ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ ಮತ್ತು ಬಿಜೆಪಿ ಶಾಸಕರು: ಡಿಕೆ ಶಿವಕುಮಾರ್ ಆಗ್ರಹ

ಚಿತ್ರದುರ್ಗ, ಆಗಸ್ಟ್‌ 19 : ಮಡಿಕೇರಿಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಮೇಲೆ ಕಾಂಗ್ರೆಸ್ಸಿಗರೇ ಮೊಟ್ಟೆ ಎಸೆದಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರೆಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಭೋಪಯ್ಯ ವಿರುದ್ಧ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊದಲು ಆ ಬಿಜೆಪಿ ಶಾಸಕ ಭೋಪಯ್ಯರನ್ನು ಬಂಧಿಸಬೇಕು. ಸುಳ್ಳಿನ ಮತ್ತೊಂದು ಹೆಸರೇ ಬಿಜೆಪಿ ಮತ್ತು ಬಿಜೆಪಿ ಶಾಸಕರು. ನಾನು ಮಾಡಿದ್ದರೆ ನಾನು ಎಂದು ಹೇಳಿಕೊಳ್ಳಬೇಕು. ನಮ್ಮ ಕಾರ್ಯಕರ್ತರು ಎಂದು ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆಂದು ಹೇಳುವುದು ಹೇಡಿತನ ಅಲ್ವಾ? ಎಂದು ಬೋಪಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿಯ ಎಲ್ಲಾ ವಿಚಾರಗಳು ವಿಫಲವಾಗುತ್ತವೆ. ಅದಕ್ಕೆ ಬೇಕು ಅಂತಾ ಇಂತ ಕೃತ್ಯಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಅಧ್ಯಕ್ಷನಾಗಿ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ನಮ್ರತೆಯಿಂದ ನಮ್ಮ ಭಾವನೆ ಮತ್ತು ನೋವುಗಳನ್ನು ಹೇಳಿಕೊಳ್ಳುತ್ತಿದ್ದೇವೆ, ಇದರ ಬಗ್ಗೆ ಗಮನ ನೀಡಬೇಕು ಎಂದರು.

KPCC President DK Shivakumar Lashes out Against BJP Leaders in Chitradurga over Siddaramaiah Attack

ವಿರೋಧವಿದ್ದ ಕಡೆ ಸಿದ್ಧರಾಮಯ್ಯ ಯಾಕೆ ಹೋಗಬೇಕು ಎಂದ ಪ್ರತಾಪ್ ಸಿಂಹ ಬಗ್ಗೆ ವ್ಯಂಗ್ಯಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, "ಓಹೋ... ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಲ್ಯಾಂಡ್ ಓನರಾ.. ಅದೇನೋ ಮಡಿಕೇರಿ ಏನು ಅವರ ಮನೇನಾ?" ಎಂದು ವ್ಯಂಗ್ಯ ಮಾಡಿದರು.

ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 26 ರಂದು ಎಸ್ಪಿ ಕಛೇರಿ ಮುತ್ತಿಗೆ ಹಾಕಲು ಸಿದ್ದರಾಮಯ್ಯ ಕರೆ ಕೊಟ್ಟಿರುವ ಬಗ್ಗೆ ಮಾತನಾಡಿ, "ನಾನು ಪಾದಯಾತ್ರೆ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಕಾಂಗ್ರೆಸ್‌ನಿಂದ ಮಡಿಕೇರಿ ಚಲೋ ಬಗ್ಗೆ ಇನ್ನೂ ಚರ್ಚಿಸಿಲ್ಲ. ನಾನು ಬೆಂಗಳೂರಿಗೆ ಹೋದ ಬಳಿಕ ಚರ್ಚೆ ಮಾಡುತ್ತೇನೆ. ಇನ್ನೂ ಮಾಹಿತಿ ಬಂದಿಲ್ಲ, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಾವಾಗೇ ಪ್ರತಿಭಟನೆ ಮಾಡುತ್ತಿದ್ದಾರೆ," ಎಂದು ತಿಳಿಸಿದರು.

ಡಿಕೆಶಿ ಇಂಧನ ಸಚಿವರಾಗಿದ್ದಾಗ ಒಳ ಒಪ್ಪಂದ, ಅಕ್ರಮ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು " ತಡ ಮಾಡೋದೆ ಬೇಡಿ, ಸರಕಾರ ತನಿಖೆ ಮಾಡಲಿ. ಕೇವಲ ಸ್ಟೇಟ್ ಮೆಂಟ್ ನೀಡದೆ ತನಿಖೆ ಮಾಡಲಿ. ಸಿಬಿಐ, ಇಡಿಗಾದರು ವಹಿಸಿ ತನಿಖೆ ಮಾಡಿಸಲಿ ಎಂದು ತಿಳಿಸಿದರು.

ಇನ್ನು ಡಿಕೆ ಶಿವಕುಮಾರ್ ಅವರನ್ನು ಸರಕಾರ ಕಟ್ಟಿ ಹಾಕಲು ಪ್ರಯತ್ನ ವಿಚಾರಕ್ಕೆ ಮಾತನಾಡಿದ ಅವರು ಹಗ್ಗ, ಸರಪಳಿ ಬೇಕಿದ್ದರೆ ಕಳಿಸುವೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+