ಅಂಜನಾದ್ರಿಯಿಂದ ರಾಮ ಜನ್ಮಭೂಮಿಗೆ ಹಿರಿಯೂರು ಯುವಕನ ಸೈಕಲ್ ಜಾಥಾ

ಚಿತ್ರದುರ್ಗ, ಏಪ್ರಿಲ್ 12: ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಸೋಂಕು ಅಬ್ಬರಿಸಿ ಬೊಬ್ಬಿರಿಯುತ್ತಿರುವ ಈ ಸಮಯದಲ್ಲಿ ಇಲ್ಲೊಬ್ಬ ಯುವಕ ಕೊರೊನಾ ಮುಕ್ತ ಸಮಾಜ ಮಾಡಲು ಆಂಜನೇಯನ ಜನ್ಮ ಭೂಮಿಯಿಂದ ರಾಮ ಜನ್ಮಭೂಮಿಯವರೆಗೂ ಸೈಕಲ್ ಮೂಲಕ ಜಾಥಾ ಹೊರಟಿದ್ದಾನೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಾಹಸಿಗರಿಗೇನು ಕೊರತೆಯಿಲ್ಲ. ಒಂದಲ್ಲ ಒಂದು ಸಾಹಸಕ್ಕೆ ಇಲ್ಲಿನ ಯುವಕರು ಕೈ ಹಾಕುತ್ತಲೇ ಇರುತ್ತಾರೆ. ಹಾಗೆಯೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದ ಕರಿಯಪ್ಪ ಎಂಬ ಯುವಕ ಅಯೋಧ್ಯೆಯವರೆಗೂ ಸೈಕಲ್ ಜಾಥಾ ಹೋಗಲಿದ್ದಾನೆ.

ಕೊರೊನಾ ಮುಕ್ತ ಸಮಾಜ ನಿರ್ಮಾಣ, ದೇಶವನ್ನು ಪ್ರಾಮಾಣಿಕತೆಗೆ ಕೊಂಡ್ಯೂಬೇಕು, ಉತ್ತಮ ಆಹಾರ ಪದ್ದತಿ ಅನುಸರಿಸಬೇಕು, ಯುವಕರ ಭಕ್ತಿಯೇ ರಾಮ ಶಕ್ತಿ ಹಾಗೂ ಜೀವ ಜಲ ಉಳಿವಿಗಾಗಿ ಹೋರಾಟ ಇಂತಹ ಉತ್ತಮ ಅಂಶಗಳನ್ನು ಮುಂದಿಟ್ಟುಕೊಂಡು ಕೊಪ್ಪಳ ಜಿಲ್ಲೆಯ "ಆಂಜನಾದ್ರಿ ಬೆಟ್ಟದಿಂದ ಶ್ರೀರಾಮ ಜನ್ಮಭೂಮಿವರೆಗೆ' ಸುಮಾರು 25ರಿಂದ 30 ದಿನಗಳ ಸೈಕಲ್ ಜಾಥವನ್ನು ಕೈಗೊಂಡಿದ್ದಾನೆ.

Hiriyuru Youth Cycle Jatha From Anjanadri To Ram Janmabhoomi Ayodhya

ಇದಕ್ಕೆ ತಗಲುವ ಒಟ್ಟು 25ರಿಂದ 30 ಸಾವಿರ ಹಣದ ಖರ್ಚು ವೆಚ್ಚವನ್ನು ಸ್ನೇಹಿತರು ಹಾಗೂ ದಾನಿಗಳು ನೀಡಿದರೆ ಅವರಿಂದ ತೆಗೆದುಕೊಳ್ಳುವುದು ಹಾಗೂ ತನ್ನ ಸ್ವಂತ ಖರ್ಚಿನಿಂದಲೂ ಕರ್ನಾಟಕ, ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮೂಲಕ ಉತ್ತರಪ್ರದೇಶ ತಲುಪಿ ರಾಮ ಜನ್ಮಭೂಮಿ ಅಯೋಧ್ಯೆ ಪ್ರವೇಶ ಮಾಡಲಿದ್ದಾನೆ.

Hiriyuru Youth Cycle Jatha From Anjanadri To Ram Janmabhoomi Ayodhya

ಒಟ್ಟು 2000 ಕಿಲೋಮೀಟರ್ ಸೈಕಲ್ ಜಾಥಾದ ಯುವಕನ ಸಾಧನೆಗೆ ರೈತ ಮುಖಂಡ ಕಸವನಹಳ್ಳಿ ರಮೇಶ್ ಚಾಲನೆ ನೀಡಿದರು. ಹುಟ್ಟಿದೂರಿನಿಂದ ಆರಂಭಗೊಂಡಿರುವ ಸೈಕಲ್ ಜಾಥಾ ಹಿರಿಯೂರು ನಗರದ ಶ್ರೀ ತೇರುಮಲ್ಲೇಶ್ವರ ದೇವಸ್ಥಾನ ಹಾಗೂ ರಾಮ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆಯಲಿದ್ದಾನೆ.

Hiriyuru Youth Cycle Jatha From Anjanadri To Ram Janmabhoomi Ayodhya

ಸೋಮವಾರ ರಾತ್ರಿ ಚಿತ್ರದುರ್ಗದಲ್ಲಿ ವಾಸ್ತವ್ಯ ಮಾಡಿ, ನಂತರ ನಾಳೆ ಮಧ್ಯಾಹ್ನ ಮೂರು ಗಂಟೆಗೆ ಜಾಥಾ ಮುಂದುವರೆಸಲಿದ್ದಾರೆ. ಮಾರ್ಗ ಮಧ್ಯೆ ಸಿಗುವ ದೇವಸ್ಥಾನ ಅಥವಾ ಆಶ್ರಮಗಳಲ್ಲಿ ವಾಸ್ತವ್ಯ ತಂಗಿ, ಮುಂದೆ ಪ್ರಯಾಣ ನಡೆಸಲಿದ್ದಾನೆ. ಸೈಕಲ್ ಜಾಥಾ ಯಶಸ್ವಿಯಾಗಿ, ಸುರಕ್ಷಿತವಾಗಿ ಬರುವಂತೆ ಕರಿಯಣ್ಣನ ಸ್ನೇಹಿತರು ಶುಭ ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+