ನಿಮಗೆ ಇಷ್ಟ ಇಲ್ಲಾಂದ್ರೆ ಮುಂದಿನ ಬಾರಿ ಗೆಲ್ಲಿಸಬೇಡಿ: ಶಾಸಕ ವೀರೇಂದ್ರ ಪಪ್ಪಿ ಗರಂ
ಚಿತ್ರದುರ್ಗ, ಅಕ್ಟೋಬರ್ 05: ನಿಮಗೆ ಇಷ್ಟ ಇಲ್ಲ ಅಂದ್ರೆ ಮುಂದಿನ ಬಾರಿ ಗೆಲ್ಸಬೇಡಿ ಎಂದು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಪ್ರತಿಭಟನಾ ನಿರತ ಮಹಿಳೆಯರ ವಿರುದ್ಧ ಗರಂ ಆಗಿದ್ದಾರೆ. ಹೆಂಡತಿ ಮಕ್ಕಳನ್ನು ಬಿಟ್ಟು ಸೇವೆ ಮಾಡಿ ಅಂದರೆ ಹೆಂಗೆ, ಅಂಥ ದೊಡ್ಡ ಗುಣಾನೂ ನಂದಲ್ಲ, ನಾನದನ್ನ ಮಾಡಲ್ಲ. ನನಗದು ಬೇಕಾಗಿಲ್ಲ ಎಂದು ಶಾಸಕ ವೀರೇಂದ್ರ ಪಪ್ಪಿ ಸಿಡಿಮಿಡಿಗೊಂಡಿದ್ದಾರೆ.
ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯದಲ್ಲಿ ಹಂಗಾಗಬೇಕು, ಹಿಂಗಾಗಬೇಕು ಅಂತ ಬಂದಿಲ್ಲ. ಬಂದಿನಿ ಸೇವೆ ಮಾಡಿದ್ದೇನೆ ಅಷ್ಟೇ. ನಿಮಗೆ ಇಷ್ಟ ಇದ್ರೆ ಮುಂದಿನ ಬಾರಿ ಗೆಲ್ಲಿಸಿ. ಇಲ್ಲ ಅಂದ್ರೆ ಬಿಡಿ ಎಂದು ಖಾರವಾಗಿ ಮಾತನಾಡಿದ್ದಾರೆ.

ನನಗೆ ಮತ ಹಾಕಿ ಗೆಲ್ಲಿಸಿ ಅಂತಾನೂ ಕೇಳುವುದಿಲ್ಲ. ನನಗೆ ನಿಮ್ಮಿಂದ ಆಗಬೇಕಾಗಿದ್ದು ಏನೂ ಇಲ್ಲ. ನನ್ನ ಫ್ಯಾಮಿಲಿ ಬಗ್ಗೆ ನೀವು ಮಾತನಾಡಬೇಕಾದರೆ ಬಹಳ ಯೋಚನೆ ಮಾಡಿ ಮಾತನಾಡಬೇಕು. ನಿಮ್ಮಿಂದ ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನನ್ನಿಂದ ನಿಮಗೆ ತೊಂದರೆಯಾಗಿಲ್ಲ. ನನ್ನಿಂದ ನಿಮಗೆ ತೊಂದರೆಯಾಗದಾದರೆ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತಿದ್ದೆ ಎಂದು ಶಾಸಕ ಕೆಸಿ ವೀರೇಂದ್ರ ಪಪ್ಪಿ ಪುಲ್ ಗರಂ ಆಗಿದ್ದಾರೆ.
ಶಾಸಕರು ಕೋಪಗೊಳ್ಳಲು ಕಾರಣವೇನು..?
ಕವಾಡಿಗರಹಟ್ಟಿಯಲ್ಲಿ ಮಹಿಳೆಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಸಮಸ್ಯೆ ಆಲಿಸುವ ಸಂದರ್ಭದಲ್ಲಿ ವೀರೇಂದ್ರ ಪಪ್ಪಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ನನ್ನ ಹೆಂಡತಿಗೆ ಹುಷಾರು ಇಲ್ಲ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಂದ ಬಿಟ್ಟರೆ ನಾನು ಹೋಗುತ್ತೇನೆ ಎಂದು ಶಾಸಕರು ಕೇಳಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ನಿಮ್ಮ ಸಮಸ್ಯೆಯೇ ಹೇಳುತ್ತೀರಾ, ನಮ್ಮ ಸಮಸ್ಯೆ ಕೇಳುವವರು ಯಾರೂ ಎಂದಿದ್ದಾರೆ. ಈ ಮಾತಿಗೆ ಶಾಸಕರು ಗರಂ ಆಗಿದ್ದಾರೆ.
ಬಬ್ಬೂರು ಕೃಷಿ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಶತಮಾನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯೂರಿಗೆ ಭೇಟಿ ನೀಡಲಿದ್ದಾರೆ.

ಬಬ್ಬೂರು ಫಾರಂನಲ್ಲಿ ಶತಮಾನೋತ್ಸವ ನೆನಪಿಗಾಗಿ ನಿರ್ಮಿಸಲಾಗಿರುವ ಶತಮಾನ ಭವನ ಲೋಕಾರ್ಪಣೆ ಮಾಡಲಿದ್ದಾರೆ. ನಂತರ ತೋಟಗಾರಿಕಾ ಕಾಲೇಜು ಹಿಂಭಾಗ ಆವರಣದಲ್ಲಿ ಹಮ್ಮಿಕೊಂಡಿರುವ ದಶಮಾನೋತ್ಸವ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಂತರ ಹಿರಿಯೂರು ನಗರದ ತಾಲೂಕು ಕಛೇರಿ ಬಳಿ ಇರುವ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿವೇಶನದಲ್ಲಿ ನೂತನ ಕನಕ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.












Click it and Unblock the Notifications