ಚಿತ್ರದುರ್ಗ : ಭೀಕರ ಅಪಘಾತ, 6 ಸಾವು, ನಾಲ್ವರ ಸ್ಥಿತಿ ಗಂಭೀರ

Posted By:
Subscribe to Oneindia Kannada

ಚಿತ್ರದುರ್ಗ, ನವೆಂಬರ್ 25 : ರಾಷ್ಟ್ರೀಯ ಹೆದ್ದಾರಿ 4 ನಲ್ಲಿ ಹಿರಿಯೂರು ಸಮೀಪದ ಮೇಟಿಕುರ್ಕೆ ಗ್ರಾಮದ ಬಳಿ ಶನಿವಾರ (ನವೆಂಬರ್ 25) ಮಧ್ಯಾಹ್ನ ಭಿಕರ ಅಪಘಾತವೊಂದು ಸಂಭವಿಸಿದ್ದು 6 ಮಂದಿ ಸಾವನ್ನಪ್ಪಿದ್ದಾರೆ.

ಶನಿವಾರ ಮಧ್ಯಾಹ್ನ ಚಿತ್ರದುರ್ಗದಿಂದ ಬೆಂಗಳೂರಿನತ್ತ ಬರುತ್ತಿದ್ದ ಬರುತ್ತಿದ್ದ ಸ್ಕಾರ್ಪಿಯೋ ಮತ್ತು ಹಿರಿಯೂರಿನಿಂದ ಚಿತ್ರದುರ್ಗದತ್ತ ತೆರಳುತ್ತಿದ್ದ ಎರ್ಟಿಗಾ ಕಾರಿನ ನಡುವೆ ಈ ಭಿಕರ ಅಪಘಾತ ಸಂಭವಿಸಿದೆ.

ಹುಣಸೂರಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಚಾಲಕ ಸಾವು

ವೇಗವಾಗಿ ಚಲಿಸುತ್ತಿದ್ದ ಸ್ಕಾರ್ಪಿಯೊ ಕಾರಿನ ಟೈರು ಪಂಕ್ಚರ್ ಆಗಿ ರಸ್ತೆ ವಿಭಜಗಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿ ಎರ್ಟಿಗಾ ಕಾರ್ ಗೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡೂ ಕಾರುಗಳು ಸಂಪೂರ್ಣ ಜಖಂಗೊಂಡಿವೆ.

Massive accident near Hiriyuru 6 dead

ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದು ಪ್ರಾಣ ಕಳೆದು ಕೊಂಡಿದ್ದಾರೆ ಅದರಲ್ಲಿ ಎರಡು ಮಕ್ಕಳೂ ಸೇರಿವೆ. ಉಳಿದ ನಾಲ್ವರನ್ನು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಇಬ್ಬರ ಸ್ಥಿತಿ ತೀರಾ ಚಿಂತಾಜನಕವಾಗಿದೆ.

ಮೃತರ ಪೈಕಿ ಒಬ್ಬರನ್ನು ಚಿತ್ರದುರ್ಗ ಎಪಿಎಂಸಿ ಸದಸ್ಯ ಶಿವು ಎಂದು ಗುರುತಿಸಲಾಗಿದೆ.

ಕಲಬುರಗಿ: ಜಾತ್ರೆಗೆಂದು ಹೊರಟವರು ಮಸಣ ಸೇರಿದರು

ರಾಷ್ಟ್ರೀಯ ಹೆದ್ದಾರಿ 4ರ ಹಿರಿಯೂರು ಸಮೀಪದ ಆತಿಥ್ಯ ಹೋಟೆಲ್ ಬಳಿ ಈ ಅಪಘಾತ ಸಂಬವಿಸಿದ್ದು, ರಸ್ತೆಯೆಲ್ಲ ರಕ್ತಮಯವಾಗಿ ಭೀಕರ ದೃಶ್ಯ ನಿರ್ಮಾಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Massive car accident assured near Hiriyur taluks Medikurke village on saturday November 25. 6 people dead and 4 were seriously injured.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ