ್ಧಿಗೆ ಸೋಂಕು ಇರುವುದು ದೃಢಪಟ್ಟಿದೆ.

ವೃದ್ಧನಿಗೆ 9 ಮಂದಿ ಜೊತೆ ಪ್ರಾಥಮಿಕ ಸಂಪರ್ಕ

ವೃದ್ಧನಿಗೆ 9 ಮಂದಿ ಜೊತೆ ಪ್ರಾಥಮಿಕ ಸಂಪರ್ಕ

ದಾವಣಗೆರೆಯ ಜಾಲಿನಗರ ನಿವಾಸಿ ಆಗಿರುವ 69 ವರ್ಷದ ವೃದ್ಧನಿಗೆ 9 ಮಂದಿ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಕೊರೊನಾ ವೈರಸ್ ಸೋಂಕಿತ ವೃದ್ಧನ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ವೃದ್ಧನ ಮನೆಯಲ್ಲಿದ್ದ ಸಂಬಂಧಿಕರನ್ನೆಲ್ಲ ಪ್ರತ್ಯೇಕವಾಗಿರಿಸಿದ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ.

ದಾವಣಗೆರೆಯಲ್ಲಿ ಅಗನತ್ಯ ಸಂಚಾರಕ್ಕೆ ಕಡಿವಾಣ

ದಾವಣಗೆರೆಯಲ್ಲಿ ಅಗನತ್ಯ ಸಂಚಾರಕ್ಕೆ ಕಡಿವಾಣ

ಹಸಿರು ವಲಯಕ್ಕೆ ಸೇರ್ಪಡೆಯಾಗಿರುವ ದಾವಣಗೆರೆಯಲ್ಲಿ ಮೇಲಿಂದ ಮೇಲೆ ಎರಡು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆ ನಗರ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಹೊರತುಪಡಿಸಿ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಮನೆ ಮನೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಸಿದ್ಧತೆ

ಮನೆ ಮನೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಸಿದ್ಧತೆ

ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರುವ ಆಜಾದ್ ನಗರ ಹಾಗೂ ಜಾಲಿನಗರಗಳಲ್ಲಿ ಕ್ವಾರೆಂಟೈನ್ ಝೋನ್ ಗಳನ್ನು ತೆರೆಯಲಾಗಿದೆ. ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವೇ ಕ್ರಮ ತೆಗೆದುಕೊಳ್ಳಲಿದೆ.

ಕೊರೊನಾ ಸೋಂಕಿತರ ದಿಗ್ಬಂಧನಕ್ಕೆ 743 ಕೊಠಡಿ

ಕೊರೊನಾ ಸೋಂಕಿತರ ದಿಗ್ಬಂಧನಕ್ಕೆ 743 ಕೊಠಡಿ

ಗುರುವಾರ ಕೊರೊನಾ ವೈರಸ್ ಪತ್ತೆಯಾದ 69 ವರ್ಷದ ವೃದ್ಧನ ಸಂಪರ್ಕದಲ್ಲಿರುವ 9 ಮಂದಿ ಹಾಗೂ ಸೋಂಕಿತ ನರ್ಸ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಶಂಕಿತರನ್ನು ದಿಗ್ಬಂಧನದಲ್ಲಿ ಇರಿಸಲು ಜಿಲ್ಲಾಡಳಿತವು ಈಗಾಗಲೇ 743ಕ್ಕೂ ಅಧಿಕ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

English summary
69-Year Old Man Get Coronavirus Positive In Davanagere. Total Cases Rised To Two In City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X