ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಕೊನೆಗೂ ಸೆರೆಸಿಕ್ಕ ಚಿರತೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 14: ಮಹಾಮಾರಿ ಕೊರೊನಾ ವೈರಸ್ ನಡುವೆ ಕಾಡು ಪ್ರಾಣಿಗಳು ನಾಡಿನ ಕಡೆ ಮುಖ ಮಾಡಿವೆ. ಬಹುತೇಕ ಕಾಡುಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ನಗರ, ಹಳ್ಳಿ, ಪಟ್ಟಣಗಳ ಕಡೆ ಮುಖ ಮಾಡಿದ್ದು, ಇದೀಗ ಚಿತ್ರದುರ್ಗದ ಚಿಕ್ಕ ಯಾಗಟಿ ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ.

ಚಿಕ್ಕ ಯಾಗಟಿ ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದ್ದ ಚಿರತೆಯು ತಡರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 3 ವರ್ಷದ ಚಿರತೆ ಬಿದ್ದಿದೆ. ಗ್ರಾಮಸ್ಥರ ಸಹಕಾರದಿಂದ ಯಶಸ್ವಿಯಾಗಿ ಹೊಸದುರ್ಗ ತಾಲ್ಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆಹಿಡಿದಿದ್ದಾರೆ.

 ಚಿತ್ರದುರ್ಗದಲ್ಲಿ ರಾಜಾರೋಷವಾಗಿ ಓಡಾಡಿದ ಕರಡಿ ಚಿತ್ರದುರ್ಗದಲ್ಲಿ ರಾಜಾರೋಷವಾಗಿ ಓಡಾಡಿದ ಕರಡಿ

ಕಳೆದ ಒಂದು ವಾರದಿಂದ ಗ್ರಾಮದ ಅಕ್ಕಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಸೆರೆ ಹಿಡಿದಿರುವುದರಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ.

Leopard Captured By Forest Department In Chitradurga

ಚಿತ್ರದುರ್ಗ ಜಿಲ್ಲೆಯಲ್ಲಿ ಆಗಾಗ ಕರಡಿ, ಆನೆ, ಚಿರತೆ ಇತರೆ ಕಾಡುಪ್ರಾಣಿಗಳು ನಾಡಿನ ಕಡೆ ಲಗ್ಗೆ ಇಡುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಪದೇ ಪದೇ ಕಾಡುಪ್ರಾಣಿಗಳು ಜಿಲ್ಲೆಯೊಳಗೆ ಬರುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

English summary
The Leopard is captured in the Chikka Yagati village of Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X