• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಪುಟ ವಿಸ್ತರಣೆ: ಬ್ರೇಕಿಂಗ್ ನ್ಯೂಸ್ ಕೊಟ್ಟ ಸಚಿವ ಕೆ.ಎಸ್.ಈಶ್ವರಪ್ಪ

|

ಚಿತ್ರದುರ್ಗ, ಜೂನ್ 12: ಯಡಿಯೂರಪ್ಪನವರ ಸರಕಾರದ ಸಂಪುಟ ವಿಸ್ತರಣೆಯ ಬಗ್ಗೆ ಗ್ರಾಮೀಣಾಭಿವೃದ್ದಿ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಯೊಂದನ್ನು ಕೊಟ್ಟಿದ್ದಾರೆ.

   Jonty Rhodes Shares Viral Video Of People Playing Cricket In Quarantine | Oneindia Kannada

   ಜಿಲ್ಲೆಯ ಹೊಳಲ್ಕೆರೆಯಲ್ಲಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಈಶ್ವರಪ್ಪ,"ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ಸಂಪುಟ ವಿಸ್ತರಣೆಯಾಗಲಿದೆ"ಎಂದು ಹೇಳಿದರು.

   ಬಿಜೆಪಿಯಲ್ಲಿ ಒತ್ತಡಕ್ಕೆ ಮಣಿದು ಯಾರಿಗೂ ಟಿಕೆಟ್ ನೀಡಲ್ಲ: ಸಚಿವ ಈಶ್ವರಪ್ಪ

   "ಮುಂದಿನ ತಿಂಗಳು ಸಂಪುಟದಲ್ಲಿ ಹಲವು ಬದಲಾವಣೆಯಾಗಲಿದೆ. ಅನುಭವಿ ಶಾಸಕರಿಗೆ ಸಚಿವ ಸ್ಥಾನ ಖಂಡಿತ ಸಿಗಲಿದೆ. ನಿಷ್ಠರನ್ನು ಪಕ್ಷ ಯಾವುತ್ತೂ ಮರೆಯುವುದಿಲ್ಲ"ಎಂದು ಈಶ್ವರಪ್ಪ ಹೇಳಿದರು.

   "ಕ್ಷೇತ್ರದ ಶಾಸಕ ಎಂ.ಚಂದ್ರಪ್ಪನವರಿಗೆ ಎಲ್ಲಾ ಅರ್ಹತೆಗಳಿದೆ. ಅವರಿಗೆ ಸಚಿವ ಸ್ಥಾನ ಸಿಗಬೇಕಾಗಿತ್ತು. ಅದ್ಯಾಕೆ ಸ್ಥಾನ ತಪ್ಪಿತೋ ಗೊತ್ತಿಲ್ಲ. ಈ ಬಾರಿ ಅವರು ಸಚಿವರಾಗುವುದು ಖಂಡಿತ"ಎಂದು ಈಶ್ವರಪ್ಪ ಎಂದು ಹೇಳಿದರು.

   "ಬಿಜೆಪಿಯಲ್ಲಿರುವ ಎಲ್ಲಾ ಕಾರ್ಯಕರ್ತರಿಗೂ ಎಂಎಲ್ಸಿ ಟಿಕೆಟ್ ಕೇಳುವ ಅರ್ಹತೆ ಇದೆ. ಜಾತಿವಾರು ಟಿಕೆಟ್ ‌ಕೊಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರ ವರ್ಚಸ್ಸು ಕುಂದುತ್ತದೆ ಎನ್ನುವುದು ಮಾಧ್ಯಮಗಳ ಭ್ರಮೆಯಷ್ಟೇ" ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದರು. ಹೇಳಿದರು.

   "ಕೇಂದ್ರದ ನಾಯಕರು ಪ್ರಮುಖ ಕಾರ್ಯಕರ್ತರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ. ಜೂನ್ 15 ರಂದು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ" ಎಂದು ಈಶ್ವರಪ್ಪ ಹೇಳಿದರು.

   English summary
   Karnataka Cabinet Expansion Soon After MLC Election : KS Eshwarappa.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X