ಹಿರಿಯೂರಿನಲ್ಲಿ ಲಾಕ್ ಡೌನ್ ಗೆ ಡೋಂಟ್ ಕೇರ್; ರಾಜಾರೋಷವಾಗಿ ನಡೆಯುತ್ತೆ ಜೂಜಾಟ
ಚಿತ್ರದುರ್ಗ, ಏಪ್ರಿಲ್ 22: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಲಾಕ್ ಡೌನ್ ಗೂ ಜನ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಸರ್ಕಾರದ ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ಗುಂಪಾಗಿ ಯಾರ ಭಯವೂ ಇಲ್ಲದೇ ಕೆಲವರು ಜೂಜಾಟದಲ್ಲಿ ತೊಡಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಸಮೀಪದ ಕೃಷ್ಣಾಪುರ ಗ್ರಾಮದಲ್ಲಿ ಪ್ರತಿನಿತ್ಯ ಇಪ್ಪತ್ತೈದಕ್ಕೂ ಹೆಚ್ಚು ಜನರು ಜೂಜಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಜೂಜಾಟಕ್ಕೆ ಅಕ್ಕಪಕ್ಕದ ಹಳ್ಳಿಗಳ ಜನರೂ ಬಂದು ಸೇರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
Recommended Video

ಅತ್ತ ಸರ್ಕಾರ, ಸಾಮಾಜಿಕ ಅಂತರ, ಮಾಸ್ಕ್ ಎಂದೆಲ್ಲಾ ಜಾಗೃತಿ ಮೂಡಿಸುತ್ತಿದ್ದರೆ, ಇತ್ತ ಜನ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಜೂಜಾಟ ನಡೆಸುತ್ತಿದ್ದಾರೆ. ಕೃಷ್ಣಾಪುರ ಗ್ರಾಮದ ಪಕ್ಕದಲ್ಲಿ ರೈತರೊಬ್ಬರ ಜಮೀನಿನ ಹೊಂಗೆ ಮರದಡಿಯಲ್ಲಿ ಕುಳಿತು ಯಾರ ಭಯವಿಲ್ಲದೆ, ಸಾವಿರಗಟ್ಟಲೆ ಹಣ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಏನೂ ಪ್ರಯೋಜನವಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.












Click it and Unblock the Notifications