ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಯೋಗ ಸಾಧನೆ ಪುಟಗಳು

ಚಿತ್ರದುರ್ಗ, ಜೂ. 21: ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವ ಸುಸಂದರ್ಭದಲ್ಲಿ ಕರ್ನಾಟಕದ ಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಅವರನ್ನು ನೆನಪು ಮಾಡಿಕೊಳ್ಳಲೇಬೇಕು.

ಆಯುರ್ವೇದ ಸಾಧಕ, ವ್ಯಾಯಾಮಕ್ಕೆ ಹೊಸ ಅರ್ಥ ನೀಡಿದ ರಾಘವೇಂದ್ರ ಸ್ವಾಮಿಗಳ ಜೀವನನ್ನು ಅಕ್ಷರದಲ್ಲಿ ಚಿತ್ರಿಸಲು ಸಾಧ್ಯವಿಲ್ಲ. 'ಅಭಿನವ ಧನ್ವಂತರಿ' ಎಂದೇ ಖ್ಯಾತಿ ಪಡೆದಿದ್ದ ಅವರ ಮಾರ್ಗದರ್ಶನ ಸ್ಮರಿಸುವುದು ಪ್ರತಿದಿನದ ಕೆಲಸವಾಗಬೇಕಿದೆ.

1996 ರಲ್ಲಿ ಇಹಲೋಕದ ಯಾತ್ರೆ ಮುಗಿಸಿದ ತಿರುಕರು ತಮ್ಮ ಜೀವನದ ಅಷ್ಟೂ ಭಾಗವನ್ನುಬಡ ಮಕ್ಕಳಿಗಾಗಿ, ಯೋಗಕ್ಕೆ ಎಂದೇ ಮೀಸಲಿರಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಆಶ್ರಮ ಸ್ಥಾಪಿಸಿ ಲಕ್ಷಾಂತರ ಮಕ್ಕಳ ಬದಿಕಿಗೆ ಬೆಳಕಾದ ಸ್ವಾಮೀಜಿಗಳ ಜೀವನದ ದೃಶ್ಯಗಳನ್ನು ನೆನೆಯೋಣ....

ನಾಟಿ ವೈದ್ಯ

ನಾಟಿ ವೈದ್ಯ

ನಾಟಿ ವೈದ್ಯರಾಗಿ ಗುರುತಿಸಿಕೊಂಡಿದ್ದ ಸ್ವಾಮೀಜಿ, ಅನೇಕ ಮಾರಕ ಕಾಯಿಲೆಗಳನ್ನು ಗುಣಮಾಡಿದ್ದರು. ನೂರಾರು ಜನ ಅವರ ಬಳಿ ಔಷಧ ಪಡೆದುಕೊಳ್ಳಲು ಆಗಮಿಸುಯತ್ತಿದ್ದರು.

ವ್ಯಾಯಾಮ ಮೇಸ್ಟ್ರು

ವ್ಯಾಯಾಮ ಮೇಸ್ಟ್ರು

ರಾಘವೇಂದ್ರ ಸ್ವಾಮಿ ಅವರನ್ನು ಮೊದಲಿಗೆ ವ್ಯಾಯಾಮ ಮೇಸ್ಟ್ರು ಎಂದೇ ಗುರುತಿಸಲಾಗುತ್ತಿತ್ತು. ಅವರು ರಾಜ್ಯದ ವಿವಿಧೆಡೆ ಸ್ಫಾಪಿಸಿದ ವ್ಯಾಯಾಮ ಶಾಲೆಗಳು ಇಂದಿಗೂ ಪಟುಗಳನ್ನು ತಯಾರು ಮಾಡುತ್ತಿವೆ.

ಯೋಗಾಸನ

ಯೋಗಾಸನ

ಸ್ಮಾಮೀಜಿಯವರು ತಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಂಡಿದ್ದರು. ಹಾಗಾಗಿಯೇ 96 ವರ್ಷದ ದೀರ್ಘ ಬದುಕನ್ನು ನಡೆಸಿದರು. 1996 ರಲ್ಲಿ ವಯೋಸಹಜ ಉಸಿರಾಟ ಸಮಸ್ಯೆಯಿಂದ ತೊಂದರಗೆ ಒಳಗಾಗುವರೆಗೂ ಯಾವುದೇ ಆರೋಗ್ಯ ಸಮಸ್ಯೆ ಅವರನ್ನು ಕಾಡಿರಲಿಲ್ಲ.

ಜನರ ಒತ್ತಾಸೆಗೆ ಮಣಿದಿದ್ದರು

ಜನರ ಒತ್ತಾಸೆಗೆ ಮಣಿದಿದ್ದರು

ರಾಜ್ಯದ ಹಲವೆಡೆ ವ್ಯಾಯಾಮ ಶಾಲೆ ನಿರ್ಮಿಸುತ್ತ ಚಿತ್ರದುರ್ಗಕ್ಕೆ ಬಂದ ಸ್ವಾಮೀಜಿ ಅವರು ತೆರಳಲು ಮುಂದಾಗಿದ್ದರು. ಆದರೆ ಜನರ ಒತ್ತಾಸೆಗೆ ಮಣಿದು ಮಲ್ಲಾಡಹಳ್ಳಿಯಲ್ಲೇ ಶಾಲೆ ಸ್ಥಾಪಿಸಿ ಕೊನೆಯವರೆಗೂ ಅಲ್ಲೇ ನೆಲೆ ನಿಂತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+