ಚಿತ್ರದುರ್ಗದಲ್ಲಿ ನಿನ್ನೆಯಿಂದ ಭಾರೀ ಮಳೆ; ತುಂಬಿಹರಿದ ಹಳ್ಳಗಳು

ಚಿತ್ರದುರ್ಗ, ಜುಲೈ 30: ಚಿತ್ರದುರ್ಗ ಜಿಲ್ಲೆಯಾದ್ಯಂತ ನಿನ್ನೆ ತಡರಾತ್ರಿ ಭಾರೀ ಮಳೆ ಸುರಿದಿದೆ. ಈ ಬಿರುಸು ಮಳೆಯಿಂದಾಗಿ ಜಿಲ್ಲೆಯ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

Recommended Video

      Hardik Pandya And Natasa Stankovic Blessed With A Baby Boy | Oneindia Kannada

      ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ ಸೇರಿ ಹಲವೆಡೆ ರಾತ್ರಿ ಭಾರೀ ಮಳೆಯಾಗಿದ್ದು, ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ, ನೆಲಗೇತಲಹಟ್ಟಿ, ಹಾರೋಗೊಂಡನಹಳ್ಳ ಸೇರಿದಂತೆ ಹಲವೆಡೆ ಹಳ್ಳಗಳು ತುಂಬಿ ಹರಿಯುತ್ತಿವೆ. ನಾಯಕನಹಟ್ಟಿ ದೊಡ್ಡ ಕೆರೆಯೂ ಮಳೆಯಿಂದಾಗಿ ತುಂಬಿಕೊಂಡಿದೆ.

      Ponds And Lakes Overflowing Due To Heavy Rain In Chitradurga

      ಚಳ್ಳಕೆರೆ ಚನ್ನಮ್ಮನಾಗತಿ ಹಳ್ಳಿಯ ಜಮೀನುಗಳಲ್ಲಿ ಮಳೆಯಿಂದಾಗಿ ಶೇಂಗಾ ಬೆಳೆಗೆ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನ ಹಲವೆಡೆಯೂ ಮಳೆಯಾಗಿದೆ. ಬರದ ನಾಡು ಎನಿಸಿಕೊಂಡಿರುವ ಚಿತ್ರದುರ್ಗದಲ್ಲಿ ಇದೀಗ ಜೋರು ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ತಂದಿದೆ. ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

      ಕೋಡಿ ಬಿದ್ದು ಹರಿಯುತ್ತಿರುವ ಮಲ್ಲಾಪುರ ಕೆರೆ: ಚಿತ್ರದುರ್ಗ ಹೊರವಲಯದ ಮಲ್ಲಾಪುರ ಕೆರೆ ಕೋಡಿಯಿಂದ ಬೃಹತ್ ಪ್ರಮಾಣದ ನೀರು ರಸ್ತೆಗೆ ನುಗ್ಗಿದ್ದು, ವಾಹನ ಸಂಚಾರ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮದಲ್ಲಿ ಹಲವಾರು ಮನೆಗಳು ಜಲಾವೃತವಾಗಿವೆ. ಪದೇ ಪದೇ ಮನೆಗಳಿಗೆ ನೀರು ನುಗ್ಗುತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬ ಕೂಗು ಕೇಳಿ ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+