ಚಿತ್ರದುರ್ಗ: ಮೂರನೇ ಬಾರಿಗೆ ಪುಷ್ಪಕ್ ರಾಕೆಟ್ ಉಡಾವಣೆ ಯಶಸ್ವಿ
ಚಿತ್ರದುರ್ಗ, ಜೂನ್, 23: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿ ಇರುವ ಡಿಆರ್‌ಡಿಓ ಸಂಸ್ಥೆಯಲ್ಲಿ ಏರೋನೆಟಿಕಲ್ ಟೆಸ್ಟ್ ರೇಂಜ್‌ನಿಂದ ಪುಷ್ಪಕ್ ರಾಕೆಟ್ ಉಡಾವಣೆ ಯಶಸ್ವಿಯಾಗಿದೆ.
ರನ್ ವೇನಲ್ಲಿ ಬೆಳಗ್ಗೆ 7.40ಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು ಎಂದು ಇಸ್ರೋ ಮಾಹಿತಿ ನೀಡಿದೆ. ಸುಮಾರು 4.5 ಕಿಲೋ ಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇದರೊಂದಿಗೆ ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಇಸ್ರೋ ಮಹತ್ವದ ಮುನ್ನಡೆ ಸಾಧಿಸಿದಂತಿದೆ.

ಕಡಿಮೆ ವೆಚ್ಚದಲ್ಲಿ ಮರುಬಳಕೆ ರಾಕೆಟ್‌ಗಳ ಉಡಾವಣೆಯಿಂದ ಹೆಚ್ಚಿನ ಹಣ ಉಳಿತಾಯ ಆಗಲಿದೆ ಎಂಬುದು ಇಸ್ರೋ ಉದ್ದೇಶವಾಗಿದೆ. ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಸಹಾಯದಿಂದ RLV LEX-03 ಉಡಾವಣಾ ವಾಹವನ್ನು ಮೇಲಕ್ಕೆ ಕೊಂಡೊಯ್ದು, 4.5 ಕಿಲೋ ಮೀಟರ್ ಎತ್ತರದಿಂದ ಲ್ಯಾಂಡಿಗ್‌ಗೆ ಬಿಟ್ಟು ಟೆಸ್ಟಿಂಗ್ ಮಾಡಲಾಯಿತು.
ಕ್ಯಾಂಡಲ್ ಹಚ್ಚಿ ರೋಗಿಗಳಿಗೆ ಚಿಕಿತ್ಸೆ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ವೈದ್ಯರು ಕ್ಯಾಂಡಲ್ ಹಚ್ಚಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ವಿದ್ಯುತ್ ಕಣ್ಣ ಮುಚ್ಚಲೆಯಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪಟ್ಟಣದಲ್ಲಿರುವ 100 ಹಾಸಿಗಳ ಸರ್ಕಾರಿ ಆಸ್ಪತ್ರೆ ಇದಾಗಿದೆ. ಇಂತಹ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಅಲ್ಲಿನ ವೈದ್ಯರು ಹಾಗೂ ನರ್ಸ್ ಸಿಬ್ಬಂದಿಗಳು ಮೇಣದಬತ್ತಿ ಹಚ್ಚಿಕೊಂಡು ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಈ ಹಿಂದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಶಾಸಕನಾಗಿದ್ದ ಅವಧಿಯಲ್ಲಿ ಇದೇ ಆಸ್ಪತ್ರೆಯಲ್ಲಿ 23 ಬೆಡ್‌ಗಳ ಐಸಿಯು, ಆಕ್ಸಿಜನ್ ಪ್ಲಾಂಟ್, ಏರ್ಪ್ಲೋ ಆಪರೇಶನ್ ಥೇಟರ್, ಎಲ್ಲಾ ಬೆಡ್‌ಗಳಿಗೂ ಆಕ್ಸಿಜನ್ ಕನೆಕ್ಟಿವಿಟಿ, 12ಕ್ಕೂ ಹೆಚ್ಚು ತಜ್ಞ ವೈದ್ಯರು, ಜನೌಷಧಿ ಕೇಂದ್ರ ಸ್ಥಾಪನೆ, ಹೆಚ್ಚುವರಿ ಆಂಬ್ಯುಲೆನ್ಸ್‌ನಂತಹ ಕಾರ್ಯಗಳನ್ನು ಮಾಡಿದ್ದರು.












Click it and Unblock the Notifications