Murugha Shree : ಲೈಂಗಿಕ ದೌರ್ಜನ್ಯ ಪ್ರಕರಣ; ಮುರುಘಾ ಶ್ರೀಗಳಿಗೆ ಇಂದು ಬೇಲಾ ಅಥವಾ ಜೈಲಾ?
ಚಿತ್ರದುರ್ಗ, ಸೆ.5: ಪ್ರೌಢಶಾಲೆಯ ಅಪ್ರಾಪ್ತ ಬಾಲಕಿಯರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಗೆ ಬೇಲಾ ಅಥವಾ ಜೈಲಾ ಎನ್ನುವ ಪ್ರಶ್ನೆಯಾಗಿದೆ.
ಪೊಲೀಸ್ ಕಸ್ಟಡಿ ಇಂದು 11 ಗಂಟೆಗೆ ಅಂತ್ಯವಾಗಲಿದ್ದು, ಪೊಲೀಸರು ಸ್ಥಳ ಮಹಜರು, ಶ್ರೀಗಳ ಪುರುಷತ್ವ ವರದಿಯನ್ನು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.
ಮತ್ತೊಂದೆಡೆ ಬೇಲ್‍ಗಾಗಿ ಶ್ರೀಗಳ ಪರ ವಕೀಲರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸ ಇದೆ ಎಂಬ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಅವಕಾಶ ಕೊಡಬೇಕು. ಹಾಗಾಗಿ, ಮಧ್ಯಂತರ ಜಾಮೀನು ನೀಡಬೇಕೆಂದು ಶ್ರೀಗಳ ಪರ ವಕೀಲರು ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.

ಈ ಸಂಬಂಧ ಡಿವೈಎಸ್‍ಪಿ ಕಚೇರಿಗೆ ಭೇಟಿ ನೀಡಿರುವ ವಕೀಲ ಉಮೇಶ್, ಶ್ರೀಗಳ ಆರೋಗ್ಯ ವಿಚಾರಿಸಿ ಬೇಲ್ ಸಂಬಂಧ ಚರ್ಚಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದು ಕಡೆ ಉಳಿದ ಆರೋಪಿಗಳಾದ ಬಸವಾದಿತ್ಯ ಶ್ರೀಗಳು, ಗಂಗಾಧರಯ್ಯ ಹಾಗೂ ಪರಮಶಿವಯ್ಯ ಫೋನ್ ಸದ್ಯಕ್ಕೆ ಸ್ವಿಚ್ ಆಫ್ ಆಗಿದೆ. ನಾಪತ್ತೆ ಆದರೂ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಪ್ರಕರಣದ ಎರಡನೇ ಆರೋಪಿಯಾಗಿರುವ ವಾರ್ಡನ್ ರಶ್ಮಿ ಅವರು ಜೈಲು ಪಾಲಾಗಿದ್ದಾರೆ.












Click it and Unblock the Notifications