ಗಂಡನ ಮೃತದೇಹ ನೋಡಿ, ಮಗುವಿನೊಂದಿಗೆ ಚಲಿಸುತ್ತಿದ್ದ ಲಾರಿ ಕೆಳಗೆ ಬಿದ್ದ ಪತ್ನಿ
ಚಿತ್ರದುರ್ಗ, ಆಗಸ್ಟ್ 3: ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ಪತ್ನಿ, ಹೆದ್ದಾರಿಯಲ್ಲಿ ತನ್ನ ಮಗುವಿನೊಂದಿಗೆ ತಾನೂ ಆತ್ಮಹತ್ಯೆಗೆ ಮುಂದಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗ ನಾರಾಯಣಪ್ಪ (35) ಇಂದು ಬೆಳಿಗ್ಗೆ ಕೆಳಗೋಟೆ ಬಡಾವಣೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಆತ್ಮಹತ್ಯೆಯನ್ನು ಕಂಡು ಆಘಾತಗೊಂಡ ಪತ್ನಿ ರಮ್ಯಾ (30) ತಾನೂ ಮಗುವಿನ ಜತೆ ಹೆದ್ದಾರಿಗೆ ಬಂದು ಲಾರಿ ಕೆಳಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಘಟನೆಯಲ್ಲಿ 2 ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ರಮ್ಯಾ ಅವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲೇ ಇದ್ದ ಸ್ಥಳೀಯರು ತೀವ್ರ ಗಾಯಗೊಂಡಿರುವ ರಮ್ಯಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಮುಂದುವರಿದಿದೆ. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.











Click it and Unblock the Notifications