ಪ್ರಧಾನಿ ಮೋದಿ ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದೊ ತೆಗೆದು ಹೊಡೀತಿನಿ-ಹೀಗೆ ಹೇಳಿದ್ಯಾರು ಹಾಗೂ ಕಾರಣ ಏನು?

ಚಿತ್ರದುರ್ಗ, ಮಾರ್ಚ್‌, 10: ಪ್ರಧಾನಿ ನರೇಂದ್ರ ಮೋದಿ ನನ್ನ ಕೈಗೆ ಸಿಕ್ಕರೆ ಕಾಲಲ್ಲಿರೋದು ತೆಗೆದು ಹೊಡಿತಿನಿ ಎಂದು ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿಎಸ್ ಮಂಜುನಾಥ್ ಹೇಳಿದ್ದಾರೆ. ಹಾಗಾದರೆ ಅವರು ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದೇಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹರಿಶ್ಚಂದ್ರ ಘಾಟ್ ಬಳಿ ಶನಿವಾರ ಹಮ್ಮಿಕೊಂಡಿದ್ದ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಬಹಿರಂಗ ಕಾರ್ಯಕ್ರಮದಲ್ಲಿ ಜಿ.ಎಸ್.ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಸಚಿವ ಡಿ. ಸುಧಾಕರ್, ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಇದ್ದ ವೇದಿಕೆಯ ಮೇಲೆಯೇ ವಾಗ್ದಾಳಿ ನಡೆಸಿರುವ ವೀಡಿಯೋ ಇದೀಗ ವೈರಲ್ ಆಗಿದೆ.

What did State Labor Welfare Board Vice President say on LPG cylinder price reduce

"ಲೋಕಸಭೆ ಚುನಾವಣೆ ಬರುತ್ತಿದ್ದಂತೆ ಸಿಲಿಂಡರ್ ಬೆಲೆ 100 ರೂಪಾಯಿ ಕಡಿಮೆ ಮಾಡಿದ್ದಾರೆ. ಈಗ್ಯಾಕಲೇ ಮಾಡ್ತಿಯಾ, ಈ ದೇಶದ ಪ್ರಜೆಗಳಾಗಿ ನಾವೆಲ್ಲ ಪ್ರಶ್ನೆ‌ ಮಾಡಬೇಕು. ಇಷ್ಟು ದಿನ 95 ಸಾವಿರ ಒಂದು ಲಕ್ಷ ಮುಖಕ್ಕೆ ಹೊಡೆದು ಕಿತ್ಕೊಂಡು ಈಗ 100 ಫ್ರೀ ಅಂತಿದಾನೆ," ಎಂದು ಏಕವಚನದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. "465 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1,200 ರೂಪಾಯಿ ಯಾಕೆ ಮಾಡ್ದೆ ಅಂತಾ ನಾವು ಪ್ರಶ್ನೆ ಮಾಡಬೇಕು. ಹಾಗೆಯೇ ಚುನಾವಣೆ ಆದ ಮೇಲೆ ಸಿಲಿಂಡರ್ ದರ 1,400 ಮಾಡ್ತೀಯಾ ಅಂತಾ ಪ್ರಶ್ನೆ ಮಾಡ್ಬೇಕು," ಎಂದರು.

"ಲಕ್ಷ ರೂಪಾಯಿ ನಮ್ಮಿಂದ ದೋಚಿ, ನೂರು ಸಿಲಿಂಡರ್ ರೇಟ್ ಕಡಿಮೆ ಮಾಡಿದ್ರು, ನಾವು ದೇವಸ್ಥಾನ ಕಟ್ಟಲಿಲ್ಲ, ನಾವು ಅದನ್ನು ವಿರೋಧ ಮಾಡಿಲ್ಲ. ನಮ್ಮ ಸಂಸ್ಕೃತಿಯೂ ಅದಲ್ಲ, ನಾವು ಯೋನಿವರ್ಸಿಟಿಗಳನ್ನು ಕಟ್ಟಿದ್ದೇವೆ. ಅದರಲ್ಲಿ ಕಲಿತವರೇ ಈಗ ಬಿಜೆಪಿಯಲ್ಲಿ ನಿಂತು, ಕಾಂಗ್ರೆಸ್ ಏನು ಮಾಡಿದೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನವರು, ದೇಶದ ಪ್ರಜೆಗಳು ಮಾತನಾಡುವುದಿಲ್ಲ," ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿ.ಎಸ್. ಮಂಜುನಾಥ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+