ಕಲುಷಿತ ನೀರಿನಿಂದ ಸಾವಲ್ಲ, ರಾಜ್ಯ ಸರ್ಕಾರ ಮಾಡಿದ ಕೊಲೆ- ಪ್ರಮೋದ್ ಮುತಾಲಿಕ್ ಕಿಡಿ
ಚಿತ್ರದುರ್ಗ, ಆಗಸ್ಟ್ 05: ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಕಲುಷಿತ ನೀರು ಸೇವಿಸಿ ಇದುವರಿಗೂ ಆರು ಜನರು ಮೃತಪಟ್ಟಿದ್ದು, 108ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕವಾಡಿಗರಹಟ್ಟಿ ಪ್ರಕರಣದಲ್ಲಿ ಸರ್ಕಾರದ ಬೇಜವಬ್ದಾರಿ ಎದ್ದು ಕಾಣುತ್ತಿದೆ. ಘಟನೆ ನಡೆದು ಒಂದು ವಾರದ ಬಳಿಕ ಇಂದು ಆರೋಗ್ಯ ಮಂತ್ರಿ ಬಂದಿದ್ದಾರೆ. ಮೊದಲು ಆರೋಗ್ಯ ಸಚಿವರ ನಡೆಗೆ ಖಂಡನೆ ಇದೆ ಎಂದು ಸಚಿವರ ನಡೆಯನ್ನು ಖಂಡಿಸಿದರು.

ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಏನೇನೂ ಇಲ್ಲ ಎಂಬುದಕ್ಕೆ ಚಿತ್ರದುರ್ಗ ಜ್ವಲಂತ ಸಾಕ್ಷಿಯಾಗಿದೆ. ವಾಂತಿ- ಭೇಧಿಗೆ ಚಿಕಿತ್ಸೆ ನೀಡುವ ಸೌಕರ್ಯ ಇಲ್ಲದೆ ಖಾಸಗಿ ಆಸ್ಪತ್ರೆಗೆ ಕಳಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಕೊಲೆ
ಕಲುಷಿತ ನೀರು ಸೇವಿಸಿ ಐದು ಜನ ಮೃತಪಟ್ಟಿದ್ದು, ಇದು ಐದು ಸಾವಲ್ಲ, ಇದು ಸರ್ಕಾರದ ಐದು ಕೊಲೆ ಎಂದು ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಗಂಭೀರವಾಗಿ ಆರೋಪಿಸಿದರು. ರಾಜ್ಯ ಸರ್ಕಾರದ ಬೇಜವಬ್ದಾರಿಯಿಂದ ಐದು ಕೊಲೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇಲ್ಲಿನ ವೈದ್ಯರು, ನರ್ಸ್‌ಗಳು ಉತ್ತಮ ಕರ್ತವ್ಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬೇರೆ ವೈದ್ಯರನ್ನು ಕಳಿಸಲು, ಔಷಧ ಕಳಿಸಲು ಆಗಿಲ್ಲ. ಜಿಲ್ಲಾ ಕೇಂದ್ರದಲ್ಲಿ 500 ಜನರನ್ನ ಚಿಕಿತ್ಸೆ ನೀಡಲು ಆಗಿಲ್ಲ. ಇದೊಂದು ಬಹಳ ದೊಡ್ಡ ದುರಂತ ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿ, ಸರ್ಕಾರಿ ನೌಕರಿ ನೀಡಬೇಕು. ವಾಟರ್ ಟ್ಯಾಂಕ್ ಸ್ವಚ್ಛತಾ ಬಿಲ್ ತೆಗೆದುಕೊಳ್ಳುತ್ತಾರೆ. ಆದರೆ ನೀರು ಯಾಕೆ ಕಲುಷಿತಗೊಂಡಿದೆ. ಭ್ರಷ್ಟಾಚಾರಕ್ಕೆ ಇದೊಂದು ಜ್ವಲಂತ ಸಾಕ್ಷಿ ಅಲ್ಲವೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಿನ ಟ್ಯಾಂಕರ್ ಸ್ವಚ್ಛತೆಗೆ ಸೂಚನೆ ನೀಡಬೇಕು. ಈ ಘಟನೆಯ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಈ ಘಟನೆ ಮುಚ್ಚಿ ಹಾಕುವ ಯತ್ನ ಇರುತ್ತದೆ. ಎಫ್‌ಎಸ್‌ಎಲ್ ವರದಿ ಸಂಶಯ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದರ ಹಿಂದೆ ಇನ್ನೇನೋ ಇದೆ. ಬೇರೆ ಕಡೆ ಎಫ್‌ಎಸ್‌ಎಲ್ ಪರೀಕ್ಷೆ ಮಾಡಬೇಕಿದೆ ಎಂದು ಆಗ್ರಹಿಸಿದರು.












Click it and Unblock the Notifications