ಮಕ್ಕಳ ಎದುರೇ ಆತ್ಮಹತ್ಯೆಗೆ ಶರಣಾದ ಮಹಿಳೆ ಹಾಗೂ ಆಕೆ ಗೆಳೆಯ
ಚಿತ್ರದುರ್ಗ, ಸೆಪ್ಟೆಂಬರ್ 8: ಅಪರಿಚಿತರಿಬ್ಬರು ಲಾಡ್ಜ್ ವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ. ವಿಜಯಪುರ ಮೂಲದ ಸುಮಂಗಲಾ (26), ಪವನ್ (28) ಆತ್ಮಹತ್ಯೆಗೆ ಶರಣಾದವರು. ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಇತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮದ್ದೂರಲ್ಲಿ ಅನೈತಿಕ ಸಂಬಂಧಕ್ಕೆ ರೌಡಿಶೀಟರ್ ಬಲಿ
ಅಂದ ಹಾಗೆ, ಆರು ತಿಂಗಳ ಹಿಂದೆ ಸುಮಂಗಲಾಳನ್ನು ಆಕೆಯ ಗಂಡ ಕೃಷ್ಣಪ್ಪಗೌಡ ಬಿಟ್ಟು ಹೋಗಿದ್ದಾನೆ. ಅಂದಿನಿಂದ ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಮುಂದುವರೆದಿತ್ತು. ಭಾನುವಾರದಂದು ತನ್ನ ಮಕ್ಕಳ ಎದುರಲ್ಲೇ ಸುಮಂಗಲಾ ಹಾಗೂ ಆಕೆಯ ಜತೆಯಲ್ಲಿ ಇದ್ದ ಪವನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಮಂಗಲಾಗೆ ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಆ ಮಕ್ಕಳ ಎದುರಿಗೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಮಕ್ಕಳ ಸ್ಥಿತಿ ನೆನೆದು ಎಂಥವರ ಮನಸ್ಸು ಕರಗುವಂತಿತ್ತು. ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.