• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

200 ರೂಗೆ ಒಂದು ಮೊಬೈಲ್; ಚಿತ್ರದುರ್ಗದಲ್ಲಿ ಖರೀದಿಗೆ ಮುಗಿಬಿದ್ದರು ಜನ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಡಿಸೆಂಬರ್ 10: ಕಡಿಮೆ ದರದಲ್ಲಿ ಏನಾದರೂ ಸಿಗುತ್ತದೆ ಎಂದರೆ ಜನ ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಕೊಂಡುಕೊಳ್ಳುತ್ತಾರೆ. ಹಾಗೇ ಇಂದು ಕೂಡ ಚಿತ್ರದುರ್ಗದ ಹಿರಿಯೂರಿನಲ್ಲಿ ಜನರು ಏನನ್ನೋ ಕೊಳ್ಳಲು ಸರತಿ ಸಾಲಿನಲ್ಲಿ ನೂಕಾಡುತ್ತಾ ನಿಂತಿದ್ದ ದೃಶ್ಯ ಕಂಡುಬಂತು.

ಜಿಯೋ ಗ್ರಾಹಕರಿಗೆ ಹೊಸ ಎರಡು ಪ್ರೀಪೇಯ್ಡ್ ಯೋಜನೆಗಳುಜಿಯೋ ಗ್ರಾಹಕರಿಗೆ ಹೊಸ ಎರಡು ಪ್ರೀಪೇಯ್ಡ್ ಯೋಜನೆಗಳು

ಆ ನೂಕಾಟ ಬೇರೇನಕ್ಕೂ ಅಲ್ಲ, ನೀರು, ನೆರಳು ಇಲ್ಲದೆ ಇಂದು ಬೆಳಗ್ಗಿನಿಂದಲೇ ಜನ ಮೊಬೈಲ್ ಖರೀದಿಸಲು ಹೀಗೆ ಸಾಲುಗಟ್ಟಿ ನಿಂತಿದ್ದರು. ಹಿರಿಯೂರು ನಗರದ ಸಂಗೀತ ಮೊಬೈಲ್ ಶೋರೂಮ್ ಹೊಸದಾಗಿ ಆರಂಭಗೊಂಡಿದೆ. ಹಾಗಾಗಿ ಆರಂಭಿಕ ಕೊಡುಗೆಯಾಗಿ ಕೇವಲ 200 ರೂಗೆ ಒಂದು ಕೀಪ್ಯಾಡ್ ಮೊಬೈಲ್ ಅನ್ನು ನೀಡಲಾಗುತ್ತಿದೆ. ಈ ಮೊಬೈಲ್ ಪಡೆದುಕೊಳ್ಳಲು ಜನರು ಬೆಳ್ಳಂಬೆಳಿಗ್ಗೆಯೇ ಸರತಿ ಸಾಲಿನಲ್ಲಿ ನಿಂತು ಕೊಂಡಿದ್ದಾರೆ.

ಮೊದಲು ಬಂದ ಇನ್ನೂರು ಮಂದಿಗೆ ಇನ್ನೂರು ರೂಪಾಯಿಗೆ ಮೊಬೈಲ್ ನೀಡಲಾಗುವುದು ಎಂದು ಶೋರೂಂ ವತಿಯಿಂದ ತಿಳಿಸಲಾಗಿದೆ. ಹೀಗಾಗಿ ನೂರಾರು ಜನರು ಅಂಗಡಿ ಮುಂದೆ ಸಾಲಿನಲ್ಲಿ ನಿಂತಿದ್ದಾರೆ. ಮೊದಲು ಬಂದ 200 ಜನಕ್ಕೆ ಮಾತ್ರ ಈ ಕೊಡುಗೆ ಸೀಮಿತವಾಗಿದ್ದು, ಮೊದಲು ಬಂದವರಿಗೆ ಕೂಪನ್ ಕೊಡಲಾಗುತ್ತಿದೆ. ಕೂಪನ್ ಕೊಟ್ಟ ನಂತರ ಮೊಬೈಲ್ ಕೊಡಲಾಗುವುದು. ಆದರೆ ಮೊಬೈಲ್ ಕೀಪ್ಯಾಡ್ ಆಗಿದ್ದು ಇದಕ್ಕೆ ಯಾವುದೇ ಗ್ಯಾರಂಟಿ ಮತ್ತು ವಾರಂಟಿ ಇರುವುದಿಲ್ಲ. ಇದು ನಮ್ಮ ಅಂಗಡಿಯ ಪ್ರಚಾರಕ್ಕಾಗಿ ಮಾತ್ರ ಕೊಡುತ್ತಿರುವುದು ಎನ್ನುತ್ತಿದ್ದಾರೆ ಅಂಗಡಿ ಸಿಬ್ಬಂದಿ. ಆದರೂ ಜನ ಅದಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳದೇ ಬಿರುಬಿಸಿಲಿನಲ್ಲೂ ಮೊಬೈಲ್ ಖರೀದಿಸಲೇಬೇಕೆಂದು ಹಟ ಹಿಡಿದು ನಿಂತಿದ್ದಾರೆ.

English summary
The mobile showroom in Hiriyur city has been newly opened. So the initial offer is a mobile phone with a keypad for just Rs.200, people rushing to grab this offer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X