Renukaswamy Murder Case: ನಟ ದರ್ಶನ್ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಬಂಧನ
ಚಿತ್ರದುರ್ಗ, ಜೂನ್, 14: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಕಾರು ಚಾಲಕ ರವಿ ಸೆರೆಂಡರ್ ಆದ ಬೆನ್ನಲ್ಲೇ ಇಂದು (ಜೂನ್ 14) ಮತ್ತಿಬ್ಬರು ದರ್ಶನ್ ಗ್ಯಾಂಗ್ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ರೇಣುಕಾ ಸ್ವಾಮಿ ಪ್ರಕರಣದಲ್ಲಿ 6ನೇ ಆರೋಪಿಯಾಗಿರುವ ಜಗದೀಶ್ ಮತ್ತು 7ನೇ ಆರೋಪಿ ಅನು ಅಲಿಯಾಸ್ ಅನಿಲ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೃತ ರೇಣುಕಾ ಸ್ವಾಮಿ ಕಿಡ್ನಾಪ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳು ನಿನ್ನೆಯಷ್ಟೇ ಕಾರು ಚಾಲಕ ರವಿ ಠಾಣೆಗೆ ಹೋಗಿ ನೇರವಾಗಿ ಡಿವೈಎಸ್ಪಿ ದಿನಕರನ್ ಮುಂದೆ ಶರಣಾಗಿದ್ದಾನು. ಅದೇ ಇಂದು ಆರು ಮತ್ತು ಏಳನೇ ಆರೋಪಿ ಕೂಡ
ಆರೋಪಿ ಸೆರೆಂಡರ್: ಇನ್ನು ನಿನ್ನೆಯಷ್ಟೇ (ಜೂನ್ 14) ರೇಣುಕಾಸ್ವಾಮಿ ಕೊಲೆ ಪ್ರಕರಣದ 8ನೇ ಆರೋಪಿ ಪೊಲೀಸರಿಗೆ ಶರಣಾಗಿದ್ದರು. ಚಿತ್ರದುರ್ಗದ ಪಿ ಕಚೇರಿಗೆ ಬಂದು ಆರೋಪಿ ರವಿ ಪೊಲೀಸರಿಗೆ ಶರಣಾಗಿದ್ದಾನೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. 17 ಜನರ ಪೈಕಿ ಈಗಾಗಲೇ 13 ಆರೋಪಿಗಳು ಪೊಲೀಸರ ವಶದಲ್ಲಿದ್ದು, ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು.
ಕಲೆಮರಸಿಕೊಂಡಿದ್ದ ಎಂಟನೇ ಆರೋಪಿಯಾಗಿರುವ ಚಿತ್ರದುರ್ಗದ ದಂಡಿನ ಕುರಬರಹಟ್ಟಿ ನಿವಾಸಿ ರವಿ ಏಕಾಏಕಿ ಚಿತ್ರದುರ್ಗದ ಕಚೇರಿಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.
ಭಾವನಾ ಬೆಳಗೆರೆ ಹೇಳಿದ್ದೇನು?: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ಇತ್ತ ಮೃತ ಚಿತ್ರದುರ್ಗದಲ್ಲಿರುವ ಮೃತ ರೇಣುಕಾಸ್ವಾಮಿ ಮನೆಗೆ ಭಾವನಾ ಬೆಳಗೆರೆ ಭೇಟಿ ನೀಡಿ ಮನೆಯಲ್ಲಿ ಇದ್ದ ಮೃತನ ಪತ್ನಿಗೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ ಈ ವೇಳೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾವನಾ ಬೆಳಗೆರೆ ಅವರು, ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾರೆ. ಇನ್ನು ಪ್ರಕರಣದಲ್ಲಿ ನಟ ದರ್ಶನ್ ಅವರು ಮೃತ ರೇಣುಕಾ ಸ್ವಾಮಿಗೆ ಹೊಡೆದಿದ್ದಾರೆ, ಹೊಡೆಸಿದ್ದಾರೆ, ಹೋಡೆಯಿರಿ ಎಂದು ಹೇಳಿದ್ದಾರೆ ಎಂದರೇ ಅವರು ಶಿಕ್ಷೆಗೆ ಅರ್ಹರು ಆಗುತ್ತಾರೆ ಎಂದು ಭಾವನಾ ತಿಳಿಸಿದರು. ಇದು ಆಗಬಾರದು. ದರ್ಶನ್ ಆಗಲಿ ಅಥವಾ ಬೇರೆ ಯಾರೇ ಆಗಲಿ ಅವರಿಗೆ ಪ್ರಾಣ ತೆಗೆಯಲು ಯಾವ ಹಕ್ಕು ಇದೆ ಎಂದು ಪ್ರಶ್ನೆ ಮಾಡಿದ್ದಾರೆ.
ರೇಣುಕಾ ಸ್ವಾಮಿ ಮನೆ ಪರಿಸ್ಥಿತಿ ನೋಡಿ ಬೇಜಾರಾಯ್ತು. ಪತ್ನಿಗೆ ಸಾಂತ್ವನ ಹೇಳಿದ್ದೇನೆ, ನನಗೆ ಮಾಧ್ಯಮಗಳಿಂದ ವಿಷಯ ತಿಳಿಯಿತು. ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದು ಗೊತ್ತಾಗಿದೆ. ಹತ್ತೇ ಹತ್ತು ನಿಮಿಷ ಆಯ್ತು ಮಾಹಿತಿ ಗೊತ್ತಾಗಿದೆ. ಈ ಘಟನೆಯಿಂದ ನನ್ನ ಮನಸ್ಸಿಗೆ ನೋವಾಗುತ್ತಿದೆ. ರೇಣುಕಾಸ್ವಾಮಿ ಅಜ್ಜಿ ಏನಾದ್ರೂ ಪಂಕ್ಷನ್ ಇದಿಯಾ ಅಂತ ಪ್ರಶ್ನೆ ಮಾಡಿದ್ರು. ಯಾರಿಗೂ ಕೂಡಾ ಮನೆಯಲ್ಲಿ ವಿಷಯ ಗೊತ್ತಿಲ್ಲ. ರೇಣುಕಾಸ್ವಾಮಿ ಮನೆಯ ಪರಿಸ್ಥಿತಿ ನೋಡಿ ಬೇಜಾರ್ ಆಯ್ತು ಎಂದರು.
ರೇಣುಕಾಸ್ವಾಮಿ ಅಮಾಯಕ ಹುಡುಗ ಇದ್ದಾನೆ. ಇವರು ಟಿವಿ ಸಹ ನೋಡಿಲ್ಲ, ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಅವನು ಫೋನ್ ಮಾಡಿದ್ದ ವೇಳೆ ಪತ್ನಿ ಫೋನ್ ಪಿಕ್ ಮಾಡಿಲ್ಲ. ಅಕ್ಕ ಅವರು ಮೃತಪಟ್ಟಿದ್ದಾರೆ ಅಲ್ವ, ಬದುಕಿಸೋದಕ್ಕೆ ಸಾಧ್ಯವಿಲ್ಲ ಅಲ್ವ? ಮನೆಯಲ್ಲಿ ದರ್ಶನ್ ಅವರ ಯಾವುದೇ ಫೋಟೋಗಳಿಲ್ಲ. ಪವಿತ್ರಾ ಗೌಡಗೆ ಕಮೆಂಟ್ ಹಾಕಿದ್ದ ಎಂಬ ವಿಚಾರ ಗೊತ್ತಿಲ್ಲ ಎಂದರು.
ಇನ್ನು ಇಂತಹ ಕಾಮೆಂಟ್‌ಗೆ ಸೈಬರ್ ಕ್ರೈಮ್ ಇದೆ. ಅಲ್ಲಿ ದೂರು ಕೊಟ್ರೆ ಸಾಕು. ಒಂದು ಪರಿಜ್ಞಾನ ಇರ್ಬೇಕು, ಪ್ರಾಣ ತೆಗೆಯುವ ಮಟ್ಟಕ್ಕೆ ಇಳಿಯಬಾರದು. ಸ್ಟಾರ್ ಗಿರಿಗೆ ಇದೊಂದು ಶೇಮ್ ಆಗಿದೆ. ಇಂತಹ ಕೃತ್ಯಕ್ಕೆ ನಮ್ಮ ಖಂಡನೆ ಇದೆ. ಅಪರಾಧ ಮಾಡಿದ್ದ ಸತ್ಯ ಆದರೆ ಖಂಡಿತ ಶಿಕ್ಷೆ ಆಗಬೇಕು. ದರ್ಶನ್ ಇದರಲ್ಲಿ ಭಾಗಿಯಾಗಿದ್ರೆ ಶಿಕ್ಷೆಯಾಗಬೇಕು ಎಂದು ಭಾವನಾ ಆಗ್ರಹಿಸಿದರು.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications