ಹೊಳಲ್ಕೆರೆ: ನೀರಿನ ಟ್ಯಾಂಕ್ ವಿಚಾರಕ್ಕೆ ಬಡಿದಾಡಿಕೊಂದ ಪುರಸಭೆ ಸದಸ್ಯರು ಹಾಗೂ ಎಚ್.ಆಂಜನೇಯ ಬೆಂಬಲಿಗರು
ಚಿತ್ರದುರ್ಗ, ಜನವರಿ, 11: ಹೊಳಲ್ಕೆರೆಯಲ್ಲಿ ಪುರಸಭೆ ಸದಸ್ಯರು ಹಾಗೂ ಮಾಜಿ ಸಚಿವ ಎಚ್.ಆಂಜನೇಯ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.
ನೀರಿನ ಟ್ಯಾಂಕ್ ವಿಚಾರವಾಗಿ ಈ ಘಟನೆ ನಡೆದಿದ್ದು ಎನ್ನಲಾಗಿದೆ. ಸದ್ಯ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಮಾಜಿ ಸಚಿವ ಹೆಚ್.ಆಂಜನೇಯ ಬೆಂಬಲಿಗ ಹಾಗೂ ಪುರಸಭೆ ಸದಸ್ಯ ಕೆ.ಸಿ.ರಮೇಶ್ ಹಾಗೂ ಸುಧಾ ಬಸವರಾಜ್ ಗುಂಪಿನ ನಡುವೆ ಜಗಳ ನಡೆದಿದೆ. ಕೆಲ ದಿನಗಳ ಹಿಂದೆ ನಡೆದ ಹೊಡೆದಾಟದ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

ಹೊಳಲ್ಕೆರೆ ಪಟ್ಟಣದ ಗೃಹಮಂಡಳಿ ಲೇಔಟ್ನಲ್ಲಿರುವ ನೀರಿನ ಟ್ಯಾಂಕ್ ನೆಲಸಮ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆ ನಡೆದಿರಬಹುದು ಎನ್ನಲಾಗುತ್ತಿದೆ. ಕೆ.ಸಿ.ರಮೇಶ್ ಹಾಗೂ ಸುಧಾ ಬಸವರಾಜ್ ಬೆಂಬಲಿಗರ ನಡುವೆ ಗಲಾಟೆಯಾಗಿದ್ದು, ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ.
ಅಲ್ಲದೇ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೊಳಲ್ಕೆರೆ ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ಎದುರಲ್ಲೇ ಎರಡು ಗುಂಪಿನ ಸದಸ್ಯರು ಹಾಗೂ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಎರಡು ಗುಂಪುಗಳಿಂದ ಪ್ರತಿದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications