ಕುರುಬರ ಮತ ಸೆಳೆಯಲು ಸಿದ್ದರಾಮಯ್ಯ ಪರ ರಾಮುಲು ಬ್ಯಾಟಿಂಗ್ : ತಿಪ್ಪೇಸ್ವಾಮಿ ಟೀಕೆ
ಚಿತ್ರದುರ್ಗ, ಆಗಸ್ಟ್ 16 : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಶ್ರೀರಾಮುಲು ಕುರುಬರ ಮತ ಸೆಳೆಯಲು ಸಿದ್ದರಾಮಯ್ಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಬದ್ಧ ಮಾಜಿ ಶಾಸಕ ನೆರ್ಲಗುಂಟೆ ತಿಪ್ಪೇಸ್ವಾಮಿ ಟೀಕಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಆದರೆ ನಾನು ಖುಷಿ ಪಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಆದರೆ ಆತ ಇಂತಹ ಹೇಳಿಕೆ ನೀಡಿ ಖುಷಿ ಪಡುವ ವ್ಯಕ್ತಿ ಅಲ್ಲ, ಕೇವಲ ಕಾಲೆಳೆಯಲು ಈ ರೀತಿ ಹೇಳಿದ್ದಾರೆ. ಸಿದ್ದರಾಮಯ್ಯ ತುಂಬಾ ಎತ್ತರವಾಗಿ ಬೆಳೆದಿದ್ದಾರೆ, ಅದಕ್ಕೆ ಈಗ ಒಲೈಕೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದ ತಿಪ್ಪೇಸ್ವಾಮಿ ಸಿದ್ದರಾಮಯ್ಯ ಬಗ್ಗೆ ಅಭಿಮಾನ ಇರುವವರು ಬಾದಾಮಿಯಲ್ಲಿ ಏಕೆ ಸ್ಪರ್ಧಿಸಿದ್ದರು ಎಂದು ಪ್ರಶ್ನಿಸಿದರು..
ರಾಷ್ಟ್ರಧ್ವಜಕ್ಕೆ ಗೌರವ ನೀಡುವುದನ್ನು ಕಾಂಗ್ರೆಸ್ನಿಂದ ಕಲಿಯಬೇಕಿಲ್ಲ: ಸಚಿವ ಬಿಸಿ ಪಾಟೀಲ್
ಮುಖ್ಯಮಂತ್ರಿ ಆಗುತ್ತೇನೆ ಎಂದು ಶ್ರೀರಾಮುಲು ನಾಯಕ ಸಮುದಾಯಕ್ಕೆ ಮೋಸ ಮಾಡಿದ ವ್ಯಕ್ತಿ. ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಎಸ್‌ಟಿ ಮೀಸಲಾತಿ ಬಗ್ಗೆ ಹೇಳಿ ಸಮಾಜದ ಸ್ವಾಮೀಜಿಯವರನ್ನ 180 ದಿನಗಳಿಂದ ಧರಣಿ ಕೂರಿಸಿದ್ದಾರೆ ಎಂದು ಟೀಕಾ ಪ್ರಹಾರ ಮಾಡಿದರು.
ಶ್ರೀರಾಮುಲು ಎಂದರೆ ಸುಳ್ಳು ಎಂದು ಬಳ್ಳಾರಿ ಜನ ಹೇಳುತ್ತಾರೆ, ಕೇವಲ ಸುಳ್ಳು ಭರವಸೆ ಈತನ ಚಾಳಿ. ಸಚಿವರಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ತೋರಿಸಲಿ. ಶ್ರೀರಾಮುಲು ಸಿದ್ದರಾಮಯ್ಯ ಮಟ್ಟದ ವ್ಯಕ್ತಿ ಅಲ್ಲ, ಈತ ಬರೀ ಬುರುಡೆ ಬಿಡುತ್ತಾರೆ. ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಬಿಜೆಪಿಗರನ್ನ ದಂಗು ಬಡಿಸಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಎಸ್‌ಟಿ ಮೀಸಲಾತಿಗಾಗಿ ಬಿಜೆಪಿ ಸರಕಾರದ ಯಾವ ಮಂತ್ರಿಯೂ ರಾಜಿನಾಮೆ ನೀಡಲಿಲ್ಲ. ರಾಮುಲು ನಾಯಕ ಜನಾಂಗದವ ಎಂದು ಸುಳ್ಳು ದಾಖಲೆ ನೀಡಿ ಬಂದಿದ್ದಾರೆ. ನಾಯಕ ಜಾತಿಯವರಿಗಿರುವ ಗಡಸುತನವಿಲ್ಲ. ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಬದಲಾಗಿ ಸಿದ್ದರಾಮಯ್ಯ ನೇರವಾಗಿ ಮಾತನಾಡುವ ವ್ಯಕ್ತಿ, ನೂರಕ್ಕೆ ನೂರು ಕಾಂಪ್ರಮೈಸ್ ಮಾಡಿಕೊಳ್ಳಲ್ಲ ಎಂದು ಲೇವಡಿ ಮಾಡಿದರು.
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಸಾವರ್ಕರ್ ಅಪ್ರತಿಮ ದೇಶ ಭಕ್ತ: ಅಶ್ವಥ್ ನಾರಾಯಣ್
ಸಿದ್ದರಾಮಯ್ಯ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೆ ಎಂದು ಹೇಳಲು ನಿನಗೆ ನಾಚಿಕೆ ಆಗುವುದಿಲ್ಲವಾ, ಸುಳ್ಳು ಮೋಸ ಮಾಡುವ ವ್ಯಕ್ತಿ ನೀನು ಎಲ್ಲಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ ಎಂದು ಮಾತಿನ ಉದ್ದಕ್ಕೂ ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮುಲು ಹೇಳಿದ್ದೇನು?
ಬಳ್ಳಾರಿಯಲ್ಲಿ ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀರಾಮುಲು, ದೇವರು ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ. ಹಿಂದುಳಿದ ಸಮುದಾಯ ಎಂದು ಬಂದರೆ ನಾನು ಮತ್ತು ಸಿದ್ದರಾಮಯ್ಯ ಒಂದೇ ಎಂದು ಹೇಳಿದ್ದರು.