• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರೀರಾಮುಲುಗೆ ನೀಡದ ಡಿಸಿಎಂ ಪಟ್ಟ; ಚಿತ್ರದುರ್ಗದಲ್ಲಿ ಪ್ರತಿಭಟನೆ, ಆಕ್ರೋಶ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಆಗಸ್ಟ್ 27: ಶ್ರೀರಾಮುಲುಗೆ ಡಿಸಿಎಂ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀರಾಮುಲು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಹಿರೇಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮುಗಿದ ಖಾತೆ ಕಿತ್ತಾಟ: ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

"ಬಿಜೆಪಿ ಹೈಕಮಾಂಡ್ ರಾಮುಲು ಅವರಿಗೆ ಕೆಲಸಕ್ಕೆ ಬಾರದ ಖಾತೆಯನ್ನು ಕೊಟ್ಟಿದೆ. ಡಿಸಿಎಂ ಮಾಡ್ತೀವಿ ಅಂತ ಹೇಳಿ ವಂಚಿಸಿದ್ದಾರೆ. ಶ್ರೀರಾಮುಲು ಅವರನ್ನು ಸೆಕೆಂಡ್ ಲೈನ್ ಲೀಡರ್ ಮಾಡಿದ್ದಾರೆ. ಗೆಲ್ಲದೇ ಇರುವವರಿಗೆ ಡಿಸಿಎಂ ಸ್ಥಾನ ನೀಡಿದ್ದಾರೆ. ಇಡೀ ನಾಯಕ ಸಮಾಜ ತಲೆತಗ್ಗಿಸುವ ಕೆಲಸವನ್ನು ಬಿಎಸ್ ವೈ ಮಾಡಿದ್ದಾರೆ. ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ನೀಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದರೊಂದಿಗೆ, ಚಿತ್ರದುರ್ಗದಲ್ಲಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆದಿದ್ದು, ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ನೀಡದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೋಟೆನಾಡು ಚಿತ್ರದುರ್ಗಕ್ಕೆ ಒಲಿದ ಮಂತ್ರಿಗಿರಿ; ಶ್ರೀರಾಮುಲು ಪ್ರಮಾಣ ವಚನ ಸ್ವೀಕಾರ

"ಚುನಾವಣೆ ಸಂದರ್ಭ ಶ್ರೀರಾಮುಲು ಅವರನ್ನು ಪ್ರಚಾರದಲ್ಲಿ ಬಳಸಿಕೊಂಡು ಈಗ ಡಿಸಿಎಂ ಸ್ಥಾನ ನೀಡದೆ ನಾಯಕ ಸಮಾಜಕ್ಕೆ ದ್ರೋಹ ಮಾಡಿದ್ದಿರ. ನಾಯಕ ಸಮಾಜದ ಮೇಲೆ ಬಿಜೆಪಿ ಶೋಷಣೆ ಮಾಡುತ್ತಿದೆ" ಎಂದು ಈ ಸಂದರ್ಭ ದೂರಿದ್ದಾರೆ.

English summary
BJP activists and Shriramulu supporters in chitradurga protested against government and demanded to give DCM post to Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X