• search
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದ ಕೋಟೆ ಮೇಲೆ ಗೆಲುವಿನ ಬಾವುಟ ಯಾರು ಹಾರಿಸುವರು?

|

ಚಿತ್ರದುರ್ಗ, ಮಾರ್ಚ್ 31 : ಚಿತ್ರದುರ್ಗದ ಕೋಟೆ ಮೇಲೆ ಗೆಲುವಿನ ಬಾವುಟ ಹಾರಿಸಲು ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಭರ್ಜರಿಯಾಗಿ ಪ್ರಚಾರ ಆರಂಭಿಸಿವೆ. ಏಪ್ರಿಲ್ 18ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ.

ಚಿತ್ರದುರ್ಗದ ಹಾಲಿ ಸಂಸದರು ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ. ಈ ಬಾರಿಯೂ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಅವರು ಕಣದಲ್ಲಿದ್ದಾರೆ. ಬಿಜೆಪಿಯಿಂದ ಎ.ನಾರಾಯಣಸ್ವಾಮಿ ಅವರು ಅಭ್ಯರ್ಥಿಯಾಗಿದ್ದಾರೆ.

ಚಿತ್ರದುರ್ಗ ಕ್ಷೇತ್ರದ ಚುನಾವಣಾ ಪುಟ

ಬಿಜೆಪಿ ಪರವಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8ರಂದು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಅವರು ಸಮಾವೇಶದ ಜವಾಬ್ದಾರಿಯನ್ನು ಹೊತ್ತಿದ್ದು, ಸಮಾವೇಶದ ಸಿದ್ಧತೆ ಬಗ್ಗೆ ಜಿಲ್ಲೆಯ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆ 2019: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಪರಿಚಯ

2009ರಲ್ಲಿ ಜನಾರ್ದನ ಸ್ವಾಮಿ ಅವರು ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದರು. ಆದರೆ, ನರೇಂದ್ರ ಮೋದಿ ಅವರ ಅಲೆ ಇದ್ದರೂ 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋತರು. ಕ್ಷೇತ್ರವನ್ನು ಕಾಂಗ್ರೆಸ್ ವಶಕ್ಕೆ ಪಡೆದುಕೊಂಡಿತು. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗಿರುವುದು ಯಾರಿಗೆ ಸಹಾಯಕವಾಗಲಿದೆ? ಕಾದು ನೋಡಬೇಕು.

ಬಿಜೆಪಿಗೆ ಗೆಲುವಿನ ತವಕ

ಬಿಜೆಪಿಗೆ ಗೆಲುವಿನ ತವಕ

ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅಲೆ ಇದ್ದರೂ ಬಿಜೆಪಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ವಿಫಲವಾಗಿತ್ತು. ಈ ಬಾರಿ ಕ್ಷೇತ್ರವನ್ನು ವಶಪಡಿಸಿಕೊಳ್ಳಬೇಕು ಎಂಬ ಪಣ ತೊಟ್ಟಿದೆ. ಏಪ್ರಿಲ್ 8ರಂದು ನರೇಂದ್ರ ಮೋದಿ ಅವರು ಚಿತ್ರದುರ್ಗದಲ್ಲಿ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲಿದ್ದಾರೆ.

ಬಿಜೆಪಿ, ಮೈತ್ರಿಕೂಟ ಬಲಾಬಲ

ಬಿಜೆಪಿ, ಮೈತ್ರಿಕೂಟ ಬಲಾಬಲ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿತ್ರುದುರ್ಗ ಜಿಲ್ಲೆಯ 6, ತುಮಕೂರು ಜಿಲ್ಲೆಯ ಪಾವಗಡ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿವೆ. ಪಾವಗಡ ಮತ್ತು ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌, ಶಿರಾದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ.

ಗೂಳಿಹಟ್ಟಿ ಶೇಖರ್ ಬಲ

ಗೂಳಿಹಟ್ಟಿ ಶೇಖರ್ ಬಲ

2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಗೂಳಿಹಟ್ಟಿ ಶೇಖರ್ ಅವರು 2 ಲಕ್ಷ ಮತಗಳನ್ನು ಪಡೆದಿದ್ದರು. ಈಗ ಅವರು ಬಿಜೆಪಿ ಶಾಸಕರಾಗಿದ್ದಾರೆ. ಆದ್ದರಿಂದ, ಬಿಜೆಪಿಗೆ ಗೆಲುವಿಗೆ ಸಹಾಯಕವಾಗಲಿದೆ ಎಂಬ ನಿರೀಕ್ಷೆ ಇದೆ.

ಬಿ.ಎನ್.ಚಂದ್ರಪ್ಪ ಪ್ರಚಾರ

ಬಿ.ಎನ್.ಚಂದ್ರಪ್ಪ ಪ್ರಚಾರ

ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಅವರಿಗೆ ಸಹಾಯಕವಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದು ಅವರ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಲಿದೆ.

2014ರ ಫಲಿತಾಂಶ

2014ರ ಫಲಿತಾಂಶ

2014ರ ಲೋಕಸಭಾ ಚುನಾವಣೆಯಲ್ಲಿ ಬಿ.ಎನ್.ಚಂದ್ರಪ್ಪ ಅವರು 4,64,511 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಜನಾರ್ದನ ಸ್ವಾಮಿ ಅವರು 3,70,433 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಗೂಳಿಹಟ್ಟಿ ಶೇಖರ್ 2,02,108 ಮತ ಪಡೆದಿದ್ದರು.

ಚಿತ್ರದುರ್ಗ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2014
ಬಿ.ಎನ್. ಚಂದ್ರಪ್ಪ ಐ ಎನ್ ಸಿ ಗೆದ್ದವರು 4,67,511 43% 1,01,291
ಜನಾರ್ಧನ ಸ್ವಾಮಿ ಬಿ ಜೆ ಪಿ ರನ್ನರ್ ಅಪ್ 3,66,220 34% 0
2009
ಜನಾರ್ಧನ ಸ್ವಾಮಿ ಬಿ ಜೆ ಪಿ ಗೆದ್ದವರು 3,70,920 44% 1,35,571
ಡಾ.ಬಿ. ತಿಪ್ಪೇಸ್ವಾಮಿ ಐ ಎನ್ ಸಿ ರನ್ನರ್ ಅಪ್ 2,35,349 28% 0
2004
ಎನ್.ವೈ. ಹನುಮಂತಪ್ಪ ಐ ಎನ್ ಸಿ ಗೆದ್ದವರು 3,22,609 35% 37,460
ಕೋದಂಡರಾಮಯ್ಯ ಪಿ. ಜೆ ಡಿ (ಎಸ್) ರನ್ನರ್ ಅಪ್ 2,85,149 31% 0
1999
ಶಶಿ ಕುಮಾರ ಜೆ ಡಿ (ಯು) ಗೆದ್ದವರು 3,70,793 45% 11,178
ಸಿ.ಪಿ. ಮೂಡಲಗಿರಿಯಪ್ಪ ಐ ಎನ್ ಸಿ ರನ್ನರ್ ಅಪ್ 3,59,615 43% 0
1998
ಸಿ.ಪಿ. ಮೂಡಲಗಿರಿಯಪ್ಪ ಐ ಎನ್ ಸಿ ಗೆದ್ದವರು 3,21,930 43% 58,321
ಪಿ. ಕೋದಂಡರಾಮಯ್ಯ ಎಲ್ ಎಸ್ ರನ್ನರ್ ಅಪ್ 2,63,609 35% 0
1996
ಪಿ. ಕೋದಂಡರಾಮಯ್ಯ ಜೆ ಡಿ ಗೆದ್ದವರು 2,51,617 36% 19,382
ಸಿ.ಪಿ. ಮೂಡಲಗಿರಿಯಪ್ಪ ಐ ಎನ್ ಸಿ ರನ್ನರ್ ಅಪ್ 2,32,235 33% 0
1991
ಸಿ.ಪಿ. ಮೂಡಲಗಿರಿಯಪ್ಪ ಐ ಎನ್ ಸಿ ಗೆದ್ದವರು 3,02,847 52% 82,512
ಎಲ್.ಜಿ. ಹಾವನೂರ ಬಿ ಜೆ ಪಿ ರನ್ನರ್ ಅಪ್ 2,20,335 38% 0
1989
ಸಿ.ಪಿ. ಮೂಡಲಗಿರಿಯಪ್ಪ ಐ ಎನ್ ಸಿ ಗೆದ್ದವರು 3,39,303 51% 1,42,193
ಎಂ. ಸಣ್ಣ ಚಿಕ್ಕಪ್ಪ ಜೆ ಡಿ ರನ್ನರ್ ಅಪ್ 1,97,110 30% 0
1984
ಕೆ.ಎಚ್. ರಂಗನಾಥ ಐ ಎನ್ ಸಿ ಗೆದ್ದವರು 2,79,146 52% 56,811
ಬಿ.ಎಲ್. ಗೌಡ ಜೆ ಎನ್ ಪಿ ರನ್ನರ್ ಅಪ್ 2,22,335 42% 0
1980
ಕೆ. ಮಲ್ಲಣ್ಣ ಐ ಎನ್ ಸಿ (ಐ) ಗೆದ್ದವರು 2,15,180 51% 1,09,361
ಬಿ.ಎಲ್. ಗೌಡ ಜೆ ಎನ್ ಪಿ ರನ್ನರ್ ಅಪ್ 1,05,819 25% 0
1977
ಕೆ. ಮಲ್ಲಣ್ಣ ಐ ಎನ್ ಸಿ ಗೆದ್ದವರು 2,27,926 61% 86,654
ಹೆಚ್.ಸಿ. ಬೋರಯ್ಯ ಬಿ ಎಲ್ ಡಿ ರನ್ನರ್ ಅಪ್ 1,41,272 38% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi will address election campaign rally in Chitradurga on April 8, 2019. Congress leader B.N.Chandrappa sitting MP and 2019 candidate. A.Narayanaswamy BJP candidate. Election will be held on April 18.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more