ಮುಖ್ಯಮಂತ್ರಿಗಳ ಬದಲಾವಣೆ ಸುದ್ದಿಯೇ ಇಲ್ಲ; ಸೋಮಣ್ಣ
ಚಿತ್ರದುರ್ಗ, ಜೂನ್ 09; ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಬಾರಿ ಸದ್ದು ಮಾಡಿದೆ. ಇದೀಗ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂದು ಒಬ್ಬೊಬ್ಬ ನಾಯಕರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ.
Recommended Video
ಬುಧವಾರ ಚಿತ್ರದುರ್ಗದಲ್ಲಿ ವಸತಿ ಸಚಿವ ವಿ. ಸೋಮಣ್ಣ ಈ ಕುರಿತು ಮಾತನಾಡಿದರು. "ರಾಜ್ಯದಲ್ಲಿ ಸಿಎಂ ಬದಲಾವಣೆಯ ಸುದ್ದಿಯೇ ಇಲ್ಲ, ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ" ಎನ್ನುವ ಮೂಲಕ ಮುಖ್ಯಮಂತ್ರಿಗಳ ಬದಲಾವಣೆ ಹೇಳಿಕೆ ನೀಡುವವರಿಗೆ ಟಾಂಗ್ ನೀಡಿದರು.
"ನಮ್ಮ ಬಿಜೆಪಿ ಪಕ್ಷದಲ್ಲಿ ಗೊಂದಲ ಇಲ್ಲ. ನಾನು ಹಲವಾರು ಭಾರೀ ಹೇಳಿದ್ದೇನೆ. ಗೊಂದಲ ಮಾಡುವುದು ಬೇಡ. ಈ ರೀತಿಯ ಭಾಷೆಗಳು ಬೇಡ. ನಾನು ವಿನಂತಿ ಮಾಡುತ್ತೇನೆ" ಎಂದು ಸಚಿವರು ತಿಳಿಸಿದರು.

"ಮುಖ್ಯ ಮಂತ್ರಿ ಬದಲಾವಣೆ ವಿಚಾರವನ್ನು ಬಹಳ ಗಂಭೀರವಾಗಿ ಕೇಂದ್ರದ ನಾಯಕರು ಪರಿಗಣಿಸಿದ್ದಾರೆ. ರಾಜ್ಯಾಧ್ಯಕ್ಷರು ಹಾಗೂ ಯಡಿಯೂರಪ್ಪ ಕೂಡ ಯಾರೂ ಮಾತನಾಡಬಾರದು ಎಂದು ಸೂಚನೆ ನೀಡಿದ್ದಾರೆ" ಎಂದರು.
"ಈಗಿರುವ ಸಂಕಷ್ಟದ ಸಮಯದಲ್ಲಿ ಮೊದಲು ನಮ್ಮ ಆದ್ಯತೆ ಕೋವಿಡ್ ಹಿಮ್ಮೆಟ್ಟಿಸುವುದು.
ಕೋವಿಡ್ ಅನ್ನು ಎಷ್ಟರ ಮಟ್ಟಿಗೆ ನಿಯಂತ್ರಣ ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಕೋವಿಡ್‌ನ ಉಳಿದ ದಿನಗಳಲ್ಲಿ ಜನರು ನೆಮ್ಮದಿಯಿಂದ ಬದುಕಬೇಕು, ಇದಕ್ಕೆ ಬೇಕಾದ ಅಗತ್ಯ ಸೇವೆಯನ್ನು ಮಾಡಲು ನಾವು ಬದ್ದರಾಗಿದ್ದೇವೆ" ಎಂದು ಸೋಮಣ್ಣ ಹೇಳಿದರು.
"ಚಿತ್ರದುರ್ಗ ಪಟ್ಟಣಕ್ಕೆ 1 ಸಾವಿರಕ್ಕೂ ಮೇಲ್ಪಟ್ಟು ಮನೆಗಳು ರಾಜೀವ್ ಗಾಂಧಿ ಬೋರ್ಡ್ ಹಾಗೂ ಕೊಳಚೆ ಅಭಿವೃದ್ದಿ ಮಂಡಳಿಯಿಂದ ಆಗಿದೆ. ಎಲ್ಲದಕ್ಕೂ ವರ್ಕ್ ಆರ್ಡರ್ ಕೊಡಲಾಗಿದೆ. ಹದಿನೈದು ಇಪ್ಪತ್ತು ದಿನ ಕಳೆದ ನಂತರ ಲಾಕ್ ಡೌನ್ ಮುಗಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.












Click it and Unblock the Notifications