ಕಾನೂನಿಗೆ ಒಕ್ಕಲಿಗ, ಲಿಂಗಾಯಿತ ಎಲ್ಲರೂ ಒಂದೇ: ಸಚಿವ ಶ್ರೀರಾಮುಲು
Recommended Video
ಡಿ ಕೆ ಶಿ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ ಶ್ರೀರಾಮುಲು | Oneindia Kannada
ಚಿತ್ರದುರ್ಗ, ಸೆಪ್ಟೆಂಬರ್ 11: "ಈ ದೇಶದಲ್ಲಿ ಒಕ್ಕಲಿಗ, ಲಿಂಗಾಯಿತ ಎಲ್ಲರಿಗೂ ಒಂದೇ ಕಾನೂನು. ಡಿ.ಕೆ.ಶಿವಕುಮಾರ್ ಅವರಿಗಾಗಿ ಕಾನೂನು ಬದಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ ಆರೋಗ್ಯ ಸಚಿವ ಶ್ರೀರಾಮುಲು.
ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಮಠದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, "ಬಿಜೆಪಿ ಒಕ್ಕಲಿಗರನ್ನು ಹತ್ತಿಕ್ಕುತ್ತಿಲ್ಲ. ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಇದೆ, ಯಾರನ್ನೂ ಹತ್ತಿಕ್ಕುವ ಉದ್ದೇಶ ಬಿಜೆಪಿಗೆ ಇಲ್ಲ. ಬಿಜೆಪಿ ನ್ಯಾಯ ಸಮ್ಮತ ಕೆಲಸ ಮಾಡುತ್ತಿದೆ. ಕಾನೂನು ಎಲ್ಲರಿಗೂ ಒಂದೇ, ಕಾನೂನು ಎತ್ತರ ಮಟ್ಟದಲ್ಲಿದೆ" ಎಂದು ಹೇಳಿದ್ದಾರೆ.

"ಬಹಳ ಮಂದಿ ಇಂದು ಡಿಕೆಶಿ ಬಂಧನ ಖಂಡಿಸಿ ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ. ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ ಆಸ್ತಿಪಾಸ್ತಿ ನಷ್ಟ ಮಾಡಬಾರದು. ಕಾನೂನಿಗೆ ನಾವು ಸಹಕಾರ ನೀಡಬೇಕು. ಯುಪಿಎ ಸರ್ಕಾರ ಅವಧಿಯಲ್ಲಿಯೂ ಈ ರೀತಿಯ ಘಟನಾವಳಿಗಳಾಗಿವೆ. ಅಂದು ಹೋರಾಟ ಮಾಡುವಾಗ ಸರ್ಕಾರದ ಆಸ್ತಿಪಾಸ್ತಿ ನಷ್ಟ ಮಾಡುವ ಕೆಲಸ ಆಗಿಲ್ಲ" ಎಂದು ತಿಳಿಸಿದ್ದಾರೆ.












Click it and Unblock the Notifications