Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ?-ಅಂಕಿಅಂಶಗಳ ವಿವರ ಇಲ್ಲಿದೆ

Vani Vilasa Sagara Dam: ಮಧ್ಯ ಕರ್ನಾಟಕದ, ಬಯಲು ಸೀಮೆಯ ರೈತರ ಏಕೈಕ ಜೀವನಾಡಿಯಾಗಿರುವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಪ್ರಸ್ತುತ ಸಾಲಿನಲ್ಲಿ 1.65 ಅಡಿ ಹೊಸ ಮಳೆ ನೀರು ಸಂಗ್ರಹವಾಗಿದೆ.

ಡ್ಯಾಂ ಮೇಲ್ಭಾಗದ ಚಿಕ್ಕಮಗಳೂರು, ತರೀಕೆರೆ, ಅಜ್ಜಂಪುರ ಇನ್ನಿತರ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಿನ ಮಳೆ ನೀರು ವೇದಾವತಿ ನದಿ ಮೂಲಕ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹರಿದು ಬರುತ್ತಿದೆ.

Vani Vilasa Sagara Dam water level details on May 22 2024

ಜಲಾಶಯಕ್ಕೆ ಒಳಹರಿವು ತಗ್ಗಿದೆ. ಸೋಮವಾರ ಡ್ಯಾಂಗೆ 3,800 ಕ್ಯೂಸೆಕ್ ಒಳಹರಿವು ನೀರು ಹರಿದು ಬಂದಿತ್ತು. ನಂತರ ಮಂಗಳವಾರ 5,100 ಕ್ಯೂಸೆಕ್ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಮತ್ತೆ ಬುಧವಾರ ಡ್ಯಾಂಗೆ 4800 ಕ್ಯೂಸೆಕ್ ಒಳಹರಿವಿನಲ್ಲಿ ತಗ್ಗಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 113.65 ಅಡಿ ನೀರು ಇದೆ. ಪೂರ್ವ ಹಿಂಗಾರು ಮಳೆ ಆರಂಭದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ಈ ಭಾಗದ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಜಲಾಶಯ ಭರ್ತಿಯಾಗಿ ಕೋಡಿ ಬೀಳುವ ಸಾಧ್ಯತೆ ಹೆಚ್ಚಿದೆ.

ಮರೆಯಾದ ನೀರಿನ ಆತಂಕ: ಜಿಲ್ಲೆಯಲ್ಲಿ ಮಳೆಯಿಲ್ಲದೆ ರೈತರು ತತ್ತರಿಸಿ ಹೋಗಿದ್ದರು. ಅಡಿಕೆ, ತೆಂಗು, ಬಾಳೆ ಇನ್ನೀತರ ಬೆಳೆಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚ್ ಮಾಡಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದರು. ಇದೀಗ ಮಳೆ ಬಂದಿರುವುದರಿಂದ ಸದ್ಯಕ್ಕೆ ನೀರಿನ ಆತಂಕ ದೂರವಾಗಿದೆ.

2017ರಿಂದ 2018 ರವರೆಗೆ ಆವರಿಸಿದ್ದ ಭೀಕರ ಭರ ಜಲ ಮೂಲಗಳನ್ನು ಬರಿದಾಗಿಸಿತ್ತು. ಅಲ್ಲದೆ, 2019 ಮಾರ್ಚ್ ವೇಳೆಗೆ ಡ್ಯಾಂ ನೀರಿನ ಮಟ್ಟ ಕೇವಲ 61.5 ಅಡಿಗೆ ತಲುಪುವ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರನ್ನು ಆತಂಕಕ್ಕೆ ತಳ್ಳಿತ್ತು. ನೀರಿನ ಕೊರತೆಯಿಂದಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಎರಡು, ಮೂರು ತಲೆಗಳಿಂದ ಪೋಷಿಸಿಕೊಂಡು ಬಂದಿದ್ದ ಅಡಿಕೆ ತೋಟಗಳು ಒಣಗಿ ರೈತರನ್ನ ದಿವಾಳಿಯನ್ನಾಗಿ ಮಾಡಿತ್ತು. 2022ರಲ್ಲಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ರೈತರ ಬದುಕು ಮುನ್ನೆಲೆಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+