• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಡಿಮೆ ಖರ್ಚಿನಲ್ಲಿ ಕಟ್ಟಡ ನಿರ್ಮಾಣ; ಚಿತ್ರದುರ್ಗದ ಐಐಎಸ್ ಸಿಯಿಂದ ಹೊಸ ಪ್ರಯೋಗ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಸೆಪ್ಟೆಂಬರ್ 23: ಕಡಿಮೆ ಬಂಡವಾಳದಲ್ಲಿ ಕಟ್ಟಡ ನಿರ್ಮಾಣ ಮಾಡಬಹುದಾದ ವಿನೂತನ ಪ್ರಯೋಗವೊಂದು ಚಿತ್ರದುರ್ಗದ ಐಐಎಸ್ ಸಿ ವತಿಯಿಂದ ನಡೆದಿದೆ. ಚಳ್ಳಕೆರೆ ತಾಲೂಕಿನ ಭಾರತೀಯ ವಿಜ್ಞಾನ ಸಂಸ್ಥೆ ( ಡಿಆರ್ ಡಿಒ ಸಂಸ್ಥೆ) ಹಲವು ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಹೆಸರುವಾಸಿ. ಇದೀಗ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಸಂಸ್ಥೆಯ ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜೀಸ್ ವಿಭಾಗ ಮತ್ತೊಂದು ಆವಿಷ್ಕಾರಕ್ಕೆ ಮುಂದಾಗಿದೆ.

ಕಡಿಮೆ ಬಂಡವಾಳದಲ್ಲಿ ಕಟ್ಟಡವನ್ನು ನಿರ್ಮಿಸುವ ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿಕೊಡಲು ಸಿದ್ಧವಾಗಿದ್ದು, ಕೆಲವು ಭಾಗದಲ್ಲಿ ಈ ಕುರಿತ ಪ್ರಯೋಗವನ್ನೂ ಮಾಡಿದೆ. ಅದೇನದು ಹೊಸ ತಂತ್ರಜ್ಞಾನ? ಈ ಪ್ರಯೋಗದ ಫಲಿತಾಂಶವೇನು ಎಂಬುದನ್ನು ಮುಂದೆ ನೋಡೋಣ...

 ಸೆಂಟರ್ ಫಾರ್ ಸೆಸ್ಟೈನಬಲ್ ಟೆಕ್ನಾಲಜೀಸ್ ವಿಭಾಗದ ಪ್ರಯೋಗ

ಸೆಂಟರ್ ಫಾರ್ ಸೆಸ್ಟೈನಬಲ್ ಟೆಕ್ನಾಲಜೀಸ್ ವಿಭಾಗದ ಪ್ರಯೋಗ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಹತ್ತಿರವಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜೀಸ್ ವಿಭಾಗ ದೇಶದ ಜನತೆಗೆ ಹೊಸ ಹೊಸ ತಂತ್ರಜ್ಞಾನವನ್ನು ಪರಿಚಯಿಸಿಕೊಂಡು ಬರುತ್ತಿದೆ. ಏಳು ವರ್ಷಗಳ ಹಿಂದೆ ಪ್ರಾರಂಭವಾದ ಈ ಭಾರತೀಯ ವಿಜ್ಞಾನ ಸಂಸ್ಥೆ, ದೇಶದ ವಿವಿಧ ಭಾಗಗಳಲ್ಲಿ ಹೊಸ ಹೊಸ ಶೈಲಿಯ ಕಟ್ಟಡಗಳನ್ನು ಕಟ್ಟಿ ಹೊಸ ತಂತ್ರಜ್ಞಾನದ ಮೂಲಕ ಎಲ್ಲರ ಗಮನ ಸೆಳೆದಿದೆ.

ಭಾರತದ ಬಹು ತರಂಗಾಂತರ ಉಪಗ್ರಹ 'AstroSat'ನಿಂದ ಅಪರೂಪದ ಆವಿಷ್ಕಾರ

 ಹೊಸ ರೀತಿಯ ಇಟ್ಟಿಗೆ ತಯಾರಿ

ಹೊಸ ರೀತಿಯ ಇಟ್ಟಿಗೆ ತಯಾರಿ

ಈ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಬಂಡವಾಳದಲ್ಲಿ ಕಟ್ಟಡ ಕಟ್ಟಲು, ಸ್ಥಳೀಯವಾಗಿ ಸಿಗುವ ಮಣ್ಣು ಮತ್ತು ಸಿಮೆಂಟ್ ಅನ್ನು ಮಿಶ್ರಣ ಮಾಡಿ ಯಂತ್ರಗಳ ಸಹಾಯದಿಂದ ಇಟ್ಟಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಸುಭದ್ರವಾಗಿ ಕಟ್ಟಡ ನಿಲ್ಲುವಂತಹ ಇಟ್ಟಿಗೆಗಳನ್ನು ಸಂಸ್ಥೆಯ ಕ್ಯಾಂಪಸ್ ಒಳಗೆ ತಯಾರಾಗುತ್ತಿವೆ. ವಿನೂತನವಾದ ವಿನ್ಯಾಸದ ಇಟ್ಟಿಗೆಗಳನ್ನು ತಯಾರಿಸುವ ಪ್ರಯತ್ನಕ್ಕೆ ಇಂಜಿನಿಯರ್ ಗಳು ಕೈ ಹಾಕಿದ್ದಾರೆ.

 ತರಬೇತಿಯನ್ನೂ ನೀಡಲಾಗುತ್ತಿದೆ

ತರಬೇತಿಯನ್ನೂ ನೀಡಲಾಗುತ್ತಿದೆ

ಈಗಾಗಲೇ ಜಿಲ್ಲೆಯ ನಾಯಕನಹಟ್ಟಿ ಗ್ರಾಮ ಹಾಗೂ ಗೌರಿಪುರ ಗ್ರಾಮದ ಸಮುದಾಯ ಭವನವನ್ನು ಇದೇ ತಂತ್ರಜ್ಞಾನದಿಂದ ಕಟ್ಟಲಾಗಿದೆ. ಇದರ ಜೊತೆಗೆ ಜನಸಾಮಾನ್ಯರಿಗಾಗಿ ಕಡಿಮೆ ವೆಚ್ಚದಲ್ಲಿ ಸುಮಾರು 50ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯು ಬಯೋ ಗ್ಯಾಸ್, ಅಸ್ತ್ರ ಒಲೆ, ಸಾಯಿಲ್ ಬಾಕ್ಸ್ ಕಟ್ಟೆಗಳು ಸೇರಿದಂತೆ ಹಲವು ಆವಿಷ್ಕಾರಗಳನ್ನು ನಡೆಸಿದೆ. ಈ ಕುರಿತು ಇಂಜಿನಿಯರ್ ಗಳಿಗೆ, ಕಾಂಟ್ರಾಕ್ಟ್ ದಾರರಿಗೆ, ಆರ್ಕಿಟೆಕ್ಟ್ ಗಳಿಗೆ ಸಂಸ್ಥೆಯಲ್ಲಿ ತರಬೇತಿಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾದಲ್ಲಿ ಅಗ್ಗದ ವೆಂಟಿಲೇಟರ್‌ ಸಂಶೋಧಿಸಿದ ಸೋಮವಾರಪೇಟೆ ವೈದ್ಯ

  Modi ವಿದೇಶಿ ಪ್ರವಾಸದ ಗುಟ್ಟು ರಟ್ಟು | Oneindia Kannada
   ಸ್ವದೇಶಿ ಚಿಂತನೆಯ ಫಲ

  ಸ್ವದೇಶಿ ಚಿಂತನೆಯ ಫಲ

  ಸಂಸ್ಥೆಯು ಸ್ವದೇಶಿ ಉತ್ಪನ್ನಗಳ ಕಡೆ ಗಮನ ಹರಿಸುತ್ತಿದ್ದು, ಈ ಹೊಸ ಪ್ರಯೋಗ ಆ ಆಲೋಚನೆಯ ಒಂದು ಫಲವೇ ಆಗಿದೆ. ಕ್ಯಾಂಪಸ್ ಒಳಭಾಗದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಈ ನೂತನ ಶೈಲಿಯ ಇಟ್ಟಿಗೆಗಳ ಕಟ್ಟಡಗಳನ್ನು ಪರಿಚಯಿಸಿದ್ದು, ದೇಶೀಯ ಮಟ್ಟದಲ್ಲಿ ಈ ವಿನೂತನ ತಂತ್ರಜ್ಞಾನವನ್ನು ಪರಿಚಯಿಸುವ ಆಲೋಚನೆ ಸಂಸ್ಥೆಗಿದೆ.

  English summary
  IISC of Chitradurga introduced an innovative experiment in construction low-cost building through new type of bricks
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X