ಚಿತ್ರದುರ್ಗ ಸಮಾವೇಶ: ಮುಖ್ಯಮಂತ್ರಿ ಟ್ವಿಟ್ಟರ್ ನಲ್ಲೇನಿದೆ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಿತ್ರದುರ್ಗ, ಮೇ 13: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಜನ ನಮನ- ಜನ ಮನನ ಎಂಬ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಯುತ್ತಿದೆ.

ಈಗಾಗಲೇ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಆರಂಭವಾಗಿದ್ದು ಸಾವಿರು ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅರಸೀಕೆರೆಯ ಶಿಲ್ಪಿಗಳು ವೇದಿಕೆಯನ್ನು ತಯಾರಿಸಿದ್ದು, ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ ವೇದಿಕೆ ನಿರ್ಮಾಣವಾಗಿದೆ. ವಿಶಾಲ ಮೈದಾನದಲ್ಲಿ 30,000 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ನಡೆಯಲಿರುವ ಬೆಂಗಳೂರು ವಿಭಾಗ ಮಟ್ಟದ ಫಲಾನುಭವಿಗಳ ಸಮಾವೇಶಕ್ಕೆ 'ಸೌಲಭ್ಯ ವಿತರಣೆಯೇ ಸಂಭ್ರಮ' ಎಂದು ಹೆಸರಿಡಲಾಗಿದೆ. ಇದಕ್ಕೆ 25,000 ಫಲಾನುಭವಿಗಳು ಆಗಮಿಸುತ್ತಿದ್ದಾರೆ.[ಸಿದ್ದು ಸರಕಾರಕ್ಕೆ ನಾಲ್ಕು ವರ್ಷ: ಕಪ್ಪುಚುಕ್ಕೆಗಳು ಒಂದಾ ಎರಡಾ?]

ನಿನ್ನೆ (ಮೇ 12) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 'ನುಡಿದಂತೆ ನಡೆಯುತ್ತಿದ್ದೇವೆ- ಸಾಧನೆಯ ನಾಲ್ಕು ವರ್ಷಗಳು' ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ್ದ ಸಿದ್ದರಾಮಯ್ಯ, ಸರ್ಕಾರದ ಸಾರ್ಥಕ ನಾಲ್ಕು ವರ್ಷಗಳ ಸಾಧನೆಯ ಬಗ್ಗೆ ಮಾತನಾಡಿದ್ದರು. ಇಂದು ಸಹ ಚಿತ್ರ ದುರ್ಗದಲ್ಲಿ ಜನರಿಗೆ ರಾಜ್ಯ ಸರ್ಕಾರದ ಸಾಧನೆಗಳ ಪರಿಚಯಮಾಡಲಾಗುತ್ತಿದೆ.

ಚಿತ್ರದುರ್ಗದಲ್ಲಿ ನಡೆಯುತ್ತಿರುವ ಸಮಾವೇಶದ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಗಳು ಓಡಾಡುತ್ತಿವೆ. ನಿಮಗಾಗಿ ಅವುಗಳಲ್ಲಿ ಒಂದಷ್ಟು ಟ್ವೀಟ್ ಗಳು ಇಲ್ಲಿವೆ.[ನಾನೇ ಮುಂದಿನ ಮುಖ್ಯಮಂತ್ರಿ ಅನ್ನುತ್ತಿದ್ದ ಸಿದ್ದರಾಮಯ್ಯ ಉಲ್ಟಾ!]

ಸೌಲಭ್ಯ ವಿತರಣೆಯೇ ಸಂಭ್ರಮ

ಚಿತ್ರದುರ್ಗದಲ್ಲಿ ನಡೆಯುತ್ತಿರುವ 'ಸೌಲಭ್ಯ ವಿತರಣೆಯೇ ಸಂಭ್ರಮ' ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಯುವಕರಿಗೆ ಟ್ಯಾಕ್ಸಿ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

ನುಡಿದಂತೆ ನಡೆದಿದ್ದೇವೆ

ನಾಲ್ಕು ವರ್ಷದ ಹಿಂದೆ ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದೀರಿ. ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ನಾವಿಂದು ಪಯಣಿಸುತ್ತಿದ್ದೇವೆ ಎಂದು ಸಿಎಂ ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ.

ಯೋಜನೆಗಳು ಫಲಾನುಭವಿಗಳನ್ನು ತಲುಪಲಿ

ಸರ್ಕಾರದ ಜನ ಕಲ್ಯಾಣ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುವಂತೆ ನೋಡಿಕೊಳ್ಳುವತ್ತ ನಮ್ಮ್ ದೃಷ್ಟಿ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಸಾವಿರಾರು ಜನರ ಉಪಸ್ಥಿತಿ

ಸೌಲಭ್ಯಗಳ ವಿತರಣೆಯೇ ಸಂಭ್ರಮ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಉಪಸ್ಥಿತರಿರುವ ಚಿತ್ರವನ್ನೂ ಟ್ವೀಟ್ ಮಾಡಲಾಗಿದೆ.

ನಾಲ್ಕು ವರ್ಷದ ಸಂಭ್ರಮ

ನಾಲ್ಕು ವರ್ಷದ ಸಂಭ್ರಮ

2013 ರ ಇದೇ ದಿನ ಅಂದರೆ ಮೇ 13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ್ದರು. ಅನ್ನಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಶಾದಿ ಭಾಗ್ಯ, ರಾಜೀವ್ ಆರೋಗ್ಯ, ಮನಸ್ವಿನಿ, ಮಾತೃಪೂರ್ಣ, ಇಂದಿರಾ ಕ್ಯಾಂಟಿನ್ ಸೇರಿದಂತೆ ಸಿದ್ದರಾಮಯ್ಯ ಸರ್ಕಾರ ನೀಡಿದ ಹತ್ತು ಹಲವು ಯೋಜನೆಗಳು ಜನಪ್ರಿಯವೂ ಆಗಿ, ಅಷ್ಟೇ ಟೀಕೆಗೂ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka chief minister Siddaramaiah government has completed successful 4 years today. The government is celebrating 4th year anniversary in Chitradurga today.
Please Wait while comments are loading...