ರಾಜ್ಯದಲ್ಲೇ ಅತೀ ಹೆಚ್ಚು ಉಷ್ಣಾಂಶ ದಾಖಲಾಗುವ ಚಿತ್ರದುರ್ಗ ಜಿಲ್ಲೆಯ ಈ ಭಾಗದಲ್ಲಿ 30 ವರ್ಷಗಳ ಬಳಿಕ ಭಾರೀ ಮಳೆ-ಇತಿಹಾಸ ಸೃಷ್ಟಿ

Heavy Rain: ರಾಜ್ಯದಲ್ಲಿ ಮಳೆರಾಯ ಮತ್ತೆ ಆರ್ಭಟ ಶುರು ಮಾಡಿದ್ದಾನೆ. ಇನ್ನು ಮಧ್ಯ ಕರ್ನಾಟಕದ ಬಯಲು ಸೀಮೆಯ ಪ್ರದೇಶವಾದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಅದರಲ್ಲೂ ರಾಜ್ಯದಲ್ಲೇ ಅತೀ ಹೆಚ್ಚು ಬಿಸಿಲು ದಾಖಲಾಗುವ ಜಿಲ್ಲೆಯ ಈ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಈ ಬಾರಿ ಇತಿಹಾಸ ಸೃಷ್ಟಿಯಾದಂತಾಗಿದೆ.

ಅಂದಹಾಗೆ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದಲ್ಲೂ ವರುಣನ ಆರ್ಭಟ ಜೋರಾಗಿತ್ತು. ಇತ್ತ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಅತೀ ಹೆಚ್ಚು ವಾರ್ಷಿಕ ಮಳೆಯಾಗುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ 30 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಮಳೆಯಾಗಿದ್ದು, ಹೋಬಳಿಯ 5 ಕೆರೆಗಳು ಕೋಡಿ ಬಿದ್ದಿವೆ.

Heavy rain after 30 years in this part of Chitradurga district

ರಾಜ್ಯದಲ್ಲೆ ಅತೀ ಕಡಿಮೆ ಮಳೆ ಬೀಳುವ ಪ್ರದೇಶವೆಂದು ಗುರುತಿಸಿಕೊಂಡಿರುವ ನಾಯಕನಹಟ್ಟಿಯಲ್ಲಿ ಈ ವರ್ಷದಲ್ಲಿ ದಾಖಲೆ ಮಟ್ಟದಲ್ಲಿ ಮಳೆ ಸುರಿದಿದೆ. ಇನ್ನು ಸತತವಾಗಿ ಬರಗಾಲ ಪಟ್ಟಿಯಲ್ಲಿ ಸಿಲುಕಿದ್ದ ಜಿಲ್ಲೆಯು ಈ ಬಾರಿ ಮಳೆರಾಯನ ಕೃಪೆಯಿಂದ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಂಡಿದೆ. ಇನ್ನಿ ಭಾರೀ ಮಳೆಯಿಂದ ನಾಯಕನಹಟ್ಟಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಲವು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ನಾಯಕನಹಟ್ಟಿ ಹೋಬಳಿಯ ರೇಖಲಗೆರೆ, ಮನಮೈನಹಟ್ಟಿ, ಗುಂತಕೋಲಮ್ಮನಹಳ್ಳಿ ಕೆರೆ, ಭೀಮನ ಕೆರೆ ಮತ್ತು ವರವು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದೆ. ‌ತಿಪ್ಪೇರುದ್ರಸ್ವಾಮಿಗಳು ನಿರ್ಮಿಸಿದ್ದ ದೊಡ್ಡ ಕೆರೆ 16 ಅಡಿ ಆಳವಿದ್ದು, 10 ಅಡಿ ನೀರು ಸಂಗ್ರಹವಾಗಿದೆ. ಸ್ವಾಮೀಜಿಯವರು ನಿರ್ಮಿಸಿದ ಚಿಕ್ಕ 12 ಅಡಿ ಸಾಮರ್ಥ್ಯದ ಕೆರೆಯಲ್ಲೂ 10 ಅಡಿ ನೀರು ಬಂದಿದೆ.

1999ರಲ್ಲಿ ಚಿಕ್ಕ ಕೆರೆ ಕೋಡಿ ಹರಿದಿತ್ತು. 25 ವರ್ಷಗಳ ನಂತರ ಅಂದರ ಈ ಬಾರಿ ಹೆಚ್ಚಿನ ನೀರು ಸಂಗ್ರಹವಾಗಿದೆ. ತಳಕು ಸಮೀಪದ ತಿಪ್ಪಯ್ಯನ ಕೋಟೆ ಕೆರೆ ತುಂಬಿದ್ದು, ಕೆರೆಗೆ ನೀರು ಒದಗಿಸುವ ದೊಡ್ಡ ಹಳ್ಳದಲ್ಲಿ ಭರಪೂರ ನೀರು ಹರಿಯುತ್ತಿದ್ದು, ಇಂದು ಮತ್ತೆ ಮಳೆಯಾದರೆ ಯಾವಾಗ ಬೇಕಾದರೂ ಕೋಡಿ ಹರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ಕಳೆದ 30 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ವಾರ್ಷಿಕ ವಾಡಿಕೆ ಮಳೆ 415.9 ಮಿಲಿ ಮೀಟರ್ ಮಳೆಯಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ 113.8 ಮಿಲಿ ಮೀಟರ್ ಮಳೆ ಸುರಿದಿದೆ. ಕಳೆದೊಂದು ವಾರದಿಂದ ಪ್ರತಿದಿನ ಮಳೆ ಸುರಿಯುತ್ತಿರುವುದರಿಂದ ಭೂಮಿ ತಂಪಾಗಿದೆ. ಮಳೆಯಿಂದ ಬಂದ ನೀರು ಸರಾಗವಾಗಿ ಸಣ್ಣ-ಪುಟ್ಟ ಹಳ್ಳ, ಚೆಕ್ ಡ್ಯಾಂ ಸೇರುತ್ತದೆ.

ಇತ್ತ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಅಲ್ಪ ಪ್ರಮಾಣದಲ್ಲಿ ಒಳಹರಿವು ನೀರು ಹರಿದು ಬರುತ್ತಿದೆ. ಇಂದು ಸಹ 925 ಕ್ಯೂಸೆಕ್ ನೀರು ಡ್ಯಾಂಗೆ ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 122.25 ಅಡಿಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+