ದೇವರ ಆದೇಶವೆಂದು ಹೆತ್ತ ತಾಯಿಯನ್ನೇ ಮಚ್ಚಿನಿಂದ ಕಡಿದ!

ಚಿತ್ರದುರ್ಗ ಜಿಲ್ಲೆಯಲ್ಲಿ ತಿಮ್ಮರಾಜು ಎಂಬಾತ ತನ್ನ ತಾಯಿಯನ್ನೇ ಮಚ್ಚಿನಿಂದ ಕಡಿದು ಕೊಂದಿದ್ದಾನೆ. ದೇವರು ಬಂದು ಆದೇಶ ನೀಡಿದ್ದರಿಂದ ಕೊಂದುಬಿಟ್ಟೆ ಎಂದು ಆತ ಕಾರಣ ನೀಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

ಚಿತ್ರದುರ್ಗ, ಫೆಬ್ರವರಿ 22: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದಮ್ಮಿ ಗೊಲ್ಲರಹಟ್ಟಿಯಲ್ಲಿ ನಡೆದಿರುವ ಕರಳು ಹಿಂಡುವಂಥ ಘಟನೆ ಇದು. ತಿಮ್ಮರಾಜು ಎಂಬಾತ ತನ್ನ ತಾಯಿಯನ್ನೇ ಕೊಂದು, ಆಕೆ ಶವಕ್ಕೆ ಹೂವು ಹಾಕಿ ಪೂಜೆ ಮಾಡುತ್ತಿದ್ದ ವೇಳೆ ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ಬಂಧಿಸಲಾಗಿದೆ.

ತಿಮ್ಮರಾಜು ಮಾನಸಿಕ ಅಸ್ವಸ್ಥನಂತ ವರ್ತಿಸುತ್ತಿದ್ದು, ನನ್ನ ಕನಸಿನಲ್ಲಿ ದೇವರು ಬಂದು ತಾಯಿಯನ್ನು ಕೊಲ್ಲುವಂತೆ ಅದೇಶ ನೀಡಿದ್ದರಿಂದ ಅದರಂತೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಎರಡು ವರ್ಷದ ಹಿಂದೆ ಅತನಿಂದ ಪತ್ನಿ ದೂರವಾಗಿದ್ದಾರೆ. ತಾಯಿಯೊಂದಿಗೆ ಆಕೆ ಆಗಾಗ ಜಗಳಾವಾಡುತ್ತಿದ್ದ. ಇದೀಗ ದೇವರ ಆದೇಶ ಎಂಬ ಹೇಳಿಕೆ ನೀಡುತ್ತಾ ಮಚ್ಚಿನಲ್ಲಿ ಕಡಿದಿದ್ದಾನೆ ಎಂದು ತಿಳಿದುಬಂದಿದೆ.[ಹೆಣ್ಣುಮಗು ಎಂಬ ಕಾರಣಕ್ಕೆ ಕ್ರಿಮಿನಾಶಕ ಹಾಕಿ ತಾಯಿಯೇ ಕೊಂದಳು!]

Mother brutally murdered by son, according to 'God order'

ಅತ ಕೊಲೆ ಮಾಡಿ, ಈಗ ದೇವರು ಕನಸಿನಲ್ಲಿ ಬಂದು ಅದೇಶ ನೀಡಿದ್ದಾಗಿ ಹೇಳುತ್ತಿದ್ದಾನೆ. ಈ ಬಗ್ಗೆ ಸಂಪೂರ್ಣವಾದ ತನಿಖೆ ನಡೆದ ನಂತರ ಸತ್ಯ ಹೊರಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಿಮ್ಮರಾಜು ಕನಸಿನಲ್ಲಿ ದೇವರು ಬಂದು, ತಾಯಿ ದೇವರನ್ನೇ ಕೊಲ್ಲಲು ಹೇಳಲು ಸಾಧ್ಯವೆ!? ಇನ್ನು ದೇವರು ಹೇಳಿದ್ದು ಎನ್ನುತ್ತಿರುವ ತಿಮ್ಮರಾಜುವಿನ ಮಾನಸಿಕ ಸ್ಥಿತಿ ಬಗ್ಗೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+