ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಾಚರಣೆಯಂದು ಚಿತ್ರದುರ್ಗ ಕೋಟೆಗೆ ಹರಿದುಬಂದ ಪ್ರವಾಸಿಗರ ದಂಡು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 1: ಮಹಾಮಾರಿ ಕೊರೊನಾ ನಡುವೆಯೂ ಹೊಸ ವರ್ಷವನ್ನು ಕೋಟೆನಾಡಿನ ಜನರು ಬಹಳ ಸರಳವಾಗಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಸ್ಥಳವಾದ ನಗರದ ಕೋಟೆಯೊಳಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ರವಾಸಿಗರ ದಂಡು ಹರಿದು ಬಂದಿದೆ.

ಹೊಸ ವರ್ಷದ ಮೊದಲ ದಿನದಂದು ಐತಿಹಾಸಿಕ ಚಿತ್ರದುರ್ಗ ಕೋಟೆಯನ್ನು ವೀಕ್ಷಿಸಲು ಕೈಯಲ್ಲಿ ಕೇಕ್, ಸಿಹಿ ತಿನಿಸುಗಳು, ತಂಪು ಪಾನೀಯಗಳು, ಇನ್ನಿತರ ತಿನಿಸುಗಳನ್ನು ಹಿಡಿದು ವಿವಿಧ ಜಿಲ್ಲೆಗಳಿಂದ ತಂಡೋಪತಂಡವಾಗಿ ಜನ ಸಾಗರ ಹರಿದು ಬಂದಿದೆ. ಕೋಟೆಯ ಇಕ್ಕೆಲಗಳಲ್ಲಿ ಎಲ್ಲಿ ನೋಡಿದರೂ ರಂಗು ರಂಗಿನ ಕಲರ್‌ಫುಲ್ ದಿರಿಸುಗಳಲ್ಲಿ ಪ್ರವಾಸಿಗರೇ ಎದ್ದು ಕಾಣುತಿದ್ದರು.

ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟದಂತೆ ಕಾಣುತ್ತಿದ್ದರು. ಕೋಟೆಯಲ್ಲಿ ಯುವಕ- ಯುವತಿಯರು, ಸ್ನೇಹಿತರು, ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಸಾವಿರಾರು ಪ್ರವಾಸಿಗರು ವೀಕ್ಷಿಸಿದ್ದು, ಕೇಕ್ ಕತ್ತರಿಸುವ ಮೂಲಕ ಪರಸ್ಪರ ಹೊಸ ವರ್ಷದ ವಿನಿಮಯದ ಸಂಭ್ರಮಚಾರಣೆ ಆಚರಿಸುವ ದೃಶ್ಯ ಕಂಡು ಬಂದಿತು.

Thousands Of Tourists Arrived to Chitradurga Fort on New Year Event

ಕೋಟೆಯ ಅಕ್ಕತಂಗಿ ಹೊಂಡ, ಗೋಪಾಲಸ್ವಾಮಿ ದೇವಸ್ಥಾನ, ಓಬ್ಬವನ ಕಿಂಡಿ, ಉಯ್ಯಾಲೆ ಕಂಬ ಹಾಗೂ ಚಂದ್ರವಳ್ಳಿ, ಮುರುಘಾಮಠ ಮತ್ತಿತರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕಂಡು ಬಂದರು. ಇನ್ನು ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಟಿಕೆಟ್ ಪಡೆದು ಕೋಟೆ ಪ್ರವೇಶಿಸಲು ಹರಸಾಹಸ ಪಡೆಬೇಕಾಯಿತು. ಉಳಿದಂತೆ ಮುರುಘಾ ಮಠದಲ್ಲಿಯೂ ಸಹ ಪ್ರವಾಸಿಗರು ತುಂಬಿ ತುಳುಕುತ್ತಿದ್ದರು. ಮುರುಘಾ ಮಠದಲ್ಲಿನ ಸುಂದರವಾದ ಪಾರ್ಕ್‌ನಲ್ಲಿ ಸೆಲ್ಫೀ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಚಿತ್ರದುರ್ಗದ ನಗರದ ನೀಲಕಂಠೇಶ್ವರ ದೇವಸ್ಥಾನ, ಬರಗೇರಮ್ಮ ದೇವಸ್ಥಾನ, ಮಾರಮ್ಮ ದೇವಸ್ಥಾನ ಸೇರಿದಂತೆ ಮತ್ತಿತರ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದರು. ಬೆಳಗಿನಿಂದಲೂ ಭಕ್ತರು ದೇವರ ದರ್ಶನ ಪಡೆದರು. ಇನ್ನೂ 2022ರ ವರ್ಷದ ಮೊದಲ ದಿನ ಶನಿವಾರವಾಗಿದ್ದರಿಂದ ಆಂಜನೇಯ, ರಂಗನಾಥ ಸ್ವಾಮಿ ಹಾಗೂ ಇತರ ದೇವಾಲಯಗಳಲ್ಲಿ ವಾರದ ವಿಶೇಷ ಪೂಜೆ ನಡೆಯಿತು.

Thousands Of Tourists Arrived to Chitradurga Fort on New Year Event

ಪ್ರವಾಸಿಗರನ್ನು ಕೈಬೀಸಿ ಕರೆದ ವಿವಿ ಸಾಗರ
ಚಿತ್ರದುರ್ಗದ ಏಕೈಕ ಜೀವನಾಡಿಯಾದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯವನ್ನು ವೀಕ್ಷಿಸಲು ಸುಮಾರು 4 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಬಂದಿದ್ದರು ಎಂದು ವಿಶ್ವೇಶ್ವರ ಜಲ ನಿಗಮದ ಇಂಜಿನೀಯರ್ ಪರುಶುರಾಮ್ ತಿಳಿಸಿದರು.

ಮುರ್ನಾಲ್ಕು ವರ್ಷಗಳ ಹಿಂದೆ ಸತತ ನೀರಿಲ್ಲದೆ ಬತ್ತಿ ಹೋಗಿದ್ದರಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಇದೀಗ 63 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 125 ಅಡಿ ನೀರು ತಲುಪಿರುವ ಮಾರಿಕಣಿವೆ ಜಲಾಶಯ ಈಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಡ್ಯಾಂ ಮೇಲೆ ಇರುವ ಮಂಟಪದ ಬಳಿ ಪ್ರವಾಸಿಗರು ಜಲಾಶಯ ವೀಕ್ಷಿಸಿದರು. ಜೊತೆಗೆ ಕೋಡಿ ಬೀಳುವ ಜಾಗದಲ್ಲಿ ಹಾಗೂ ರಂಗನಾಥ ಸ್ವಾಮಿ ದೇವಸ್ಥಾನ ಹಿಂಭಾಗದಲ್ಲಿ ಜನರು ಡ್ಯಾಂ ವೀಕ್ಷಣೆ ಮಾಡಿದರು.

ಜಲಾಶಯದ ಸುತ್ತಮುತ್ತಲಿನ ಸುಂದರವಾದ ಉತ್ತರೆ ಗುಡ್ಡ ಹಾಗೂ ಚತ್ರಿಗುಡ್ಡ ಹಚ್ಚಹಸಿರಿನಿಂದ ಕೂಡಿದ್ದು, ಪರಿಸರ ಪ್ರೇಮಿಗಳು ಕಣ್ತುಂಬಿಕೊಂಡರು. ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ, ಹಾಸನ ಮತ್ತಿತರ ಕಡೆಗಳಿಂದ ಪ್ರವಾಸಿಗರು ವಿವಿ ಸಾಗರವನ್ನು ವೀಕ್ಷಿಸಲು ಆಗಮಿಸಿದ್ದರು.

Thousands Of Tourists Arrived to Chitradurga Fort on New Year Event

ಇನ್ನು ಜಲಾಶಯದ ಬಳಿ ಇರುವ ಕಣಿವೆ ಮಾರಮ್ಮ ದೇವಿ ಹಾಗೂ ಹಾರನಕಣಿವೆ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರಿಂದ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಕಂಡು ಬಂದಿತ್ತು. ಇನ್ನು ವಿವಿ ಸಾಗರ ಜಲಾಶಯದ ಹತ್ತಿರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಭಕ್ತರು ಬೆಳಗಿನಿಂದಲೂ ದರ್ಶನ ಪಡೆದರು. ಇತ್ತ ಹೊಳಲ್ಕೆರೆ ನಗರದ ಗಣಪತಿ ದೇವಾಲಯದಲ್ಲಿ ಸಹ ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ನೂರಾರು ಭಕ್ತರು ಗಣಪತಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.

ಹೋಟೆಲ್‌ಗಳು ಖಾಲಿ ಖಾಲಿ
ಮಹಾಮಾರಿ ಕೊರೊನಾ ನಂತರ ಮತ್ತೊಂದು ಓಮಿಕ್ರಾನ್ ವೈರಸ್ ರಾಜ್ಯದಲ್ಲಿ ಕಾಣಿಸಿಕೊಂಡಿದ್ದು, ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರಿಂದ ರಾತ್ರಿ ಸಮಯದಲ್ಲಿ ಡಾಬಾ, ರೆಸ್ಟೋರೆಂಟ್, ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಜನರಿಲ್ಲದಿರುವುದು ಕಂಡು ಬಂದಿತ್ತು. ಹೇಳಿಕೊಳ್ಳುವಂತಹ ವ್ಯಾಪಾರ ನಡೆದಿಲ್ಲ ಎಂದು ಹೋಟೆಲ್ ಉದ್ಯಮಿಯೊಬ್ಬರು ತಿಳಿಸಿದರು.

ತುಂತುರು ಮಳೆ
ನೂತನ ವರ್ಷಾಚರಣೆಯ ಮೊದಲ ದಿನದಲ್ಲಿ ಹಿರಿಯೂರು ನಗರ ಸೇರಿದಂತೆ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕೆಲಕಾಲ ಬಟ್ಟೆ ನೆನೆಯುವಂತಹ ತುಂತುರು ಮಳೆ ಸುರಿಯಿತು. ವರ್ಷದ ಮೊದಲ ದಿನವೇ ಜಿಲ್ಲೆಯಲ್ಲಿ ಮಳೆರಾಯನ ದರ್ಶನವಾಗಿದೆ. ಶುಕ್ರವಾರ ರಾತ್ರಿ 8 ಸಮಯದಲ್ಲಿ ಬೆಂಗಳೂರಿನ ವಿವಿಧ ನಗರಗಳಲ್ಲಿ ತುಂತುರು ಮಳೆ ಸುರಿದಿತ್ತು.

English summary
More than 15 thousand Tourists came to see the historic Chitradurga Fort on New Year Event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X