ಮೊದ್ಲು ಜಾತಿ ಬಯ್ಯೋದು, ಬಳಿಕ ಕಾಲು ಹಿಡಿಯೋದು: ತಿಪ್ಪಾರೆಡ್ಡಿ ಹೀಗೆ ವಾಗ್ದಾಳಿ ನಡೆಸಿದ್ದು ಯಾರ ವಿರುದ್ಧ ಹಾಗೂ ಯಾಕೆ?
ಚಿತ್ರದುರ್ಗ, ಮಾರ್ಚ್, 31: ಒಂದು ಕಡೆ ಬಿಸಿಲಿನ ಧಗೆ ಏರುತ್ತಿದ್ದರೆ, ಮತ್ತೊಂದೆಡೆ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿ. ಅಲ್ಲದೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದು, ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಇನ್ನು "ಮೊದಲು ಜಾತಿ ಬಯ್ಯೋದು, ನಂತರ ಕಾಲು ಹಿಡಿಯೋದು. ಅವನಿಗೆ ಒಳ್ಳೆಯದಾಗಲ್ಲ," ಎಂದು ಹಾಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿರುದ್ಧ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಾಗಾದರೆ ಇನ್ನು ಏನೆಲ್ಲ ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಚಿತ್ರದುರ್ಗ ನಗರದ ತಮ್ಮ ನಿವಾಸದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂ.ಚಂದ್ರಪ್ಪ ವಿರುದ್ಧ ಮಾತಿನ ಉದ್ದಕ್ಕೂ ಹರಿಹಾಯ್ದಿದ್ದಾರೆ. ನಿನ್ನೆ ಸ್ವಾಭಿಮಾನ ಸಭೆಯಲ್ಲಿ ನನ್ನ ಮಗನಿಗೆ ಟಿಕೆಟ್ ತಪ್ಪಿಸಲು ಮಾಜಿ ಶಾಸಕರೊಬ್ಬರು ಕಾರಣ ಎಂದು ಚಂದ್ರಪ್ಪ ಹೇಳಿದ್ದರು. ಈ ಹೇಳಿಕೆಗೆ ತಿಪ್ಪಾರೆಡ್ಡಿ ಕೆಂಡಾಮಂಡಲ ಆಗಿದ್ದಾರೆ.

ನಿನ್ನೆ ನಮ್ಮ ಯಡಿಯೂರಪ್ಪನವರ ಬಗ್ಗೆ ಏಕವಚನದಲ್ಲಿ ನಾಯಕನೊಬ್ಬ ಮಾತನಾಡಿದ್ದಾನೆ. ನಾನು ಇನ್ಮೇಲೆ ಅವನನ್ನು ಏಕವಚನದಲ್ಲೇ ಮಾತನಾಡಿಸ್ತೇನೆ. ನಿನ್ನೆ ಮಾತನಾಡಿದ ನಾಯಕ ಆತ ಯಡಿಯೂರಪ್ಪ ಅವರಿಗಿಂತ ದೊಡ್ಡವನಾ?, ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನಾನು ಪಕ್ಷ ಕೇಳಿದಂತೆ ಸರ್ವೆ ವರದಿಯನ್ನು ಪ್ರಾಮಾಣಿಕವಾಗಿ ನೀಡಿದ್ದೇನೆ. ನಾನು ಯಾವುದೇ ಪೋತಪ್ಪ ನಾಯಕನಿಗೆ ಟಿಕೆಟ್ ತಪ್ಪಿಸಿಲ್ಲ, ಇವನ ಪುತ್ರನ ಹೆಸರು ಟಿಕೆಟ್ ಸಿಗುವ ಹಂತದಲ್ಲೇ ಇರಲಿಲ್ಲ. ಈ ಪೋತಪ್ಪ ನಾಯಕನ ಮಗನಿಗೆ ಟಿಕೆಟ್ ಸಿಗುತ್ತದೆ ಅನ್ನೋ ಭರವಸೆ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನೊಬ್ಬನೇ ಬಿಜೆಪಿ ಶಾಸಕ ಅಂತಾ ಬೀಗಿ ಹೇಳಿದ್ದಾರೆ. ಅವನ ಮಗನಿಗೆ ಟಿಕೆಟ್ ಕೊಡೋದಾಗಿ ಬಿಎಸ್‌ವೈ, ಸಂತೋಷ್ ಜಿ ಹೇಳಿದ್ರು ಅಂದಿದ್ದಾರೆ. ಆದರೆ ನಮ್ಮಲ್ಲಿ ಎಲ್ಲಾ ವಿಚಾರಗಳು ಕಮಿಟಿ ಮೂಲಕ ಹೋಗುತ್ತದೆ. ಬಿಎಸ್‌ವೈ ಕೆಜೆಪಿ ಪಕ್ಷ ಮಾಡಿದಾಗ ನಾನು ಬಿಜೆಪಿಗೆ ರಾಜಿನಾಮೆ ನೀಡಿದೆ. ಬಿ.ಎಸ್.ಯಡಿಯೂರಪ್ಪ ಬೆಂಬಲಕ್ಕೆ ನಿಂತೆ ಅಂತಾ ಹೇಳಿದ್ದಾನೆ.
ಅದರ ಫಲವಾಗಿಯೇ ಚಂದ್ರಪ್ಪ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾದರು. ಪಾಪ ಆ ಮಹಾನ್ ನಾಯಕ ಅದನ್ನು ಮರೆತಂತೆ ಕಾಣಿಸುತ್ತದೆ. ನನ್ನ ಮಗನಿಗೆ ಕೊಡದಿದ್ದರೆ ಜನಾರ್ಧನ ಸ್ವಾಮಿಗೆ ಕೊಡಿ ಅಂದಿದ್ದಾನೆ. ಆದರೆ ಕಳೆದ ಬಾರಿ ಕೋರ್ ಕಮಿಟಿಯಲ್ಲಿ ಜನಾರ್ಧನ್ ಸ್ವಾಮಿಗೆ ಟಿಕೆಟ್ ಕೊಡಬೇಡಿ ಅಂತಾ ಅವನೇ ಹೇಳಿದ್ದ ಎಂದರು.
ನಗರ ಕ್ಷೇತ್ರದಲ್ಲಿ ನಾನು ಬಂದು ಶಾಸಕರನ್ನು ಗೆಲ್ಲಿಸಿದೆ ಎಂದು ಹೇಳಿದ್ದಾರೆ. ಆದರೆ ನಾನು ಸಿಟಿಯಲ್ಲಿ ಎರಡು ಬಾರಿ ಸ್ವತಂತ್ರವಾಗಿ ಗೆದ್ದವನು, ನನ್ನ ಸಹೋದರ ಕೂಡ ಗೆದ್ದಿದ್ದರು. ಹೊಳಲ್ಕೆರೆ ಶಾಸಕ, ರೋಡಿನ ರಾಜ ಅಂತಾರೆ. ನಾನು ಪ್ರಚಾರಕ್ಕೆ ಹೋದ್ರೆ ಅವನು ಆ ಕಡೆ ಹೋಗ್ತಿದ್ದ, ಅವನ ಉದ್ದೇಶ ಎಂಪಿ, ಎಂಎಲ್ಎ ಸೋಲಬೇಕು ಅಂತಾ ಇತ್ತು ಎಂದು ವಾಗ್ದಾಳಿ ನಡೆಸಿದರು.
ತಾನೊಬ್ಬನೇ ಗೆದ್ದರೆ, ಮಂತ್ರಿ ಆಗಬೇಕು ಅಂತಾ ಉದ್ದೇಶ, ನನ್ನನ್ನು ಎಂಎಲ್‌ಸಿ ಇವನೇ ಮಾಡಿದ್ರೆ ಇವನ್ಯಾಕೆ ಎಂಎಲ್ಎ ಚುನಾವಣೆಯಲ್ಲಿ ಸೋತ ಎಂದು ನುಡಿದರು. ಇನ್ನು ಮೂರು ಸಲ ಆತ ಸೋತಿದ್ದು ಗೊತ್ತು, ಇನ್ನೊಂದು ಹೇಳ್ತೀನಿ, ಈತ ಜನತಾ ಬಜಾರ್‌ದಲ್ಲಿ ಕೈ ಕಾಲು ಹಿಡಿದುಕೊಂಡು ಅಲ್ಲಿ ಸೀಮೆಎಣ್ಣೆ ಹಂಚೋಕೆ ಸೇರಿದ್ದ. ಅದೇ ವಿಚಾರ ಇಟ್ಟುಕೊಂಡು ಮುನ್ಸಿಪಲ್ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ. ಬೇರೆಯವರು ಗೆದ್ದಾಗ ನನ್ನಿಂದಲೇ ಗೆದ್ದ ಅಂತಾ ಹೇಳಿಕೊಳ್ಳಿತ್ತಾನೆ ಎಂದು ಹರಿಹಾಯ್ದರು.
ಕಳೆದ ಚುನಾವಣೆಯಲ್ಲಿ ನನ್ನ ವಿರೋಧಿಯ ಪರ ಹಣ ಹಂಚೋಕೆ ಹೋಗಿದ್ರು. ಅದನ್ನು ನಾನು ಅವನ ಮಗನ, ಹಾಗೂ ಅವನ ಮುಂದೆಯೇ ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ರಘು ಆಚಾರ್ ಜೊತೆ ಮಾತನಾಡಿದ ಕಾಲ್ ರೆಕಾರ್ಡರ್ ಇದೆ. ಈತನ ಸ್ವಂತ ಊರು ಚಳ್ಳಕೆರೆಯ ದೊಡ್ಡುಳ್ಳಾರ್ತಿ. ಅಲ್ಲಿ ಈತ ಹೋದರೆ ಎಷ್ಟು ಜನ ಸೇರುತ್ತಾರೆ ನೋಡೋಣ. ಅಲ್ಲಿಂದ ಕಣಕ್ಕೆ ಇಳಿದು ಗೆದ್ದರೆ ನಾನು ರಾಜಕೀಯದಿಂದ ದೂರ ಇರುತ್ತೇವೆ ಎಂದರು.
ಆತ ಸತ್ತರೆ 20,000 ಜನ ಸೇರುತ್ತಾರೆ, ನಾನು ಸತ್ತರೆ 4 ಜನ ಬರಲ್ಲಾ ಅಂದಿದ್ದಾರೆ. ಇದನ್ನು ಟ್ರಯಲ್ ಹೇಗೆ ನೋಡಿದು ಅಂತಾ ಗೊತ್ತಾಗುತ್ತಿಲ್ಲ. ಇವನು ಸತ್ತಾಗ ಸೇರೋರು ಇವನನ್ನು ಬಯ್ಯೋಕೆ ಸೇರಬಹುದು ಅಷ್ಟೇ. ಈ ರೀತಿ ಬೈದರೆ ಗೂಟದ ಕಾರು ಕೊಡುತ್ತಾರೆ ಅಂತಾ ಅವರ ವಿಚಾರವಾಗಿದೆ. ಎಲ್ಲರನ್ನು ಹೆದರಿಸಿ ರಾಜಕಾರಣ ಮಾಡುತ್ತಾರೆ. ಹೊಳಲ್ಕೆರೆ ಮೀಸಲು ಕ್ಷೇತ್ರ 2026ಕ್ಕೆ ತೆಗೆದುಹಾಕುತ್ತಾರೆ. ಆಗ ಸ್ವತಂತ್ರವಾಗಿ ಗೆದ್ದು ತೋರಸಲಿ ನೋಡೋಣ ಅಂತಾ ಸವಾಲು ಹಾಕಿದರು.
ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ ಮೂಲಕ ರಾಜಿಗೆ ಕರೆದಿದ್ದರು. ಜೋಗಿಮಟ್ಟಿಯಲ್ಲಿ ರಾಜಿ ಪಾರ್ಟಿ ಕರೆದಿದ್ದರು. 30 ವರ್ಷದ ಹಳೆಯ ವೈಶಮ್ಯ ಮರೆಯೋಣ ಅಂತಾ ಹೇಳಿದ್ದರು. ಹೀಗೆಲ್ಲಾ ಆದ್ರೆ ಮತ್ಯಾಕೆ ರಾಜಿಗೆ ಕರೆದರು? ನನ್ನ ಕ್ಷೇತ್ರದ ಹೆಸರು ಹೇಳಿ ತನ್ನ ಕ್ಷೇತ್ರಕ್ಕೆ ಅನುದಾನ ತೆಗೆದುಕೊಂಡು ಹೋದ. ಮೊದಲು ಜಾತಿ ಬೈಯ್ಯೋದು, ನಂತರ ಕಾಲು ಹಿಡಿಯೋದು ಅವನಿಗೆ ಒಳ್ಳೆಯದಲ್ಲ. ನಾವ್ಯಾರೂ ಸುಪ್ರೀಂ ಅಲ್ಲ, ಒಂದು ಕಾಲ ಬರುತ್ತದೆ. ಇವನು ವಿಜಯೇಂದ್ರ ಕಾಲು ಹಿಡಿದು ಕೆಎಸ್‌ಆರ್‌ಟಿಸಿ ಚೇರ್‌ಮನ್ ಆಗಿದ್ದನು ಎಂದು ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.











Click it and Unblock the Notifications