ದೌರ್ಜನ್ಯ ಆರೋಪ; ಮುರುಘಾ ಮಠದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ

ಚಿತ್ರದುರ್ಗ, ಆಗಸ್ಟ್, 28: ನಗರದ ಹೊರವಲಯದಲ್ಲಿರುವ ಶ್ರೀ ಮುರುಘಾ ಮಠದ ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಬಾಲಕಿಯರಿಗೆ ಭಾನುವಾರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಮಠದ ಸ್ವಾಮೀಜಿಗಳು ಸೇರಿದಂತೆ ಇತರರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ದೂರನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಚಿತ್ರುರ್ಗ ಜಿಲ್ಲಾ ಎಸ್‌ಪಿ ಆದೇಶದ ಅನ್ವಯ ತನಿಖೆಯನ್ನು ನಡೆಸಲು ಪೋಲಿಸ್‌ ಅಧಿಕಾರಿಗಳು ಮುಂದಾಗಿದ್ದಾರೆ. ಸಂತ್ರಸ್ತ ಬಾಲಕಿಯರನ್ನು ಹಾಗೂ ಮುರುಘಾ ಶ್ರೀಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ವೈದ್ಯಕೀಯ ಪರೀಕ್ಷೆ ಬಳಿಕ ಅಗತ್ಯವಿದ್ದರೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಶ್ರೀಗಳನ್ನು ವಶಕ್ಕೆ ಪಡೆಯಬಹುದು.

POCSO case Medical Test For Chitradurga Murugha Mutt Hostel Students

ಮೈಸೂರಿನ ಒಡನಾಡಿ ಪುನರ್ ವಸತಿ ಕೇಂದ್ರದಲ್ಲಿದ್ದ ಸಂತ್ರಸ್ಥ ಬಾಲಕಿಯರು, ಕೇಂದ್ರದ ಮೇಲ್ವಿಚಾರಣಾ ಅಧಿಕಾರಿಗಳ ಜೊತೆ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ. ಭಾನುವಾರ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಆರೋಪದ ಬಳಿಕ ಮಠದ ಆಡಳಿತದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಶರಣರ ವಿರುದ್ಧ ಮಕ್ಕಳು ಮೈಸೂರು ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರವಾಗಿ ಶ್ರೀಗಳಿಗೆ ನೋವಾಗಿದೆ ಎಂದು ವಕೀಲ ವಿಶ್ವನಾಥ್‌ ಹೇಳಿದ್ದರು. ಮತ್ತೊಂದು ಕಡೆ ಮಾಧ್ಯಮಗಳಲ್ಲಿ ಬಂದ ವಿಷಯ ಸ್ವಾಮೀಜಿಗಳ ತೇಜೋವಧೆಗೆ ಕಾರಣವಾಗಿದೆ ಎಂದು ವೀರಶೈವ ಅಧ್ಯಕ್ಷರು ಎಲ್‌. ಬಿ. ರಾಜಶೇಖರ್ ಹೇಳಿದ್ದರು.

POCSO case Medical Test For Chitradurga Murugha Mutt Hostel Students

ಎಸ್‌ಪಿ ಪ್ರತಿಕ್ರಿಯೆ: ಪ್ರಕರಣದ ಬಗ್ಗೆ ಚಿತ್ರದುರ್ಗ ಎಸ್ಪಿ ಮಾತನಾಡಿದ್ದು, "ಆಗಸ್ಟ್‌ 26ರಂದು ಚಿತ್ರದುರ್ಗ ಮುರುಘಾ ಮಠದ ಮಹಿಳಾ ವಸತಿ ನಿಲಯದ ಪಾಲಕರು ನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಲಿಖಿತ ರೂಪದಲ್ಲಿ ದೂರನ್ನು ನೀಡಿರುತ್ತಾರೆ. ಆ ದೂರಿನಲ್ಲಿ ಮುರುಘಾಮಠ ಬಾಲಕಿಯರ ವಸತಿ ನಿಲಯದ ಇಬ್ಬರು ವಿದ್ಯಾರ್ಥಿನಿಯರು ದಿನಾಂಕ 24ರಂದು ವಿದ್ಯಾರ್ಥಿ ನಿಲಯದ ಗೇಟ್‌ಪಾಸ್ ಪಡೆದು ಹೊರಗೆ ಹೋಗಿರುತ್ತಾರೆ. ಹೀಗೆ ಹೊರಗಡೆ ಹೋದ ಅಪ್ರಾಪ್ತ ಬಾಲಕಿಯರು ಅದೇ ದಿನ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಂಡುಬಂದಿರುತ್ತಾರೆ" ಎಂದರು.

ಸ್ವಾಮೀಜಿಗಳಿಗೆ ಹಿತ ಶತೃಗಳಿದ್ದು ಅವರು ಈ ಕೆಲಸ ಮಾಡುತ್ತಿದ್ದಾರೆ. ಮಠದ ಆಡಳಿತಾಧಿಕಾರಿ ಹಾಗೂ ಸ್ವಾಮೀಜಿ ನಡುವೆ ಮನಸ್ತಾಪವಿದೆ. ಆತನೇ ಈ ಕೆಲಸ ಮಾಡಿದ್ದಾರೆ, ಮಕ್ಕಳನ್ನು ಕರೆದುಕೊಂಡು ಹೋಗಿ ಮೈಸೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುರುಘಾ ಶರಣರು ಸೇರಿ 5 ಮಂದಿ ವಿರುದ್ದ ಎಫ್ಐಆರ್ ಆಗಿದೆ.

ಪ್ರಕರಣದ ಬಗ್ಗೆ ಶ್ರೀಗಳು ಮಾತನಾಡಿ, "ನಾನು ಯಾವುದೇ ತಪ್ಪು ಮಾಡಿಲ್ಲ, ಏನೇ ಬಂದರು ಎದುರಿಸೋಣ" ಎಂದು ಸಲಹಾ ಸಮಿತಿಯಲ್ಲಿ ಸ್ವಾಮೀಜಿ ಹೇಳಿದ್ದಾರೆ. ಆಡಳಿತಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡುವ ವಿಚಾರವಾಗಿ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿಯೂ ಹಬ್ಬಿದೆ.

ವಿದ್ಯಾರ್ಥಿನಿಯವರು ನಾಪತ್ತೆಯಾಗಿರುವ ಬಗ್ಗೆ ದೂರು; "ಆಗಸ್ಟ್ 24ರಂದು ವಿದ್ಯಾರ್ಥಿ ನಿಲಯದ ಗೇಟ್ ಪಾಸ್ ಪಡೆದು ಇಬ್ಬರು ವಿದ್ಯಾರ್ಥಿನಿಯರು ಹೊರಗೆ ಹೋಗಿದ್ದರು. ಹೀಗೆ ಹೊರಗೆ ಹೋದ ಅಪ್ರಾಪ್ತ ಬಾಲಕಿಯರು ವಾಪಸ್ ಬಾರದ ಕಾರಣ ಆಗಸ್ಟ್‌ 26ರಂದು ಚಿತ್ರದುರ್ಗ ಮುರುಘಾ ಮಠದ ಮಹಿಳಾ ವಸತಿ ನಿಲಯದ ವಾರ್ಡನ್‌ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಲಿಖಿತ ರೂಪದಲ್ಲಿ ದೂರನ್ನು ನೀಡಿದ್ದರು" ಎಂದು ಚಿತ್ರದುರ್ಗ ಎಸ್‌ಪಿ ಪರಶುರಾಮ್ ತಿಳಿಸಿದ್ದರು.

ಆದರೆ ಬಸವರಾಜು ಮತ್ತು ಪತ್ನಿ ಸೌಭಾಗ್ಯ ಬಸವರಾಜ್‌ ಆಗಸ್ಟ್‌ 25ರಂದು ಬೆಳಗ್ಗೆ 5 ಗಂಟೆಗೆ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಿಂದ ತಮ್ಮ ವಶಕ್ಕೆ ಪಡೆದುಕೊಂಡಿರುತ್ತಾರೆ. ಆದರೆ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದ ಬಗ್ಗೆ ಅವರಿಬ್ಬರು ಪೋಷಕರಿಗಾಗಲಿ ಅಥವಾ ವಿದ್ಯಾರ್ಥಿನಿಲಯಕ್ಕಾಗಲಿ ಒಪ್ಪಿಸದೇ ಅನಧಿಕೃತವಾಗಿ ಆಗಸ್ಟ್‌ 27ರವರೆಗೆ ತಮ್ಮ ವಶದಲ್ಲಿಯೇ ಇಟ್ಟುಕೊಂಡಿದ್ದರು. ಈ ಕುರಿತು ಎಸ್‌ಕೆ ಬಸವರಾಜು ವಿರುದ್ಧ ದೂರು ದಾಖಲಾಗಿದೆ.

ಮಠದ ಆಡಳತಾಧಿಕಾರಿ ವಿರುದ್ಧಆರೋಪ; ಮಠದ ಆಡಳಿತಾಧಿಕಾರಿಯಾಗಿರುವ ಎಸ್‌.ಕೆ.ಬಸವರಾಜ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೂಡ ಕೇಳಿಬಂದಿದೆ. ವಿದ್ಯಾರ್ಥಿ ನಿಲಯದ ತಪಾಸಣೆ ನೆಪದಲ್ಲಿ ಮಹಿಳಾ ನಿಲಯದ ಪಾಲಕರು ತಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದರು. ಜುಲೈ 27ರಂದು ಸಂಜೆ 6 ಗಂಟೆ ವೇಳೆಗೆ ವಿದ್ಯಾರ್ಥಿ ನಿಲಯದಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ತನ್ನ ದೇಹದ ಅಂಗಾಂಗಗಳನ್ನು ಮುಟ್ಟಿ ಎಳೆದಾಡಿ, ತಬ್ಬಿಕೊಂಡು, ಬಲತ್ಕರಿಸಲು ಯತ್ನಿಸಿದ್ದರು. ತಾನು ವಿರೋಧಿಸಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿದೆ.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ 385/2022, ಕಲಂ, 341,342, 363, 120(ಬಿ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+