ಚಿತ್ರದುರ್ಗದಲ್ಲಿ 30 ಕ್ಕೂ ಹೆಚ್ಚು ತಬ್ಲಿಘಿಗಳು ಪ್ರತ್ಯಕ್ಷ
ಚಿತ್ರದುರ್ಗ, ಮೇ 5: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ತಬ್ಲಿಘಿ ಜಮಾತ್ ಗಳು ಪ್ರತ್ಯಕ್ಷವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಿತ್ರದುರ್ಗ ತಾಲ್ಲೂಕಿನ ಬೊಗಳೇರಹಟ್ಟಿ ಬಳಿ 30 ಕ್ಕೂ ಹೆಚ್ಚು ತಬ್ಲಿಘಿಗಳು ಪ್ರತ್ಯಕ್ಷವಾಗಿದ್ದಾರೆ. ಚಿಕ್ಕಗೊಂಡನಹಳ್ಳಿ ಸಮೀಪದ ಬೊಗಳೇರಹಟ್ಟಿ ಗ್ರಾಮದ ಚೆಕ್ ಪೋಸ್ಟ್ ಬಳಿ ಈ ತಬ್ಲಿಘಿಗಳು ಸಿಕ್ಕಿಬಿದ್ದಿದ್ದಾರೆ.
ಅಹಮದಾಬಾದ್ ನಿಂದ ಅನುಮತಿ ಪಡೆದು ಕರ್ನಾಟಕಕ್ಕೆ ತಬ್ಲಿಘಿಗಳು ಬಂದಿದ್ದಾರೆ ಎನ್ನಲಾಗಿದೆ. ಆದರೆ ಇವರು ಬರುವ ವಿಚಾರವನ್ನು ಚಿತ್ರದುರ್ಗ ಡಿಸಿಗೆ ಮಾಹಿತಿಯನ್ನೇ ಕೊಡದೆ ತಬ್ಲಿಘಿಗಳು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಗುಜರಾತಿನಿಂದ ಎರಡು ಬಸ್ ಗಳಲ್ಲಿ ತಬ್ಲಿಘಿಗಳು ಬಂದಿದ್ದು, ಚಿತ್ರದುರ್ಗದ ಜನರಲ್ಲಿ ಆತಂಕ ಮನೆಮಾಡಿದೆ. ಚಿತ್ರದುರ್ಗ ಸದ್ಯ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ. ತಬ್ಲಿಘಿಗಳು ಬಂದಿರುವ ವಿಷಯ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಚೆಕ್ ಪೋಸ್ಟ್ ಬಳಿಗೆ ಆಗಮಿಸುತ್ತಿದ್ದಾರೆಂದು ತಿಳಿದುಬಂದಿದೆ.












Click it and Unblock the Notifications